Breaking News

ವಿವಿಧ ಇಲಾಖೆಗಳ ಸಾಮಾನ್ಯ ಸಭೆಯು ತಾಲ್ಲೂಕು ಪಂಚಾಯತ ಸಭಾ ಭವನದಲ್ಲಿ ತಾಪಂ ಅಧ್ಯಕ್ಷೆ ಸುನಂದಾ ಕರದೇಸಾಯಿ, ಉಪಾಧ್ಯಕ್ಷ ಯಲ್ಲಪ್ಪ ನಾಯಿಕ ಹಾಗೂ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಹೆಗ್ಗನಾಯಕ ನೇತೃತ್ವದಲ್ಲಿ ಜರುಗಿತು

Spread the love


ಗೋಕಾಕ : ವಿವಿಧ ಇಲಾಖೆಗಳ ಸಾಮಾನ್ಯ ಸಭೆಯು ತಾಲ್ಲೂಕು ಪಂಚಾಯತ ಸಭಾ ಭವನದಲ್ಲಿ ತಾಪಂ ಅಧ್ಯಕ್ಷೆ ಸುನಂದಾ ಕರದೇಸಾಯಿ, ಉಪಾಧ್ಯಕ್ಷ ಯಲ್ಲಪ್ಪ ನಾಯಿಕ ಹಾಗೂ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಹೆಗ್ಗನಾಯಕ ನೇತೃತ್ವದಲ್ಲಿ ಜರುಗಿತು.
ಬುಧವಾರ ಜರುಗಿದ ಸಾಮಾನ್ಯ ಸಭೆಯಲ್ಲಿ ಆರೋಗ್ಯ ಇಲಾಖೆಯಿಂದ ವಿವಿಧ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಕ್ರಮವಹಿಸುವದು. ಮಲೇರಿಯಾ ಡೆಂಗ್ಯೂನಂತಹ ಮಾರಕ ಖಾಯಿಲೆಗಳ ವಿರುದ್ದ ಮುನ್ನೆಚ್ಚರಿಕೆಯಾಗಿರುವದು. ಆಯುಷ್ಮಾನ್ ಭಾರತ ಕಾರ್ಡ್ ಬಗ್ಗೆ ಮಾಹಿತಿ ನೀಡುವದು.

ಶಿಕ್ಷಣ ಇಲಾಖೆಯಿಂದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಕಡೆ ಹೆಚ್ಚಿನ ಗಮನ ನೀಡಿಬೇಕು. ತಾಲ್ಲೂಕು ಹಂತದ ಅಧಿಕಾರಿಗಳು ಪ್ರೇರಣಾಧಾಯಕ ಭೇಟಿ ಕ್ರಮದ ಕುರಿತು ಪ್ರಶಂಸಿಸಿದರು.
ಕೃಷಿ ಇಲಾಖೆಯಿಂದ ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ ಹಾಗೂ ರೈತರಿಗೆ ಬೆಳೆಗಳ ಕುರಿತು ಸೂಕ್ತ ಮಾಹಿತಿ ಒದಗಸಬೇಕು. ಸಮಾಜ ಕಲ್ಯಾಣ ಹಾಗೂ ಬಿ.ಸಿ.ಎಮ್ ಇಲಾಖೆಗಳಿಂದ ನಡೆಯುವ ವಸತಿ ನಿಲಯಗಳಲ್ಲಿ ಗುಣಮಟ್ಟದ ಹಾಗೂ ಪೌಷ್ಠಿಕ ಆಹಾರ ದೊರೆಯಬೇಕು. ಅಕ್ಷರದಾಸೋಹ, ಪಿಡಬ್ಲೂಡಿ, ಹೆಸ್ಕಾಂ, ಸಿಡಿಪಿಒ, ಪಿ.ಆರ್.ಡಿ, ಪಶುಸಂಗೋಪನೆ, ಅರಣ್ಯ ಇಲಾಖೆಗಳ ಕುರಿತು ಪ್ರಗತಿ ಹಾಗೂ ಮುಂದೆ ಕೈಗೊಳ್ಳಬಹುದಾದ ಕ್ರಮಗಳು ಹಾಗೂ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.

ಈ ಸಂದರ್ಭದಲ್ಲಿ ಬಿಇಒಗಳಾದ ಜಿ.ಬಿ ಬಳಗಾರ, ಎ.ಸಿ ಮನ್ನಿಕೇರಿ, ತಾಲೂಕಾ ವೈದ್ಯಾಧಿಕಾರಿ ರವೀಂದ್ರ ಅಚಿಟಿನ, ಕೃಷಿ ನಿರ್ಧೇಶಕ ಎಮ್ ಎಮ್ ನದಾಫ್, ಆರ್.ಎಪ್.ಒ ವಣ್ಣೂರ, ಹೆಸ್ಕಾಂ ಎಮ್.ಎನ್ ನಾಗನ್ನವರ, ಸಿಡಿಪಿಒ ವಾಯ್ ಎ ಗುಜನಟ್ಟಿ, ಬಿ.ಸಿ.ಎಮ್ ವಿಸ್ತೀರರ್ಣಾಧಿಕಾರಿ ಆರ್.ಕೆ ಬಿಸಿರೊಟ್ಟಿ, ಮೋಹನ ಕಮತ, ಎಮ್.ಎಮ್ ದಫೇದಾರ ಮುಂತಾದ ತಾಲೂಕಾಧಿಕಾರಿಗಳು ಹಾಜರಿದ್ದರು.

ತಾಲೂಕಾ ಮದ್ಯಾಹ್ನ ಉಪಹಾರ ಯೋಜನಾಧಿಕಾರಿ ಎಬಿ ಮಲಬನ್ನವರ ಸ್ವಾಗತಿಸಿದರು. ಸಹಾಯಕ ನಿರ್ಧೇಶಕ ಎಸ್.ಎಚ್ ದೇಸಾಯಿ ವಂದಿಸಿದರು. ಕಾರ್ಯಕ್ರಮವು ನಾಡಗೀತೆಯೊಂದಿಗೆ ಪ್ರಾರಂಭಿ ರಾಷ್ಟ್ರಗೀತೆಯೊಂದಿಗೆ ಮುಕ್ತಾಯಗೊಳಿಸಿದರು.


Spread the love

About Ad9 News

Check Also

ದಂಡಾಪೂರ ಗ್ರಾಮದಲ್ಲಿ 6.11 ಕೋಟಿ ರೂಪಾಯಿ ವೆಚ್ಚದ ಶೈಕ್ಷಣಿಕ ಕಾಮಗಾರಿಗಳನ್ನು ನೆರವೇರಿಸಿದ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love *1.55 ಕೋ.ರೂ ವೆಚ್ಚದ ದಂಡಾಪೂರ ಸರಕಾರಿ ಪ್ರಾಥಮಿಕ ಶಾಲೆಯ ಬಹು ಮಹಡಿ ಕಟ್ಟಡಕ್ಕೆ ಭೂಮಿ ಪೂಜೆ* …