Breaking News
Home / ಬೆಳಗಾವಿ (page 9)

ಬೆಳಗಾವಿ

ಕೋವಿಡ್-19, ಏಡ್ಸ್ ಮತ್ತು ಟಿಬಿ ಕುರಿತು ಜಾಗೃತಿ ಆರೋಗ್ಯದ ನಿಯಮಗಳನ್ನು ಪಾಲಿಸಿ ಕೊರೊನಾದಿಂದ ಮುಕ್ತರಾಗಿ

ಮೂಡಲಗಿ: ಕೊರೊನಾ ವೈರಸ್ ಬಗ್ಗೆ ಭಯ ಬೇಡ ಆದರೆ ಮುಂಜಾಗೃತೆಗಾಗಿ ಪ್ರತಿಯೊಬ್ಬರು ಕಡ್ಡಾಯವಾಗಿ ಆರೋಗ್ಯದ ನಿಯಮಗಳನ್ನು ಪಾಲಿಸುವುದು ಅವಶ್ಯವಿದೆ ಎಂದು ರಾಯಬಾಗದ ಸಮುದಾಯ ಆರೋಗ್ಯ ಸಮನ್ವಯಾಧಿಕಾರಿ ಝಾಕೀರ ಹುಸೇನ್ ನಧಾಪ ಹೇಳಿದರು. ಇಲ್ಲಿಯ ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಸಮಾಜಶಾಸ್ತç ವಿಭಾಗ, ಐಕ್ಯೂಎಸಿ, ಸಮುದಾಯ ಆರೋಗ್ಯ ಕೇಂದ್ರ, ವೈಆರ್‌ಸಿ ಘಟಕ, ಎನ್‌ಎಸ್‌ಎಸ್, ರೆಡ್‌ರಿಬ್ಬನ್ ಮತ್ತು ಆರೋಗ್ಯ ಘಕಟಗಳ ಆಶ್ರಯದಲ್ಲಿ ಆಯೋಜಿಸಿದ ಕೋವಿಡ್-19, ಎಚ್‌ಐವಿ ಏಡ್ಸ್ ಮತ್ತು …

Read More »

ಮುಂಜಾಗ್ರತ ಕ್ರಮವಾಗಿ ಕೊರೊನಾ ವೈರಸ್ ಸೊಂಕು ಹರಡದಂತೆ ಪ್ರತಿಯೊಬ್ಬರೂ ಎಚ್ಚರವಹಿಸುವ ಅಗತ್ಯಯಿದ್ದು ಸುತ್ತಮುತ್ತಲಿನ ಪರಿಸರದ ಬಗ್ಗೆ ಕಾಳಜಿ ವಹಿಸಿ

ಮೂಡಲಗಿ : ಮುಂಜಾಗ್ರತ ಕ್ರಮವಾಗಿ ಕೊರೊನಾ ವೈರಸ್ ಸೊಂಕು ಹರಡದಂತೆ ಪ್ರತಿಯೊಬ್ಬರೂ ಎಚ್ಚರವಹಿಸುವ ಅಗತ್ಯಯಿದ್ದು ಸುತ್ತಮುತ್ತಲಿನ ಪರಿಸರದ ಬಗ್ಗೆ ಕಾಳಜಿ ವಹಿಸಿ ಸಾಮಾನ್ಯವಾಗಿ ಕೆಮ್ಮು,ನೆಗಡಿ, ಶೀತ, ಜ್ವರದಂತಹ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ಸಮೀಪದ ಆಸ್ಪತ್ರೆಗೆ ತೆರಳಿ ಸೂಕ್ತ ಚಿಕೆತ್ಸೆ ಪಡೆಯಬೇಕು. ಎಂದು ನ್ಯಾಯವಾದಿ ಕೆ.ಎಲ್ ಹುಣಶ್ಯಾಳ ಹೇಳಿದರು. ಅವರು ದಿವಾಣ ಹಾಗೂ ಜೆ.ಎಂ.ಎಫ್.ಸಿ. ನ್ಯಾಯಾಲಯದ ಆವರಣದಲ್ಲಿ ಆಯೋಜಿಸಿದ ಕೊರೊನಾ ಸಂಕ್ರಾಮಿಕ ರೋಗ ಜನ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡುತ್ತಾ …

Read More »

ಗೋಕಾಕ ತಾಲೂಕಿನಲ್ಲಿ ಭೃಷ್ಟಾಚಾರ: ಅಧಿಕಾರಿಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳದ್ದಕ್ಕೆ ರಾಜ್ಯಪಾಲರಿಗೆ ಪತ್ರ ಬರೆದ ಲೋಕಾಯುಕ್ತರು!

