ಮೂಡಲಗಿ: ಸರ್ಕಾರದ ಮತ್ತು ಅಧಿಕಾರಿಗಳ ದ್ವಂದ್ವ ನೀತಿಯಿಂದಾಗಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರು ತ್ರಿಶಂಕು ಸ್ಥಿತಿಯಲ್ಲಿದ್ದು ಅನ್ಯಾಯವನ್ನು ಸರಿಪಡಿಸಲು ಆಗ್ರಹಿಸಿ ಅನಿರ್ದಿಷ್ಟವಾಗಿ ಭೋದನೆಯ ಬಹಿಷ್ಕಾರ ಧರಣಿ ಮುಷ್ಕರ ಮಾಡುವುದಾಗಿ ತಿಳಿಸಿದ್ದಾರೆ.
ನಗರದಲ್ಲಿ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಾಥಮಿಕ ಶಾಲಾ ಪದವಿ ಶಿಕ್ಷಕರ ಸಂಘದ ಅದ್ಯಕ್ಷರು ಪ್ರಕಾಶ ಕುರಬೇಟ 28 ರ ಮಂಗಳವಾರದಿಂದ ಬೋಧನಾ ಬಹಿಷ್ಕಾರ, ಅನಿರ್ದಿಷ್ಟಾವದಿ ಧರಣಿ ಮುಷ್ಕರ ಮಾಡಲು ಬೆಂಗಳೂರಿನ ಫ್ರೀಡಂ ಪಾರ್ಕ್‌ಗೆ ಸಾಮೂಹಿಕವಾಗಿ ತೆರಳುವುದಾಗಿ ತಿಳಿಸಿದ್ದಾರೆ.
ನಮ್ಮ ಪದವಿ ಶಿಕ್ಷಕರಿಗೆ ಆದ ಅನ್ಯಾಯದ ಬಗ್ಗೆ ಮುಖ್ಯ ಮಂತ್ರಿಗಳು ಮತ್ತು ಶಿಕ್ಷಣ ಸಚಿವರೊಂದಿಗೆ ನಡೆದ ಮಾತುಕತೆಯಲ್ಲಿ ನಮಗಾದ ಅನ್ಯಾಯ ವನ್ನು ಪರಿಗಣಿಸಿ ಮುಖ್ಯಮಂತ್ರಿಗಳು ನಿಯಮ ತಿದ್ದುಪಡಿಗಾಗಿ ಟಿಪ್ಪಣಿ ಹಾಕಿ ಆದೇಶ ಮಾಡಿದ್ದಾರೆ, ಆದರೆ ಶಿಕ್ಷಣ ಇಲಾಖೆಯ ಐ.ಎ.ಎಸ್ ಅದಿಕಾರಿಗಳು ಈ ಬಗ್ಗೆ ಕ್ರಮ ತೆಗೆದುಕೊಳ್ಳದೆ ಬೇಡಿಕೆಗೆ ಸ್ವಂದಿಸದೆ ಕಾಲ ದೂಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.