Breaking News

ದೇಶದಲ್ಲಿ 21 ದಿನ ಕೊರೋನಾ ಕರ್ಫ್ಯೂ: ಇಂದಿನಿಂದ ಏನಿರುತ್ತೆ? ಏನಿರಲ್ಲ?

Spread the love

ಕೊರೋನಾ ವೈರಸ್​​​ ನಿಯಂತ್ರಣಕ್ಕೆ 15 ಸಾವಿರ ಕೋಟಿ ವಿಶೇಷ ಪ್ಯಾಕೇಜ್​​ ಘೋಷಿಸಿದ ಪ್ರಧಾನಿ ಮೋದಿ

ಇಡೀ ದೇಶವೇ ನಿಮ್ಮನ್ನು ಕೊರೋನಾ ವೈರಸ್​ನಿಂದ ಬಚಾವ್​ ಮಾಡಲು ಕೆಲಸ ಮಾಡುತ್ತಿದೆ. ಪೊಲೀಸರು, ವೈದ್ಯಕೀಯ ಸಿಬ್ಬಂದಿ, ಆರೋಗ್ಯ ಇಲಾಖೆ ಸಿಬ್ಬಂದಿಗಳು ನಿಮಗಾಗಿ ಕೆಲಸ ಮಾಡುತ್ತಿದ್ಧಾರೆ. ಖಾಸಗಿ ಸಂಸ್ಥೆಗಳು ದೇಶದ ಜನರ ನೆರವಿಗಾಗಿ ಧಾವಿಸಿರುವುದಕ್ಕೆ ಸಂತೋಷವಾಗಿದೆ. ವೈದ್ಯರ ಸಲಹೆಯಿಲ್ಲದೆಯೇ ಯಾವುದೇ ರೀತಿಯ ಔಷಧಗಳನ್ನು ಸೇವಿಸಬೇಡಿ ಎಂದು ಜನತೆಯಲ್ಲಿ ಪ್ರಧಾನಿ ಮನವಿ ಮಾಡಿದ್ದಾರೆ.

ಏನಿರುತ್ತೇ?

ಪಡಿತರ ಅಂಗಡಿ, ದಿನಸಿ, ಹಾಲು, ತರಕಾರಿ ಲಭ್ಯ

ಪೆಟ್ರೋಲ್ ಬಂಕ್, ಎಲ್ ಪಿಜಿ ಗ್ಯಾಸ್ ಲಭ್ಯ

ಆಸ್ಪತ್ರೆ, ಮೆಡಿಕಲ್ ಶಾಪ್ ಗಳು ಓಪನ್

ಮಾಂಸ, ಮೀನು, ಹಣ್ಣು ಮತ್ತು ಚಿಲ್ಲರೆ ಮಾರುಕಟ್ಟೆ ಲಭ್ಯ

ಬ್ಯಾಂಕ್, ಎಟಿಎಂ ಮತ್ತು ಇಂಟರ್ ನೆಟ್ ಸೇವೆ ಲಭ್ಯ

ಪೊಲೀಸ್​​ ಇಲಾಖೆ, ವೈದ್ಯಕೀಯ ಸೇವೆ ಲಭ್ಯ

ಏನಿರಲ್ಲ!

ಸರ್ಕಾರಿ ಕಾಲೇಜು, ಶಾಲೆ, ವಿವಿಗಳು, ಕಚೇರಿಗಳು ಬಂದ್​

ದೇಶಾದ್ಯಂತ ಬಸ್​​ ಮತ್ತು ರೈಲ್ವೆ ಬಂದ್

ಖಾಸಗಿ ಬಸ್, ಆಟೋ, ಓಲಾ ಕ್ಯಾಬ್, ಟ್ಯಾಕ್ಸಿ ರದ್ದು

ಬಾರ್ ಅಂಡ್ ರೆಸ್ಟೋರೆಂಟ್, ಎಂಆರ್​ ಶಾಪ್ ಬಂದ್

ದೇವಸ್ಥಾನಗಳು, ಧಾರ್ಮಿಕ ಆಚರಣೆಗಳು ಬಂದ್

ಅಗತ್ಯ ಸೇವೆಗಳು , ದಿನಸಿ ಅಂಗಡಿಗಳು ಮತ್ತು ಇತರ ಪ್ರತಿದಿನದ ಅವಶ್ಯಕತೆಗಳ ಬಗ್ಗೆ ಗೊಂದಲವಿದೆ. ಈ ಎಲ್ಲಾ ಅಂಗಡಿಗಳು ತೆರೆದಿರಲಿವೆ. ಈ ಬಗ್ಗೆ ಹೆದರಬೇಕಾದ ಅಗತ್ಯವಿಲ್ಲ. ಅಗತ್ಯ ಸೇವೆಗಳಿಗೆ ಯಾವುದೇ ತೊಡಕಾಗದು.

ಜನತೆ ಇನ್ನು 21 ದಿನಗಳ ಕಾಲ ರಸ್ತೆಗೆ ಇಳಿಯಬೇಡಿ. ನಿಮ್ಮಲ್ಲಿ ನಾನು ಕೈಮುಗಿದು ಕೇಳಿಕೊಳ್ಳುತ್ತೇನೆ. ನಾವು ಈ ಕ್ಷಣದಿಂದ ಹೀಗೆ ಸಂಕಲ್ಪ ಮಾಡೋಣ. ಇಡೀ ದೇಶವೇ ಲಾಕ್ ಡೌನ್ ಆದರೂ ಅಗತ್ಯ ವಸ್ತುಗಳು ನಿಮಗೆ ಸಿಗುತ್ತದೆ. ಹಾಲು, ದಿನಸಿ, ಆಸ್ಪತ್ರೆ, ಮೆಡಿಕಲ್ ಶಾಪ್ ಮತ್ತು ತರಕಾರಿ ಎಂದಿನಂತೆ ಸಿಗುತ್ತದೆ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

 


Spread the love

About Ad9 News

Check Also

2,000 ರೂ. ನೋಟು ಹಿಂಪಡೆಯುವಿಕೆ ನಂತರ ಬ್ಯಾಂಕ್ ಠೇವಣಿ, ಸಾಲ ಮರುಪಾವತಿಯಲ್ಲಿ ಹೆಚ್ಚಳ: SBI ಅಧ್ಯಯನದಲ್ಲಿ ಇಂಟ್ರಸ್ಟಿಂಗ್‌ ಮಾಹಿತಿ ಬಹಿರಂಗ

Spread the love 2000 ರೂ. ಕರೆನ್ಸಿ ನೋಟುಗಳ ಹಿಂಪಡೆಯುವಿಕೆಯು ಬ್ಯಾಂಕ್ ಠೇವಣಿಗಳನ್ನು ಹೆಚ್ಚಿಸುತ್ತದೆ, ಸಾಲಗಳ ಮರುಪಾವತಿಯನ್ನು ವೇಗಗೊಳಿಸಿದೆ ಮತ್ತು …