Breaking News

ನಗರೋತ್ಥಾನ ಯೋಜನೆಯಡಿ ಪಟ್ಟಣ ಪಂಚಾಯತಿ ಅಭಿವೃದ್ಧಿಗಾಗಿ ಹೆಚ್ಚಿನ ನೆರವು : ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love


ಗೋಕಾಕ : ಕಲ್ಲೋಳಿ ಪಟ್ಟಣದ ಸರ್ವಾಂಗೀಣ ವಿಕಾಸಕ್ಕೆ ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಅಭಿವೃದ್ಧಿ ಕಾರ್ಯಗಳಲ್ಲಿ ಎಂದಿಗೂ ಪಕ್ಷಪಾತ ಮಾಡಬೇಡಿ. ಹಿರಿಯರ ಮಾರ್ಗದರ್ಶನದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚಿನ ಗಮನ ನೀಡುವಂತೆ ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ನೂತನ ಪಪಂ ಸದಸ್ಯರಿಗೆ ಸಲಹೆ ನೀಡಿದರು.
ಶುಕ್ರವಾರದಂದು ಪಟ್ಟಣ ಪಂಚಾಯತಿಗೆ ನೂತನವಾಗಿ ಆಯ್ಕೆಗೊಂಡ ಸದಸ್ಯರನ್ನು ಇಲ್ಲಿಯ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಅಭಿನಂದಿಸಿ ಮಾತನಾಡಿದ ಅವರು, ಜನರ ಪ್ರೀತಿ ವಿಶ್ವಾಸವನ್ನು ಗಳಿಸಿಕೊಂಡು ಜನರ ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಮತದಾರರ ಋಣ ತೀರಿಸುವಂತೆ ಅವರು ಹೇಳಿದರು.
ಡಿಸೆಂಬರ್ 27 ರಂದು ನಡೆದ ಕಲ್ಲೋಳಿ ಪಟ್ಟಣ ಪಂಚಾಯತಿ ಚುನಾವಣೆಯಲ್ಲಿ ನಮ್ಮವರೇ ಎರಡು ಗುಂಪುಗಳಾಗಿ ಸ್ಪರ್ಧೆ ಮಾಡಿದ್ದರು. ಕೆಲವರು ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದಾರೆ. ಬಿಜೆಪಿಯಿಂದ ವಂಚಿತಗೊಂಡವರು ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ. ಒಂದಾಗಲು ಎಷ್ಟೇ ಪ್ರಯತ್ನಿಸಿದರೂ ಕೆಲವರು ಒಪ್ಪಲಿಲ್ಲ. ಇದರಿಂದ ಎರಡು ಗುಂಪುಗಳಾದವು. ಒಟ್ಟಿನಲ್ಲಿ ನಮ್ಮದೇ ಗುಂಪು ಎಂದು ಅವರು ಹೇಳಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇಡಬೇಕು. ಸೋಲು-ಗೆಲುವನ್ನು ಸಮನಾಗಿ ಸ್ವೀಕರಿಸಬೇಕು. ಈ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತವರು ಏನೇನೋ ಆರೋಪಗಳನ್ನು ಮಾಡುತ್ತಿದ್ದಾರೆ. ನಮಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಪೂರ್ಣ ನಂಬಿಕೆ ಇದೆ. ಇದನ್ನು ನಂಬಿಕೊಂಡು ಜನರ ವಿಶ್ವಾಸವನ್ನು ಗಳಿಸಿಕೊಂಡು ಅಭಿವೃದ್ಧಿಯತ್ತ ಗಮನ ನೀಡಬೇಕು ಎಂದು ಅವರು ಹೇಳಿದರು.
ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗಾಗಿ ಬಿಜೆಪಿ ಸರ್ಕಾರ ಬದ್ಧ. ಪಟ್ಟಣ ಪಂಚಾಯತಿಗಳ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಗರೋತ್ಥಾನ ಯೋಜನೆಯಡಿ ಸಾಕಷ್ಟು ಅನುದಾನವನ್ನು ಹೆಚ್ಚಿಸಿದ್ದಾರೆ. ಇದರಿಂದ ಪಟ್ಟಣ ಪಂಚಾಯತಿಗಳ ಸಮಗ್ರ ಅಭಿವೃದ್ಧಿಗೆ ನಗರೋತ್ಥಾನ ಯೋಜನೆ ಪೂರಕವಾಗಲಿದೆ ಎಂದು ಅವರು ಹೇಳಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಪಟ್ಟಣ ಪಂಚಾಯತಿ ನೂತನ ಸದಸ್ಯರು ಬೃಹತ್ ಹೂ-ಹಾರ ಹಾಕಿ ಸನ್ಮಾನಿಸಿದರು.
ಜಿಪಂ ಮಾಜಿ ಅಧ್ಯಕ್ಷ ಬಸಗೌಡ ಪಾಟೀಲ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ನೀಲಕಂಠ ಕಪ್ಪಲಗುದ್ದಿ, ಮುಖಂಡರಾದ ಬಸವಂತ ದಾಸನವರ, ಸುಭಾಸ ಕುರಬೇಟ, ಮಹಾಂತೇಶ ಕಪ್ಪಲಗುದ್ದಿ, ವಸಂತ ತಹಶೀಲ್ದಾರ, ಮಲ್ಲಪ್ಪ ಹೆಬ್ಬಾಳ, ಮಲ್ಲಪ್ಪ ಕಡಾಡಿ, ಬಸವರಾಜ ಯಾದಗೂಡ, ರಾಮು ಗಾಣ ಗೇರ, ರಾಮಪ್ಪ ಹಡಗಿನಾಳ, ಮುತ್ತೆಪ್ಪ ಭಜಂತ್ರಿ, ಮಾಳಪ್ಪ ಸನದಿ, ಕಮಲವ್ವ ಕಳ್ಳಿಗುದ್ದಿ, ಯಲ್ಲಪ್ಪ ದಾಸನವರ, ಮೋಹನ ಗಾಡಿವಡ್ಡರ, ಶಿವಾನಂದ ಹೆಬ್ಬಾಳ, ಭೀಮಶಿ ಗೊರೋಶಿ, ಮುಖಂಡರು, ನೂತನ ಸದಸ್ಯರು ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


Spread the love

About Ad9 News

Check Also

ಟಿಎಪಿಸಿಎಂಎಸ್ ಗೆ ಅಶೋಕ ನಾಯಿಕ ಅಧ್ಯಕ್ಷ! ವಿಠ್ಠಲ ಪಾಟೀಲ ಉಪಾಧ್ಯಕ್ಷ ರಾಗಿ ಪುನರಾಯ್ಕೆ

Spread the love ಗೋಕಾಕ ಮಾ 3 : ಗೋಕಾಕ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘಕ್ಕೆ ನೂತನ …