  ಬೆಳಗಾವಿ: ಗೋಕಾಕ ತಾಲೂಕಿನಲ್ಲಿ ಭೃಷ್ಟಾಚಾರ ಪ್ರಕರಣವೊಂದರಲ್ಲಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಿಫಾರಸು ಮಾಡಿದ್ದರೂ, ಪಂಚಾಯತ್ ರಾಜ್ ಇಲಾಖೆಯು ಯಾವುದೇ ಕ್ರಮ ಕೈಗೊಳ್ಳದೇ ಇರುವುದಕ್ಕೆ, ಲೋಕಾಯುಕ್ತರು ರಾಜ್ಯಪಾಲರಿಗೇ ಪತ್ರ ಬರೆದಿರುವ ಸಂಗತಿ ಬೆಳಕಿಗೆ ಬಂದಿದೆ. ಗೋಕಾಕ ತಾಲೂಕಿನ ಮಮದಾಪೂರ ಪಂಜಾಯತಿ ಅಡಿಯಲ್ಲಿ ಬರುವ ಅಜ್ಜನಕಟ್ಟಿಯಲ್ಲಿ ಸರ್ಕಾರದಿಂದ ಕುಡಿಯುವ ನೀರಿನ ಯೋಜನೆ ಮಂಜೂರಾಗಿತ್ತು. ಆದರೆ ಕಾಮಗಾರಿಯನ್ನು ನಡೆಸದೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಬಿಲ್ ತೆಗೆದಿದ್ದಕ್ಕೆ ಸಂಬಂಧಪಟ್ಟಂತೆ ಸ್ಥಳೀಯ ಜಯಗೌಡ ಸಿದಗೌಡ …

Read More »

ಅಂಬೇಡ್ಕರ್ ಜಯಂತಿ: ಪೂರ್ವ ಭಾವಿ ಸಭೆ ಮಾ.18ರಂದು

ಬೆಳಗಾವಿ: ಮಾರ್ಚ್ 14 ರಂದು ಭಾರತರತ್ನ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 129ನೇ ಜನ್ಮ ದಿನಾಚರಣೆಯನ್ನು ಜಿಲ್ಲಾ ಆಡಳಿತ ವತಿಯಿಂದ ಆಚರಿಸುವ ಕುರಿತು ಮಾರ್ಚ 18 ರಂದು ಸಾಯಂಕಾಲ 3.30 ಗಂಟೆಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಛೇರಿಯ 2 ನೇ ಮಹಡಿಯಲ್ಲಿ ಪೂರ್ವಭಾವಿ ಸಿದ್ದತಾ ಸಭೆಯನ್ನು ಆಯೋಜಿಸಲಾಗಿದೆ. ಈ ಸಭೆಗೆ ಜಿಲ್ಲೆಯ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ಹಾಗೂ ಇತರೆ ವರ್ಗಗಳ ಸಮುದಾಯದ ಮುಖಂಡರು ಪದಾಧಿಕಾರಿಗಳು ಆಗಮಿಸಿ …

Read More »

