ಮಧ್ಯ ಪ್ರದೇಶ: ಹಣ (Money) ಕಳೆದು ಹೋಗಿದೆ, ಚಿನ್ನ (Gold), ಆಭರಣ (Jewelry) ಕಳುವಾಗಿದೆ, ಮನೆ ಮುಂದೆ ನಿಲ್ಲಿಸಿದ್ದ ವಾಹನಗಳು (Vehicles) ಕಳುವಾಗಿದೆ ಅಂತ ಜನಸಾಮಾನ್ಯರು ದಿನನಿತ್ಯ ಪೊಲೀಸರಿಗೆ (Police) ದೂರು (Complaint) ಕೊಡುವುದನ್ನು ಕೇಳಿದ್ದೇವೆ.
ಕೆಲವು ಕೇಸ್ಗಳಲ್ಲಿ (Case) ಕಳೆದು ಹೋದ ವಸ್ತುಗಳನ್ನು ಪೊಲೀಸರು ಹುಡುಕಿ ಕೊಟ್ಟು, ಕಳ್ಳರಿಗೆ ಹೆಡೆಮುರಿ ಕಟ್ಟಿರುತ್ತಾರೆ. ಆದರೆ ಕೆಲವು ಪ್ರಕರಣದಲ್ಲಿ ಕಳ್ಳರೂ ಸಿಗೋದಿಲ್ಲ, ಕಳ್ಳತನವಾದ ವಸ್ತುವೂ ಸಿಗುವುದಿಲ್ಲ. ಆದರೆ ಮಧ್ಯ ಪ್ರದೇಶದಲ್ಲೊಂದು (Madhya Pradesh) ವಿಚಿತ್ರ ಪ್ರಕರಣ ನಡೆದಿದೆ. ರೈತನೊಬ್ಬ (Farmer) ತನ್ನ ಚಪ್ಪಲಿ (Slipper) ಕಳುವಾಗಿದೆ ಅಂತ ಪೊಲೀಸ್ ಠಾಣೆ (Police Station) ಮೆಟ್ಟಿಲೇರಿದ್ದಾನೆ.
ಪೊಲೀಸ್ ಠಾಣೆ ಮೆಟ್ಟಿಲೇರಿದ ರೈತ
ಮಧ್ಯ ಪ್ರದೇಶದ ಉಜ್ಜಯಿನಿ ಜಿಲ್ಲೆಯಲ್ಲಿ ಖಚ್ರೋಡ್ ಪೊಲೀಸ್ ಠಾಣೆಗೆ ಬಡ ರೈತನೊಬ್ಬ ಬಂದಿದ್ದ. ಅದರಲ್ಲೇನೂ ವಿಶೇಷ ಇಲ್ಲ ಬಿಡಿ, ಆದರೆ ಆತ ಬಂದ ಕಾರಣ ಮಾತ್ರ ವಿಚಿತ್ರವಾಗಿತ್ತು. ಹರಿದು ಹೋದ ಅಂಗಿ, ಬಟ್ಟೆ ತೊಟ್ಟು ಕಾಲಿಗೆ ಚಪ್ಪಲಿ ಇಲ್ಲದೇ ರೈತ ಬಂದಿದ್ದ. ಆತನನ್ನು ನೋಡಿದ ಪೊಲೀಸರು, ಏನು ನಿನ್ನ ಸಮಸ್ಯೆ ಅಂತ ವಿಚಾರಿಸಿದ್ದಾರೆ. ಆಗ ಆತ ಹೇಳಿದ ಮಾತು ಕೇಳಿ ಪೊಲೀಸರೇ ಒಂದು ಕ್ಷಣ ಹೌಹಾರಿದ್ದಾರೆ. ಅಂದ ಹಾಗೇ ರೈತ ಜೀತೆಂದ್ರ ಎಂಬಾತ, ತನ್ನ ಸ್ನೇಹಿತನೊಂದಿಗೆ ಬಂದು ಪೊಲೀಸ್ ಠಾಣೆಯಲ್ಲಿ ಕಂಪ್ಲೇಂಟ್ ಕೊಟ್ಟಿದ್ದಾನೆ.
ಚಪ್ಪಲಿ ಹುಡುಕಿಕೊಡುವಂತೆ ರೈತನ ಮನವಿ
ರೈತ ತನ್ನ ಚಪ್ಪಲಿ ಕಳೆದು ಹೋಗಿದೆ, ಅದನ್ನು ಹುಡುಕಿಕೊಡಿ ಸ್ವಾಮಿ ಅಂತ ಪೊಲೀಸರ ಮುಂದೆ ಬೇಡಿಕೊಂಡಿದ್ದಾನೆ. 180 ರೂಪಾಯಿ ಕೊಟ್ಟು ನಾನು ಚಪ್ಪಲಿ ಖರೀದಿ ಮಾಡಿದ್ದೆ. ಕಪ್ಪು ಬಣ್ಣದ ಚಪ್ಪಲಿ ಖರೀದಿ ಮಾಡಿದ್ದೆ. ಆದರೆ ಅದನ್ನು ಕಳ್ಳರು ಕದ್ದೊಯ್ದಿದ್ದಾರೆ. ದಯವಿಟ್ಟು ಅದನ್ನು ಹುಡುಕಿಕೊಟ್ಟು, ನನಗೆ ತಲುಪಿಸಿ ಅಂತ ಮನವಿ ಮಾಡಿದ್ದಾನೆ.
ರೈತನ ಮಾತು ಕೇಳಿ ನಕ್ಕ ಪೊಲೀಸರು
ರೈತನ ಮಾತು ಕೇಳುತ್ತಿದ್ದಂತೆ ಪೊಲೀಸರಿಗೆ ಆಶ್ಚರ್ಯ, ನಗು ಏಕಕಾಲಕ್ಕೆ ಉಂಟಾಗಿದೆ. ಮೊದ ಮೊದಲು ಈತ ಹೇಳಿದ ಮಾತು ಕೇಳಿ ಕೆಲ ಪೊಲೀಸರು ನಕ್ಕಿದ್ದಾರೆ. ಅದನ್ನು ಕೇಳಿ ಆತ ಬೆಚ್ಚಿಬಿದ್ದ. ತನ್ನ ಚಪ್ಪಲಿ ಕಳ್ಳತನದ ಹಿಂದೆ ಪಿತೂರಿ ಇದೆ ಅಂತ ರೈತಸ ಆರೋಪಿಸಿದ್ದಾನೆ. ಅಂತಿಮವಾಗಿ ಅವರ ಕಂಪ್ಲೈಂಟ್ ಸ್ವೀಕರಿಸಲಾಯಿತು. ಇನ್ನು ರೈತ ಜೀತೆಂದ್ರ ಅವರು ತಮ್ಮ ಕೆಲವು ಸಾಕ್ಷ್ಯಗಳನ್ನು ಪೊಲೀಸರಿಗೆ ಹಸ್ತಾಂತರಿಸಿದರು. ಅವರಿಂದ ಸಾಕ್ಷ್ಯ ಪಡೆದು.. ದೂರು ಸ್ವೀಕರಿಸಿದ ಪೊಲೀಸರು ತನಿಖೆ ನಡೆಸಲಿದ್ದಾರೆ ಎಂದು ಸ್ಪಷ್ಟಪಡಿಸಿದರು.