Breaking News

ಕೊರೊನಾ ವೈರಸ್ ಹರಡದಂತೆ ಮುಂಜಾಗೃತ ಕ್ರಮಗಳ ಬಗ್ಗೆ ಸಾರ್ವಜನಿರಿಗೆ ಅರಿವು ಮೂಡಿಸುವ ಜಾತಾ ಕಾರ್ಯಕ್ರಮ

Spread the love

ಹಳ್ಳೂರ : ಸಾಮಾನ್ಯ ಘ್ಲೂ ಹರಡುವ ರೀತಿಯಲ್ಲಿಯೇ ಕೊರೊನಾ ಹರಡುತ್ತದೆ. ಸಾಮಾನ್ಯವಾಗಿ ಸೋಂಕಿತರು ಕೆಮ್ಮಿದಾಗ, ಸೀನಿದಾಗ ಈ ವೈರಸಗಳು ಹರಡುತ್ತವೆ. ವೈಯಕ್ತಿಕ ಸ್ವಚ್ಛತೆ ಇಲ್ಲದೇ ಮೂಗೂ, ಬಾಯಿ ಹೇಗೆಂದರೆ ಹಾಗೆ ಮುಟ್ಟುವುದರಿಂದಲೂ ಸೋಂಕು ಹರಡಬಹುದು ಎಂದು ಹಳ್ಳೂರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕರಿ ಮಹೇಶ್ ಕಂಕಣವಾಡಿ ಹೇಳಿದರು.

ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ಕೊರೊನಾ ವೈರಸ್ ಬಗ್ಗೆ ಮುಂಜಾಗೃತ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ಕೊರೊನಾ ಲಕ್ಷಣಗಳು ಕಂಡು ಬಂದ ವ್ಯಕ್ತಿಯ ಮೂಗು, ಗಂಟಲಿನ ಸ್ರಾವದ ಲೇಪನ ಮತ್ತು ರಕ್ತದ ಮಾದರಿಯನ್ನು ಪ್ರಯೋಗ ಶಾಲೆಯ ಪರೀಕ್ಷಗೆ ಒಳಪಡಿಸಿ, ಸೋಂಕನ್ನು ದೃಢಪಡಿಸಲಾಗುತ್ತದೆ ಮತ್ತು ಸಾರ್ವಜನಿಕರು ಮುಂಜಾಗೃತ ಕ್ರಮವಾಗಿ ಕೈಗಳ ಶುಚಿತ್ವ, ಕೆಮ್ಮುವಾಗ, ಸೀನುವಾಗ ಕೈವಸ್ತç ಉಪಯೋಗಿಸುವುದು, ಸೋಂಕು ಪೀಡಿತರ ಸಂಪರ್ಕದಿAದ ದೂರವಿರುವುದು, ಮಾಂಸ, ಮೊಟ್ಟೆ ಇತ್ತಾದಿಗಳನ್ನು ಚೇನ್ನಾಗಿ ಬೇಯಿಸಿ ಉಪಯೋಗಿಸಬೇಕು. ಕೆಲವು ದಿನಗಳ ಮಟ್ಟಿಗೆ ದೂರದ ಊರುಗಳಿಗೆ ಹೋಗುವುದು ಕಡಿಮೆ ಮಾಡಿ, ಸಂತೆ ಜಾತ್ರೆ, ಸಮಾರಂಭಗಳನ್ನು ೧೦೦ಕಿಂತ ಹೆಚ್ಚು ಜನ ಸೇರುವ ಕಾರ್ಯಕ್ರಮಗಳನ್ನು ಸರಕಾರ ನಿಷೇಧ ಮಾಡಿದಾರೆ.

ನಮ್ಮ ಗ್ರಾಮದಲ್ಲಿ ಕೆಮ್ಮು, ಸೀನು, ಜ್ವರ ಕಂಡು ಬಂದ ವ್ಯಕ್ತಿಯೂ ಕೂಡಲೇ ನಮ್ಮ ಆರೋಗ್ಯ ಕೇಂದ್ರಕ್ಕೆ ಬಂದು ತಪಾಸಣೆ ಮಾಡಿಕೊಳ್ಳಿ, ಕೆಲವು ದಿನಗಳ ಮಟ್ಟಿಗೆ ಪರಸ್ಥಳದಿಂದ ಬರುವ ವ್ಯಕ್ತಿಗಳ ಜೊತೆಗೆ ಸ್ವಲ್ಪ ದೂರದಿಂದ ಮಾತನಾಡಿ ಎಂದು ಹೇಳದಿರು.
ಕಾರ್ಯಕ್ರಮ ಮುಗಿದ ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಥಸಂಚಲನ ಮಾಡಿ ಜನರಲ್ಲಿ ಕೊರೊನಾ ವೈರಸ್ ಹರಡದಂತೆ ಅರಿವು ಮೂಡಿಸಿದ್ದರು.

ಕಾರ್ಯಕ್ರಮದಲ್ಲಿ ಗ್ರಾಪಂ ಉಪಾಧ್ಯಕ್ಷ ಉಮೇಶ ಸಂತಿ, ಗ್ರಾಮ ಲೇಕ್ಕಾಧಿಕಾರಿ ಸಂಜು ಅಗ್ನಪ್ಪಗೋಳ, ಪಶುವೈದ್ಯಾಧಿಕಾರಿ ವಿಶ್ವನಾಥ ಹುಕ್ಕೇರಿ, ಹಾಗೂ ಗ್ರಾಪಂ ಅಧಿಕಾರಿ ಮಂಜುನಾಥ ಕೋಹಳ್ಳಿ, ನಾಗಪ್ಪ ಮೋರೆ, ಹಾಗೂ ಶಾಲಾ ಶಿಕ್ಷಕರು, ಅಂಗನವಾಡಿ ಸಿಬ್ಬಂಧಿಗಳು ಮತ್ತು ಆಶಾ ಕಾರ್ಯಕರ್ತೆಯರು ಇದ್ದರು.


Spread the love

About Ad9 News

Check Also

ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಕೊಡಿಸಿ: ಡಾ. ಭೀಮಾಶಂಕರ ಎಸ್ ಗುಳೇದ

Spread the love  ರಾಯಬಾಗ: ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಕೊಡಿಸುವುದರ ಮೂಲಕ ಆದರ್ಶ ವ್ಯಕ್ತಿಗಳನ್ನಾಗಿ ರೂಪಿಸಿ ಎಂದು ಬೆಳಗಾವಿ ಎಸ್ …