Breaking News
Home / ಬೆಳಗಾವಿ / ಬಿಡಿಸಿಸಿ ಬ್ಯಾಂಕ ನಿರ್ದೇಶಕ ಸ್ಥಾನದಿಂದ ಅನರ್ಹ : ಜಿ ಎಮ್ ಪಾಟೀಲ ಆದೇಶ

ಬಿಡಿಸಿಸಿ ಬ್ಯಾಂಕ ನಿರ್ದೇಶಕ ಸ್ಥಾನದಿಂದ ಅನರ್ಹ : ಜಿ ಎಮ್ ಪಾಟೀಲ ಆದೇಶ

Spread the love

 

ಗೋಕಾಕ: ತಾಲೂಕಿನ ಅಂಕಲಗಿ ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಅಂಕಲಗಿ ಸೋಸೈಟಿಯ 11ಜನ ಸದಸ್ಯರು ರಾಜಿನಾಮೆ ಸಲ್ಲಿಸಿದ ಹಿನ್ನಲೆ ಬಿಡಿಸಿಸಿ ಬ್ಯಾಂಕ ನಿರ್ದೇಶಕ ಸ್ಥಾನದಿಂದ ಶಿವಾನಂದ ನಿಂಗಪ್ಪ ಡೋಣಿ ಅನರ್ಹರನ್ನಾಗಿಸಹಕಾರ ಸಂಘಗಳ ಸಂಯುಕ್ತ ನಿಬಂಧಕರು ಆದೇಶಿಸಿಲಾಗಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಅಂಕಲಗಿ ಸದಸ್ಯರ ನಡುವೆ ಹೊಂದಾಣಿಕೆ ಕೊರತೆಯಿಂದಾಗಿ ಕಳೆದ ಸೆಪ್ಟೆಂಬರ 26ರಂದು 11ಜನ ಸದಸ್ಯರು ತಮ್ಮ ರಾಜಿನಾಮೆಯನ್ನು ನೀಡಿದ್ದು, 15ದಿನಗಳ ನಂತರ
ಬೈಲಹೊಂಗಲ ಉಪವಿಭಾಗಾಧಿಕಾರಿಗಳು ವಿಶೇಷ ಅಧಿಕಾರಿಗಳನ್ನು ಸಂಘಕ್ಕೆ ವಿಶೇಷ ಅಧಿಕಾರಿಯನ್ನು ನೇಮಕ ಮಾಡಿದ್ದರು. ಹೀಗಾಗಿ ಸಹಕಾರ ಕಾಯ್ದೆಯಲ್ಲಿ ಶಿವಾನಂದ ಡೋಣಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಅಂಕಲಗಿಯ ಪ್ರತಿನಿಧಿಸುತ್ತಿದ್ದು, ಅವರು ಪ್ರತಿನಿಧಿಸುತ್ತಿರುವ ಆಡಳಿತ ಮಂಡಳಿ ರದ್ದುಗೊಂಡಿರುವ ಹಿನ್ನಲೆ ಶಿವಾನಂದ ನಿಂಗಪ್ಪ ಡೋಣಿ ಅವರನ್ನು ಅನರ್ಹಗೊಳಿಸುವಂತೆ ಅರ್ಜಿ
ಸಲ್ಲಿಕೆಯಾಗಿತ್ತು. ಪ್ರಕರಣ ಸಹಕಾರಿ ಸಂಘಗಳ ಸಂಯುಕ್ತ
ನಿಭಂಧಕರು ವಿಚಾರಣೆಗೆ ಕರೆಯಲಾಗಿತ್ತು. ಕರ್ನಾಟಕ ಸಹಕಾರಿ
ಸಂಘದ ಕಾಯ್ದೆ 1956ರ ಅನ್ವಯ ಶಿವಾನಂದ ಡೋಣಿ ಅವರನ್ನು ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ ನಿರ್ದೇಶಕ ಸ್ಥಾನದಿಂದ ತಕ್ಷಣಕ್ಕೆ ಜಾರಿಗೆ ಬರುವಂತೆ ಪ್ರಸ್ತುತ ಆಡಳಿತ ಮಂಡಳಿಯ ಅವಧಿಮುಗಿಯುವ ವರೆಗೆ ಅನರ್ಹಗೊಳಿಸಿ ಬೆಳಗಾವಿ ಪ್ರಾಂತ ಸಹಕಾರ ಸಂಘಗಳ ಸಂಯುಕ್ತ ನಿಬಂಧಕ ಜಿ ಎಮ್ ಪಾಟೀಲ ಆದೇಶಿಸಿದ್ದಾರೆ.


Spread the love

About Ad9 Haberleri

Check Also

ಶೈಕ್ಷಣಿಕ ಸುಧಾರಣೆಗೆ ಆದ್ಯತೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

Spread the love   ಬೆಳಗಾವಿ: ‘2024-2028ರ ಅವಧಿಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡುವುದು ನನ್ನ ಉದ್ದೇಶ. …

Leave a Reply

Your email address will not be published. Required fields are marked *