Breaking News
Home / Uncategorized / ಭಾರತೀಯ ಸಂಸ್ಕøತಿಯಲ್ಲಿ ಗುರುವಿಗೆ ಅತ್ಯಂತ ಮಹತ್ವದ ಸ್ಥಾನ ಇವತ್ತಿಗೂ ಇದೆ

ಭಾರತೀಯ ಸಂಸ್ಕøತಿಯಲ್ಲಿ ಗುರುವಿಗೆ ಅತ್ಯಂತ ಮಹತ್ವದ ಸ್ಥಾನ ಇವತ್ತಿಗೂ ಇದೆ

Spread the love


ಮೂಡಲಗಿ: ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ಶ್ರೀ ಶಿವಬೋಧರಂಗ ಪ್ರೌಢ ಶಾಲೆಯ 2003-04ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಂದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಅಂತ್ಯಂತ ಅರ್ಥ ಪೂರ್ಣವಾಗಿ ಜರುಗಿತು.
ಕಳೆದ ಇಪ್ಪತ್ತು ವರ್ಷಗಳ ನಂತರ ಎಲ್ಲ ಸ್ನೇಹಿತರು ಕುಡಿಕೊಂಡು ತಮಗೆ ವಿದ್ಯೆ ಕಲಿಸಿದ ಸುಮಾರು 20 ಜನ ಗುರು ಬಳಗ ಮತ್ತು ಸಿಬ್ಬಂದಿ ವರ್ಗದವರನ್ನು ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟನೆ ಮುಂಚೆ ಕಾರ್ಯಕ್ರಮದ ಸವಿನೆನಪಿಗಾಗಿ ದೇವಸ್ಥಾನದ ಆವರಣದಲ್ಲಿ ಸಸಿ ನೆಟ್ಟು ಕಾರ್ಯಕ್ರಮದ ವೇದಿಕೆಗೆ ಪುಷ್ಪ ಸುರಿಮಳೆಗೈದು ಆರತಿ ಬೆಳಗಿ ಬರಮಾಡಿಕೊಂಡು ಎಲ್ಲ ಗುರುವೃಂದದವರನ್ನು ಪಾದ ಪೂಜೆ ನೆರವೇರಿಸಿ ಮತ್ತು ಸತ್ಕರಿಸಿ ಗೌರವಿಸಿದರು ಮತ್ತು ಅಗಲಿದ ಗುರುಗಳಿ ಮೌನಾರ್ಚನೆ ನೆರವೇರಿಸುವು ಮೂಲಕ ನಮಿಸಿದರು.
ನಿವೃತ್ತ ಶಿಕ್ಷಕರಾದ ವಿ.ಎಸ್.ಹಂಚಿನಾಳ, ಆರ್.ಟಿ.ಲಂಕೆಪ್ಪನ್ನವರ, ಸಿ.ಎಂ.ಹಂಜಿ ಮಾತನಾಡಿ, ಭಾರತೀಯ ಸಂಸ್ಕøತಿಯಲ್ಲಿ ಗುರುವಿಗೆ ಅತ್ಯಂತ ಮಹತ್ವದ ಸ್ಥಾನ ಇವತ್ತಿಗೂ ಇದೆ. ವಿದ್ಯೆ ಕಲಿಸಿದ ಗುರುವನ್ನು ಭಗವಂತನಿಗೂ ಮಿಗಿಲಾದ ಸ್ಥಾನದಲ್ಲಿಟ್ಟು ಪೂಜೆಸಲಾಗುವುದು. ಹಳೆಯ ವಿದ್ಯಾರ್ಥಿಗಳು ಕಲಿಸಿದ ಗುರುಗಳನ್ನು ಅವರ ಸಂದ್ಯಾಕಾಲದಲ್ಲಿ ಕರೆಸಿ ಗೌರವಿಸಿ ಅವರಿಗೆ ನಮನಗಳನ್ನು ಸಲ್ಲಿಸುವುದು ಗುರುಗಳ ಪಾಲಿಗೆ ಅತ್ಯಂತ ಸಾರ್ಥಕತೆಯ ಕ್ಷಣಗಳು ಎಂದರು.
