
ಬೆಳಗಾವಿ,: ನಗರದ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಪ್ರಾದೇಶಿಕ ಆಯುಕ್ತರ ಕಚೇರಿಯ ಪಕ್ಕದಲ್ಲಿ ಕೆ.ಎಂ.ಎಫ್. ಸಂಸ್ಥೆಯ ನಂದಿನಿ ಕ್ಷೀರ ಮಳಿಗೆಯನ್ನು ಬೆಳಗಾವಿ ನಗರ ಉಪ ಪೊಲೀಸ್ ಆಯುಕ್ತರಾದ ರವೀಂದ್ರ ಗಡಾದಿ ಅವರು ಶುಕ್ರವಾರ(ಅ.7) ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಅತೀ ಹೆಚ್ಚು ಜನಸಂದಣಿ ಇರುವ ಜಿಲ್ಲಾಧಿಕಾರಿ ಕಚೇರಿ ಹಾಗೂ ನ್ಯಾಯಾಲಯ ಆವರಣದಲ್ಲಿ ನಂದಿನಿ ಕ್ಷೀರ ಮಳಿಗೆಯನ್ನು ಆರಂಭಿಸಿರುವುದರಿಂದ ಜನರಿಗೆ ಅನುಕೂಲವಾಗಲಿದೆ ಎಂದರು.
ಜಿಲ್ಲಾಧಿಕಾರಿ ಕಚೇರಿಗೆ ಪ್ರತಿದಿನ ಸಾವಿರಾರು ಜನರು ಆಗಮಿಸುತ್ತಾರೆ. ವಿವಿಧ ಬಗೆಯ ತಂಪು ಹಾಲು ಮತ್ತಿತರ ಸಿಹಿ ತಿನಿಸುಗಳ ಮಳಿಗೆಯ ಅಗತ್ಯವಿತ್ತು ಎಂದರು.
ಡಾ. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಸಹಾಯಧನದಲ್ಲಿ ನಂದಿನಿ ಮಳಿಗೆಯನ್ನು ಆರಂಭಿಸಲಾಗಿರುತ್ತದೆ.
ಎಸಿಪಿ ನಾರಾಯಣ ಭರಮನಿ, ರೈತ ಸಂಘದ ಮುಖಂಡರಾದ ಚೂನಪ್ಪ ಪೂಜಾರಿ, ದಲಿತ ಸಂಘಟನೆಯ ಮುಖಂಡರಾದ ಮಲ್ಲೇಶ ಚೌಗಲೆ, ಕೆಎಂಎಫ್ ಮಾರ್ಕೇಟಿಂಗ್ ಮುಖ್ಯಸ್ಥರಾದ ದಯಾನಂದ ಎಸ್
ಮಾರ್ಕೇಟಿಂಗ್ ಅಧಿಕಾರಿ ಮುಜಾಹಿದ್ ಪೀರಜಾದೆ, ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ ಬೆಳಗಾವಿ ಬಸವರಾಜ ಚನ್ನಯ್ಯನವರ, ಜಿಲ್ಲಾ ವ್ಯವಸ್ಥಾಪಕರು ಡಾ.ಬಿ.ಅರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ಬೆಳಗಾವಿ ಬುಜಬುಲ ಪಾಸಾನಿ ಮತ್ತಿತರರು ಉಪಸ್ಥಿತರಿದ್ದರು.
****
Ad9 News Latest News In Kannada