Breaking News

ನಮ್ಮ ಕುಟುಂಬದ ಮೇಲಿಟ್ಟಿರುವ ಪ್ರೀತಿ, ವಿಶ್ವಾಸಗಳಿಗೆ ಸದಾ ಚಿರ ಋಣಿ; ಯುವ ನಾಯಕ ರಾಹುಲ್‌ ಜಾರಕಿಹೊಳಿ

Spread the love

ಗೋಕಾಕ- ಕೇವಲ ಸಂಪತ್ತು ಗಳಿಸಿದರೆ ಶ್ರೀಮಂತ ಎನಿಸಿಕೊಳ್ಳುವುದಿಲ್ಲ. ಬಡವರ ಕಷ್ಟ- ಕಾರ್ಪಣ್ಯಗಳಿಗೆ ಸ್ಪಂದಿಸುವ ವಿಶಾಲ ಹೃದಯ ಮುಖ್ಯವಾಗಿರುತ್ತದೆ. ನಮ್ಮ ಕುಟುಂಬದ ಮೇಲಿಟ್ಟಿರುವ ಪ್ರೀತಿ, ವಿಶ್ವಾಸಗಳಿಗೆ ಸದಾ ಚಿರ ಋಣಿಯಾಗಿರುವುದಾಗಿ ಯುವ ನಾಯಕ ರಾಹುಲ್‌ ಜಾರಕಿಹೊಳಿ ಹೇಳಿದರು.
ಇಲ್ಲಿಯ ಎನ್ ಎಸ್ ಎಫ್ ಕಚೇರಿಯಲ್ಲಿ ತಾಲ್ಲೂಕು ಕ್ರೈಸ್ತ ಸಮುದಾಯವರು ಹಮ್ಮಿಕೊಂಡ ಕ್ರಿಸ್ಮಸ್ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮಗೆ ಎಲ್ಲ ಜಾತಿಯ, ವಿವಿಧ ಧರ್ಮೀಯರು ಬೆನ್ನೆಲುಬಾಗಿ ನಿಂತಿದ್ದಾರೆ. ನಾವು ಮಾಡುತ್ತಿರುವ ಜನಪರ ಕಾರ್ಯಗಳನ್ನು ಮೆಚ್ಚ್ಕೊಂಡು ಜನರು ನಮ್ಮನ್ನು ಆಶೀರ್ವದಿಸುತ್ತಿದ್ದಾರೆ ಎಂದು ತಿಳಿಸಿದರು.
ನಾವು ಸಂಪತ್ತು ಗಳಿಸಿರುವ ಮಾತ್ರಕ್ಕೆ ಜನರು ನಮಗೆ ಶ್ರೀಮಂತರು ಅಥವಾ ಸಾಹುಕಾರರು ಎನ್ನುತ್ತಿಲ್ಲ. ದಿನದ ಯಾವುದೇ ಸಮಯದಲ್ಲೂ ನಾವು ಜನರ ಜೊತೆ ನಿಲ್ಲುತ್ತೇವೆ. ಅವರ ಯಾವುದೇ ಸಮಸ್ಯೆಗಳು ಇದ್ದರೆ ಕೂಡಲೇ ಅವುಗಳಿಗೆ ಸ್ಪಂದನೆ ಮಾಡುತ್ತೇವೆ. ಕಷ್ಟ- ಸುಖಗಳಲ್ಲಿ ನೆರವಾಗುವ ಮೂಲಕ ಅವರ ಹೃದಯಕ್ಕೆ ಹತ್ತಿರವಾಗಿ ನಿಲ್ಲುತ್ತೇವೆ. ಹೀಗಾಗಿಯೇ ನಮ್ಮನ್ನು ಎಲ್ಲ ಸಮಾಜದವರು ಯಾವ ತಾರತಮ್ಯವನ್ನು ಮಾಡದೇ ಪ್ರೀತಿಸುತ್ತಿದ್ದಾರೆ. ನಮ್ಮ ಕುಟುಂಬವು ಸಹ ಎಲ್ಲ ಸಮುದಾಯದವರಿಗೆ ಗೌರವಾದರಗಳನ್ನು ನೀಡುವ ಮೂಲಕ ಒಂದೇ
ಕುಟುಂಬದವರು ಎಂಬ ಭಾವನೆಗಳನ್ನು ಮೂಡಿಸುತ್ತಾರೆ ಎಂದು ಹೇಳಿದರು.
ನಮ್ಮ ದೇಶವು ವಿವಿಧತೆಯಲ್ಲಿ ಏಕತೆಯನ್ನು ಬಿಂಬಿಸುತ್ತಿರುವ ರಾಷ್ಟ್ರವಾಗಿದೆ. ನಮ್ಮಲ್ಲಿ ಯಾವುದೇ ಜಾತಿ- ಧರ್ಮದ ತಾರತಮ್ಯವಿಲ್ಲ. ಕ್ರೈಸ್ತ ಸಮುದಾಯದವರು ಕ್ರಿಸ್ಮಸ್ ಮುನ್ನಾ ದಿನ ಹಮ್ಮಿಕೊಂಡ ಕಾರ್ಯಕ್ರಮವನ್ನು ಶ್ಲಾಘಿಸಿದ ಅವರು, ಜಗತ್ತಿಗೆ ಶಾಂತಿ ಸಂದೇಶವನ್ನು ಸಾರಿದ ಏಸುಕ್ರಿಸ್ತನ ತತ್ವಗಳೂ ಇಂದಿಗೂ ಪ್ರಸ್ತುತವಾಗಿವೆ ಎಂದು ರಾಹುಲ್ ಜಾರಕಿಹೊಳಿ ತಿಳಿಸಿದರು.
