Breaking News

   ರಾಯಣ್ಣ ಶೌರ್ಯ ಪ್ರಶಸ್ತಿ ವಿತರಣಾ ಕಾರ್ಯಕ್ರಮ ಕುರುಬರ ಸಂಘದ ತಾಲೂಕಾ ಅಧ್ಯಕ್ಷರು, ಸುರಕ್ಷಾ ಪ್ಯಾರಾ ಮೆಡಿಕಲ್ ಅಧ್ಯಕ್ಷರು ಡಾ!! ಎಸ್ ಎಸ್ ಪಾಟೀಲ ನೇತೃತ್ವದಲ್ಲಿ

Spread the love

ಮೂಡಲಗಿ: ಗಣರಾಜ್ಯೋತ್ಸವ ಹಾಗೂ ರಾಯಣ್ಣ ಬಲಿದಾನ ದಿವಸದ ಪ್ರಯುಕ್ತ ಆಡು ಕುರಿ ಸಾಕಾಣಿಕೆಯ ಒಂದು ದಿನದ ತರಬೇತಿ ಶಿಬಿರವನ್ನು ಜ 26 ರಂದು ಮುಂಜಾನೆ 9 ರಿಂದ ಸಾಂಯಕಾಲ 6 ರವರೆಗೆ ಸ್ಥಳೀಯ ರೇವಣಸಿದ್ದೇಶ್ವರ ಗವಿ ಮಠದಲ್ಲಿ ಹಮ್ಮಿಕೊಳ್ಳಲಾಗಿದೆ.

ರಾಯಣ್ಣ ಶೌರ್ಯ ಪ್ರಶಸ್ತಿ ವಿತರಣಾ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ತಾಲೂಕಾ ಕುರುಬರ ಸಂಘದ ಅಧ್ಯಕ್ಷರು, ಸುರಕ್ಷಾ ಪ್ಯಾರಾ ಮೆಡಿಕಲ್ ಅಧ್ಯಕ್ಷರು ಡಾ!! ಎಸ್ ಎಸ್ ಪಾಟೀಲ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಸ್ಥಳೀಯ ಸಿದ್ದ ಸಂಸ್ಥಾನ ಮಠದ ಶ್ರೀ ಶ್ರೀಪಾದಬೋಧ ಮಹಾಸ್ವಾಮಿಜಿ, ವಿಜಯಪೂರದ ಅರಕೇರಿ ಮುಮ್ಮೇಟಗುಡ್ಡದ ಅವದೂತಸಿದ್ಧ ಮಹಾರಾಜರು ದಿವ್ಯ ಸಾನಿದ್ಯವಹಿಸುವರು. ಉದ್ಘಾಟಕರಾಗಿ ಕೆ.ಎಮ್.ಎಫ್ ಅದ್ಯಕ್ಷರು ಹಾಗೂ ಅರಭಾಂವಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿ, ಅಧ್ಯಕ್ಷತೆಯನ್ನು ರಾಜ್ಯ ಕುರುಬರ ಸಂಘದ ರಾಜ್ಯಾಧ್ಯಕ್ಷರಾದ ಡಾ!! ರಾಜೇಂದ್ರ ಸಣ್ಣಕ್ಕಿ, ತಾಲೂಕಾಧ್ಯಕ್ಷರು ಡಾ!!. ಎಸ್ ಎಸ್ ಪಾಟೀಲ, ಡೊಳ್ಳು ಬಾರಿಸುವರು ಅರವಿಂದ ದಳವಾಯಿ, ಮುಖ್ಯ ಅತಿಥಿಗಳಾಗಿ ಮಡ್ಡೇಪ್ಪ ತೋಳಿನವರ, ಭೀಮಶಿ ಮಗದುಮ, ವಿಠ್ಠಲ ಪಾಟೀಲ, ಬಸವಂತ ಕಮತಿ, ಹಣಮಂತ ಗುಡ್ಲಮನಿ, ರಾವಸಾಬ ಬೆಳಕೂಡ ಭಾಗವಹಿಸುವರು.

ವಿಶೇಷ ಉಪನ್ಯಾಸಕರಾಗಿ ಸತೀಶ ಶುಗರ್ಸ್ ಎಮ್.ಡಿ ಸಿದ್ಧಾರ್ಥ ವಾಡೇನ್ನವರ, ಪಶು ಸಂಗೋಪನೆ ಎಡಿ ಡಾಮೋಹನ ಕಮತ್, ರಾಣೆಬೆನ್ನೂರಿನ ದೀಪಾ ಕೊಟ್ಟದ ಭಾಗವಹಿಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಹಾಲುಮತ ಮಹಾಸಭಾ ರಾಜ್ಯ ಸಂಚಾಲಕ ಮಾರುತಿ ಮರಡಿ ಮೊ ನಂ 9900991196, ತಾಲೂಕಾ ಕುರುಬರ ಸಂಘದ ಅಧ್ಯಕ್ಷರು ಡಾ!! ಎಸ್ ಎಸ್ ಪಾಟೀಲ ಮೊ ನಂ. 9986243660 ಸಂಪರ್ಕಿಸಲು ಕೋರಿದ್ದಾರೆ.


Spread the love

About Ad9 News

Check Also

ಪ್ರಧಾನಿ ನರೇಂದ್ರ ಮೋದಿಯವರು ಬೆಳಗಾವಿಗೆ ಆಗಮನ ಸ್ಥಳ ಪರಿಶೀಲಿಸಿದ ಬಾಲಚಂದ್ರ ಜಾರಕಿಹೊಳಿ

Spread the love ಬೆಳಗಾವಿ- ಪ್ರಧಾನಿ ನರೇಂದ್ರ ಮೋದಿಯವರು ಬೆಳಗಾವಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರ ಪ್ರಚಾರಾರ್ಥವಾಗಿ ಬೆಳಗಾವಿಗೆ …