ಬೆಳಗಾವಿ: ಜಿಲ್ಲೆಯಲ್ಲಿದಿನಾಂಕ 27/03/2022ರಂದು ಬೆಳಗಾವಿಯ ಸಾಹಿತ್ಯ ಭವನದಲ್ಲಿ ನಾಡಿನ ಸಮಾಚಾರ ದಿನಪತ್ರಿಕೆಯ 7ನೇ ವಾರ್ಷಿಕೋತ್ಸವದ ನಿಮಿತ್ಯ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಗೋಕಾಕದ ಸಾಹಿತಿಗಳಾದ ಶ್ರೀಮತಿ ವಿದ್ಯಾ ರೆಡ್ಡಿ ಅವರ ಸಾಹಿತ್ಯ ಸೇವೆಗಾಗಿ ರಾಷ್ಟ್ರಕವಿ ಕುವೆಂಪು ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಬಸವರಾಜ ಸುಣಗಾರ, ಸಂತೋಷ್ ಬಿದರಗಡ್ಡೆ, ಶ್ರೀ ಅರಿಹಂತ ಬಿರಾದಾರ್, ರಾಷ್ಟ್ರಕೂಟ ಸಾಹಿತ್ಯ ಪ್ರತಿಷ್ಠಾನದ ಅಧ್ಯಕ್ಷರಾದ ಬಸವರಾಜ ಗಾರ್ಗಿ, ಕರ್ನಾಟಕ ಜಾನಪದ ಪರಿಷತ್ ಬೆಳಗಾವಿ ಜಿಲ್ಲಾಧ್ಯಕ್ಷರಾದ ಡಾ. ಸಿ ಕೆ ನಾವಲಗಿ, ನಾಗನೂರು ಗ್ರಾಮದ ಸಮಾಜಸೇವಕರಾದ ಎಬಿನೇಜರ್ ಕರಬನ್ನವರ, ಸಂಸ್ಥೆಯ ಅಧ್ಯಕ್ಷರಾದ ಶ್ರೀ ಬಸವರಾಜ್ ಉಪ್ಪಾರಟ್ಟಿ, ಶ್ರೀಮತಿ ಲಕ್ಷ್ಮಿ ಬಸವರಾಜ್ ಉಪ್ಪಾರಟ್ಟಿ, ಗೋಕಾಕ್ ತಾಲೂಕ ಘಟಕದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶ್ರೀಮತಿ ಭಾರತಿ ಮದಬಾವಿ, ಸಂಚಾಲಕರಾದ ಸತ್ಯಪ್ಪ ಕರವಾಡಿ, ಶ್ರೀ ರಮೇಶ್ ಮಾದರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Ad9 News Latest News In Kannada