ಕರ್ನಾಟಕ ನಿರಾವರಿ ನಿಗಮ; ಉಪಾಧ್ಯಕ್ಷರಾಗಿ ಸಚಿವ ರಮೇಶ ಜಾರಕಿಹೊಳಿ ನೇಮಕ

ಬೆಳಗಾವಿ: ಜಲಸಂಪನ್ಮೂಲ ಸಚಿವರಾದ ರಮೇಶ್ ಜಾರಕಿಹೊಳಿ ಅವರನ್ನು ಕರ್ನಾಟಕ ನೀರಾವರಿ ನಿಗಮ ನಿಯಮಿತ ಮಂಡಳಿಯ ಉಪಾಧ್ಯಕ್ಷರನ್ನಾಗಿ ನೇಮಿಸಿ ಕರ್ನಾಟಕ ಸರ್ಕಾರ ಇಂದು ಆದೇಶ ಹೊರಡಿಸಿದೆ. ಕರ್ನಾಟಕ ನೀರಾವರಿ ನಿಗಮ ನಿಯಮಿತದ ನಿರ್ದೇಶಕರ ಮಂಡಳಿಯ ಉಪಾಧ್ಯಕ್ಷರನ್ನಾಗಿ ಕೂಡಲೇ ಜಾರಿಗೆ ಬರುವಂತೆ ನೇಮಕ ಮಾಡಲಾಗಿದೆ ಎಂದು ಜಲ ಸಂಪನ್ಮೂಲ ಇಲಾಖೆಯ ಸರ್ಕಾರಿ ಅಧೀನ ಕಾರ್ಯದರ್ಶಿ ಅವರಾದ ರವೀಂದ್ರ ಕೊಂಡ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More »

ಕರೊನಾ ವೈರಸ್ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಬೇಡಿ : ವಿ ವಿ ಶಿಂಧೆ 

ಚಿಕ್ಕೋಡಿ: ಕರೋನಾ ವೈರಸ್ ಚಿಕ್ಕೋಡಿ ಉಪವಿಭಾಗದಲ್ಲಿ ಹಬ್ಬಿಲ್ಲ ಯಾರು ಗಾಬರಿಯಾಗುವ ಅವಶ್ಯಕತೆ ಇಲ್ಲ. ಯಾರು ಕೂಡಾ ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಚಿಕ್ಕೋಡಿ ತಾಲೂಕಾಧಿಕಾರಿ ವಿ ವಿ ಶಿಂಧೆ ಹೇಳಿದರು. ಚಿಕ್ಕೋಡಿ ಪಟ್ಟಣದಲ್ಲಿ ಇಂಡಿಯನ್ ಮೆಡಿಕಲ್ ಆಸೋಷಿಯೆಶನ್ ವತಿಯಿಂದ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ‌ಮಾತನಾಡಿದ ಅವರು, ಚಿಕ್ಕೋಡಿ ಪಟ್ಟಣದ ವೈದ್ಯ ಓರ್ವರಿಗೆ ಕರೊನಾ ರೋಗ ಬಂದಿದೆ ಎಂಬುವುದು ಗಾಳಿ ಸುದ್ದಿ, ಚಿಕ್ಕೋಡಿ ಯಾವುದೇ ವೈದ್ಯರಿಗೆ ಕರೋನಾ ಬಂದಿಲ್ಲ ವಿದೇಶಗಳಿಂದ ಬಂದಂತ ಜನರ ಮೇಲೆ …

Read More »

ನೈತಿಕ ಸಂಭಂಧ ಶೆಂಕೆಯ ಹಿನ್ನೆಲೆಯಲ್ಲಿ ಕೊಡಲಿಯಿಂದ ಪತಿಯಿಂದ ಪತ್ನಿಯನ್ನು ಕೊಚ್ಚಿ ಕೊಲೆ

ಅಥಣಿ :ನೈತಿಕ ಸಂಭಂಧ ಶೆಂಕೆಯ ಹಿನ್ನೆಲೆಯಲ್ಲಿ ಕೊಡಲಿಯಿಂದ ಪತಿಯಿಂದ ಪತ್ನಿಯನ್ನು ಕೊಚ್ಚಿ ಕೊಲೆ. ಲಕ್ಷ್ಮಿಬಾಯಿ ಸಿದ್ರಾಯ ಮೋಳೆ (45) ಕೊಲೆಯಾದ ದುರ್ದೈವಿ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹುಲಗಬಾಳ ಗ್ರಾಮದಲ್ಲಿ ಘಟನೆ. ನಿನ್ನೆ ತಡರಾತ್ರಿ ಭೀಕತವಾಗಿ ಕೊಲೆ ಮಾಡಿದ ಪತಿ. ಆರೋಪಿ ಸಿದ್ರಾಯ ನಿಂಗಪ್ಪ ಮೋಳೆ ಪೋಲಿಸರ ವಶಕ್ಕೆ. ಅಥಣಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ

Read More »

ಕರಡಿ ದಾಳಿಯಿಂದ ಮೃತಪಟ್ಟ ವ್ಯಕ್ತಿಯ ಅಸಲಿ ಸಾವು !

