ಮೂಡಲಗಿ: ಭಾರತೀಯ ಸೈನಿಕರು ಗಡಿಯಲ್ಲಿ ತಮ್ಮ ಪ್ರಾಣ ಒತ್ತೆಯಿಟ್ಟು ಯುದ್ದ, ನೈಸರ್ಗೀಕ-ವಿಕೋಪದಂತಹ ಸನ್ನಿವೇಶಗಳಲ್ಲಿ ದೈರ್ಯವಾಗಿ ಹೊರಾಡುತ್ತಾರೆ. ಇಂತಹ ಸೈನಿಕರಿಗೆ ಗೌರವ ಸಲ್ಲಿಸಲು ಈ ದಿನವನ್ನು ಸೇನಾ ದಿನಾಚರಣೆಯಾಗಿ ಮಿಸಲಿಡಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕ ಲಕ್ಷ್ಮಣ ವಾಯ್. ಅಡಿಹುಡಿ ಹೇಳಿದರು.
ಅವರು ಮಂಜುನಾಥ ಸೈನಿಕ ತರಬೇತಿ ಕೇಂದ್ರದಲ್ಲಿ ಸೇನಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾರತ ಮಾತೆ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಭಾರತೀಯ ಸೇನೆಯಲ್ಲಿ ಕೊಡಗಿನ ಕೆ. ಎಮ್. ಕರಿಯಪ್ಪ ಮೊದಲ ಭಾರತೀಯ ಕಮಾಂಡರ್ ಇನ್ ಚೀಪ್ ಆಗಿ ಅಧಿಕಾರ ಸ್ವಿಕರಿಸಿದರು. ಅದರ ನೆನಪಿಗಾಗಿ ಸೇನಾ ದಿನವನ್ನು ಆಚರಿಸಲಾಗುತ್ತದೆ. ಭಾರತೀಯ ಸೇನೆಯ ಸಮರ್ಪಣಾ ಮನೋಭಾವ ಹಾಗು ತ್ಯಾಗದ ಮನೋಭಾವದ ಬಗ್ಗೆ ನಾವು ಇಂದು ಸ್ಮರಿಸಬಹುದು ಎಂದರು.
ಕಾರ್ಯಕ್ರಮದಲ್ಲಿ ಮಂಜುನಾಥ ಕುಂಬಾರ, ಹನಮಂತ ಅಂಗಡಿ, ರಾಘು ಗಂಗನ್ನವರ, ಪರಸಪ್ಪ ಕೊಡಗನೂರ, ವಿಜಯ ಆಡಿನವರ, ಮತ್ತು ಆರ್ಮಿ ತರಬೇತಿಯ ನೂರಾರು ಸಿಬಿರಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಮಂಜುನಾಥ ಸೈನಿಕ ತರಬೇತಿ ಕೇಂದ್ರದಲ್ಲಿ ಸೇನಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾರತ ಮಾತೆ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸಂಸ್ಥೆಯ ಸಂಸ್ಥಾಪಕ ಲಕ್ಷ್ಮಣ ವಾಯ್. ಅಡಿಹುಡಿ ಮಾತನಾಡಿದರು.