ಇಂತಹ ಕಾರ್ಯಕ್ರಮಗಳನ್ನು ಏರ್ಪಡಿಸುವ ನಮ್ಮ ನಾಡಿನ ಆಚಾರ-ವಿಚಾರ, ಸಂಸ್ಕøತಿ ಮತ್ತು ಗಣತೆ ಗೌರವನ್ನು ಕಾಪಾಡಿದಂತಾಗುತ್ತದೆ ಎಂದರು
ಹಳೆಯ ವಿದ್ಯಾರ್ಥಿಗಳಾದ ಈರಪ್ಪ ಢವಳೇಶ್ವರ, ಹನಮಂತ ಗುಡ್ಲಮನಿ, ಸಂಗೀತಾ ತಳವಾರ, ಬಸವರಾಜ ನಾಯಕ , ಶೀಲಾ ನಿಲನ್ನವರ, ಸುರೇಶ ಮನ್ನಾಪೂರ, ಹೊಳ್ಳೆಪ್ಪ ಗಡ್ಡಿ, ಮಲ್ಲೇಶ ಉಪ್ಪಾರ, ಸಂತೋಷ ಮಂಗಸೂಳಿ ಸೇರಿದಂತೆ ಅನೇಕರು ಮಾತನಾಡಿ, ನಾವು ಇಂದು ಏನಾದರೂ ಗಳಿಸಿದ್ದರೆ ಅದೆಲ್ಲವೂ ಗುರುಗಳು ನೀಡಿದ ವಿದ್ಯೆಯಿಂದ ಮಾತ್ರ, ಈ ಸಮಾಜದಲ್ಲಿ ಒಳ್ಳೆಯಾದಾಗೂವ ರೀತಿಯಲ್ಲಿ ಏನ್ನನಾದರೂ ಕೆಲಸ ಮಾಡಿದರೆ ಅಕ್ಷರ ಕಲಿಸಿದ ಗುರುಗಳು, ಜನ್ಮ ಕೊಟ್ಟ ತಂದೆ-ತಾಯಿಗಳಿಗೆ ಸ್ವಲ್ಪವಾದರೂ ಋಣವನ್ನು ತೀರಿಸಲು ಸಾಧ್ಯವಾಗುತ್ತದೆ ಎಂದರು.
ವೇದಿಕೆಯಲ್ಲಿ ಶಿಕ್ಷಕರಾದ ಬಿ.ಬಿ.ಲಗಳಿ, ಸಿ.ಎಸ್ ಕಾಂಬಳೆ, ಎ.ಆರ್ ಶೇಗುಣಶಿ, ಆರ್.ಎಮ್ ಕಾಂಬಳೆ, ಪಿ ಅಯ್ಯನಗೌಡರ, ಯು.ಬಿ.ದಳವಾಯಿ, ಕೆ.ಎಸ್.ಹೊಸಟ್ಟಿ, ಆರ್.ಬಿ.ಗಂಗರಡ್ಡಿ, ಬಿ.ಕೆ.ಕಾಡಪ್ಪಗೋಳ, ಎಸ್.ಎಸ್.ಕುರಣೆ, ಶಿಕ್ಷಕಿ ಎಸ್ ಡಿ ವಾಯಕ್, ಮಹಾನಂದ ಕೊಣ್ಣೂರ, ಬಿ ವಾಯ್.ಶಿವಾಪೂರ, ವ್ಹಿ.ಪಿ.ಸೌದಾಗರ, ಎಮ್.ಐ.ಶೆಟ್ಟರ ಉಪಸ್ಥಿತರಿದ್ದರು.
ಸಂಜು ಮಾವನೂರ, ಶಿವಗೊಂಡ ಗೋಕಾಕ ನಿರೂಪಿಸಿದರು, ಬಸು ಗೋಕಾಕ ಸ್ವಾಗತಿಸಿದರು, ಇರ್ಷಾದ ಇನಾಮದಾರ ವಂದಿಸಿದರು.


Spread the love

About Ad9 Haberleri

Check Also

ಮೂಡಲಗಿ: ಐದು ಸೇತುವೇಗಳು ಜಲಾವೃತ್ತ ಸಂಚಾರ ಅಸ್ಥವ್ಯಸ್ಥ

Spread the love ಮೂಡಲಗಿ: ಹಿರಣ್ಯಕೇಶ ನದಿಯಿಂದ ಘಟಪ್ರಭಾ ನದಿಗೆ ಸುಮಾರು 16 ಸಾವಿರ ಕ್ಯೂಸೇಕ್ಸ್ ನೀರು ಹರಿದು ಬರುತ್ತಿರುವ …

Leave a Reply

Your email address will not be published. Required fields are marked *