ಬೆಳಗಾವಿ: ಖಾನಾಪೂರ ತಾಲೂಕಿನ ಅಮಟೆ ಗ್ರಾಮದ ಹೊರವಲಯದ ಕಾಡಿನಲ್ಲಿ ಮಾರ್ಚ್ 11 ರಂದು ಓರ್ವ ವ್ಯಕ್ತಿಯ ಶವ ದೊರೆತಿತ್ತು. ಕರಡಿ ದಾಳಿಯಿಂದ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಗುಲ್ಲೆಬ್ಬಿಸಲಾಗಿತ್ತು. ಆದರೆ, ಪೊಲೀಸರು ವ್ಯಕ್ತಿಯ ಸಾವಿನ ಹಿಂದಿನ ರಹಸ್ಯವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದು, ಅದು ಕೊಲೆ ಎಂದು ಸಾಬೀತಾಗಿದೆ. ಮೃತ ತಾನಾಜಿ ಟೋಪಾ ನಾಯಕ (35) ನನ್ನು ಬಂದೂಕಿನಿಂದ ಗುಂಡು ಹಾರಿಸಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದ್ದು, ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಐದು ಮಂದಿ …

Read More »

ಮಕ್ಕಳಿಗೆ ಪೌಷ್ಠಿಕ ಆಹಾರ ನೀಡುವದರಿಂದ ಅವುಗಳು ಸದೃಡವಾಗಿ ಇರುತ್ತವೆ

ಮೂಡಲಗಿ : ಮಕ್ಕಳಿಗೆ ಪೌಷ್ಠಿಕ ಆಹಾರ ನೀಡುವದರಿಂದ ಅವುಗಳು ಸದೃಡವಾಗಿ ಇರುತ್ತವೆ, ಮಕ್ಕಳು ಸರಿಯಾದ ಆಹಾರ ಸೇವಿಸಿದರೆ ಅವುಗಳು ಯಾವದೆ ತೊಂದರೆ ಇರದೆ ಬೇಳೆಯುತ್ತವೆ ಸದೃಡ ದೇಹ ಮಾತ್ರವೇ ಸಾಧನೆ ಮಾಡಲು ಸಾಧ್ಯ ಎಂದು ಮೂಡಲಗಿ ಸಮುದಾಯ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿ ಡಾ ಭಾರತಿ ಕೋಣಿ ಹೇಳಿದರು. ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಲಕ್ಷ್ಮಿ ನಗರದ ಅಂಗನವಾಡಿ 411 ಶಾಲೆಯಲ್ಲಿ ಬೇಬಿ ಶೋ ಮತ್ತು 6 ತಿಂಗಳಿoದ …

Read More »

ಕೊರೊನಾ: ಬೆಳಗಾವಿಯಲ್ಲಿ ಪತ್ರಕರ್ತರ ಪ್ರಶ್ನಿಗೆ ಗಲಿಬಿಲಿಗೊಂಡ ಯಡಿಯೂರಪ್ಪ

ಬೆಳಗಾವಿ: ವಿಧಾನ ಪರಿಷತ್ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಅವರ ಪುತ್ರಿಯ ವಿವಾಹ ಮಹೋತ್ಸವದಲ್ಲಿ‌ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಸರ್ಕಾರದ ನಿರ್ದೇಶನ ಮೀರಿ ವಿವಾಹದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿರುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಗಲಿಬಿಲಿಗೊಂಡ ಪ್ರಸಂಗ ನಡೆಯಿತು. ಇಂದು ಬೆಳಗಾವಿಯ ಶಗುನ ಗಾರ್ಡನ್ ನಲ್ಲಿ ಕವಟಗಿಮಠ ಪುತ್ರಿಯ ವಿವಾಹ ನೆರವೇರಿತು. ಮೊದಲು ಕೊರೊನಾ ಹಿನ್ನೆಲೆಯಲ್ಲಿ ಬೆಳಗಾವಿ ಪ್ರವಾಸವನ್ನು ರದ್ದುಪಡಿಸಿದ್ದ ಯಡಿಯೂರಪ್ಪ, ಬಳಿಕ ಆತ್ಮೀಯತೆ ಹಿನ್ನೆಲೆಯಲ್ಲಿ …

Read More »