ಮತ್ತೋರ್ವ ಯುವ ಧುರೀಣ ಸರ್ವೋತ್ತಮ ಜಾರಕಿಹೊಳಿ ಮಾತನಾಡಿ, ಕ್ರೈಸ್ತ ಸಮುದಾಯವು ಇಡೀ ಪ್ರಪಂಚದಾದ್ಯಂತ ಆವರಿಸಿಕೊಂಡಿದ್ದು, ಜಗತ್ತಿನಲ್ಲಿ ದೊಡ್ಡದಾದ ಧರ್ಮವನ್ನು ಹೊಂದಿದೆ. ನಮ್ಮಲ್ಲಿ ಅನೇಕ ಧರ್ಮಗಳು ಇದ್ದರೂ ಆಚರಣೆಗಳೂ ಮಾತ್ರ ಒಂದೇ. ಹಿಂದು- ಮುಸಲ್ಮಾನ- ಕ್ರೈಸ್ತ ಧರ್ಮದವರು ಒಂದೇ ಕುಟುಂಬದ ಸದಸ್ಯರಂತೆ ಬದುಕುತ್ತಿದ್ದೇವೆ. ನಮ್ಮ ಜಾರಕಿಹೊಳಿ ಕುಟುಂಬದ ಮೇಲಿಟ್ಟಿರುವ ಪ್ರೀತಿಗೆ ಸದಾ ಆಭಾರಿಯಾಗಿರುವುದಾಗಿ ಅವರು ತಿಳಿಸಿದರು.
ಅಧ್ಯಕ್ಷತೆಯನ್ನು ರೇ. ವಿಜಯಕುಮಾರ್ ವಹಿಸಿ ಸರ್ವ ಧರ್ಮಗಳ ರಕ್ಷಕರಾಗಿರುವ ಕೊಡುಗೈ ದಾನಿ ಜಾರಕಿಹೊಳಿ ಪರಿವಾರದವರಿಗೆ ಇನ್ನೂ ಹೆಚ್ಚಿನ ಅಧಿಕಾರ ಪ್ರಾಪ್ತಿ, ಆಯಸ್ಸು, ಶಕ್ತಿಯನ್ನು ನೀಡಲೆಂದು ಏಸುವಿನಲ್ಲಿ ವಿಶೇಷವಾಗಿ ಪ್ರಾರ್ಥಿಸಿದರು.
ವೇದಿಕೆಯಲ್ಲಿ ಶಾಸಕರ ಆಪ್ತ ಸಹಾಯಕ ನಾಗಪ್ಪ ಶೇಖರಗೊಳ, ಎಬಿನೇಜರ ಕರಬನ್ನವರ, ರೇ. ಸುಧಾಕರ,ಸತ್ಯಜೀತ ಕರವಾಡಿ, ಬಸವರಾಜ ಕಾಡಾಪೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಗೋಕಾಕ- ಮೂಡಲಗಿ ತಾಲ್ಲೂಕಿನ ಚರ್ಚಗಳ ಫಾಸ್ಟರರು, ಕ್ರೈಸ್ತ ಸಮುದಾಯದ ಮುಖಂಡರು ಇದರಲ್ಲಿ ಭಾಗಿಯಾಗಿದ್ದರು.
ಕೇಕ್ ಕತ್ತರಿಸುವ ಮೂಲಕ ರಾಹುಲ್ ಜಾರಕಿಹೊಳಿ ಮತ್ತು ಸರ್ವೋತ್ತಮ ಜಾರಕಿಹೊಳಿ ಅವರು ಕ್ರಿಸ್ಮಸ್ ಹಬ್ಬಕ್ಕೆ ಚಾಲನೆ ನೀಡಿದರು.


Spread the love

About Ad9 News

Check Also

ಟಿಎಪಿಸಿಎಂಎಸ್ ಗೆ ಅಶೋಕ ನಾಯಿಕ ಅಧ್ಯಕ್ಷ! ವಿಠ್ಠಲ ಪಾಟೀಲ ಉಪಾಧ್ಯಕ್ಷ ರಾಗಿ ಪುನರಾಯ್ಕೆ

Spread the love ಗೋಕಾಕ ಮಾ 3 : ಗೋಕಾಕ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘಕ್ಕೆ ನೂತನ …

Leave a Reply

Your email address will not be published. Required fields are marked *