
ಬೆಳಗಾವಿ: ಕಸ್ತೂರಿ ಸಿರಿಗನ್ನಡ ವೇದಿಕೆ (ರಿ) ಬೆಳಗಾವಿ ವತಿಯಿಂದ ಆಯೋಜಿಸಿದ ವಿಶ್ವ ಶಿಕ್ಷಕರ ದಿನಾಚರಣೆ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭವು ದಿನಾಂಕ: 15/10/2023 ರಂದು ನಡೆಯಿತು.
ಈ ಸಮಾರಂಭದಲ್ಲಿ ಸರ್ಕಾರಿ ಪ್ರೌಢಶಾಲೆ ಸಾತ್ನಳ್ಳಿ ಹಳಿಯಾಳ ಉ ಕ ಈ ಶಾಲೆಯಲ್ಲಿ ಇಂಗ್ಲಿಷ್ ಭಾಷಾ ಸಹ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀಶೈಲ ಹುಲ್ಲೆನ್ನವರ ಇವರಿಗೆ”ಶ್ರೀ ಗುರುಕುಲ ತಿಲಕ ಪುರಸ್ಕಾರ”ಹಾಗೂ ಅಥಣಿ ವಿದ್ಯಾವರ್ಧಕ ಕನ್ನಡ ಮಾಧ್ಯಮ ಪ್ರೌಢಶಾಲೆ ಅಥಣಿಯಲ್ಲಿ ಹಿಂದಿ ಭಾಷಾ ಸಹ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಿದ್ದಪ್ಪ ಹುಲ್ಲನವರ ಇವರಿಗೆ”ಶಿಕ್ಷಕ ಸೇವಾರತ್ನ ಪುರಸ್ಕಾರ”ನೀಡಿ ಗೌರವಿಸಲಾಯಿತು.

ಈ ಇಬ್ಬರೂ ಸಹೋದರರ ಶೈಕ್ಷಣಿಕ ಸೇವೆ, ವಿದ್ಯಾರ್ಥಿಗಳ ಏಳಿಗೆಗಾಗಿ ಶ್ರಮಿಸುತ್ತಿರುವುದನ್ನು ಗುರುತಿಸಿ ಇವರಿಗೆ ಕಸ್ತೂರಿ ಸಿರಿಗನ್ನಡ ವೇದಿಕೆ (ರಿ) ಬೆಳಗಾವಿ ಜಿಲ್ಲಾ ಅಧ್ಯಕ್ಷರಾದ ಪ್ರೊ ll ಎಚ್ ಎಲ್ ಪೆಂಡಾರಿ ಇವರು ಸುದ್ದಿ ಮಾಧ್ಯಮಕ್ಕೆ ಪ್ರಕಟಣೆಗಾಗಿ ತಿಳಿಸಿದ್ದಾರೆ.
Ad9 News Latest News In Kannada