Breaking News
Home / ಬೆಳಗಾವಿ / ಮಕ್ಕಳಿಗೆ ಪೌಷ್ಠಿಕ ಆಹಾರ ನೀಡುವದರಿಂದ ಅವುಗಳು ಸದೃಡವಾಗಿ ಇರುತ್ತವೆ

ಮಕ್ಕಳಿಗೆ ಪೌಷ್ಠಿಕ ಆಹಾರ ನೀಡುವದರಿಂದ ಅವುಗಳು ಸದೃಡವಾಗಿ ಇರುತ್ತವೆ

Spread the love

ಮೂಡಲಗಿ : ಮಕ್ಕಳಿಗೆ ಪೌಷ್ಠಿಕ ಆಹಾರ ನೀಡುವದರಿಂದ ಅವುಗಳು ಸದೃಡವಾಗಿ ಇರುತ್ತವೆ, ಮಕ್ಕಳು ಸರಿಯಾದ ಆಹಾರ ಸೇವಿಸಿದರೆ ಅವುಗಳು ಯಾವದೆ ತೊಂದರೆ ಇರದೆ ಬೇಳೆಯುತ್ತವೆ ಸದೃಡ ದೇಹ ಮಾತ್ರವೇ ಸಾಧನೆ ಮಾಡಲು ಸಾಧ್ಯ ಎಂದು ಮೂಡಲಗಿ ಸಮುದಾಯ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿ ಡಾ ಭಾರತಿ ಕೋಣಿ ಹೇಳಿದರು.

ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಲಕ್ಷ್ಮಿ ನಗರದ ಅಂಗನವಾಡಿ 411 ಶಾಲೆಯಲ್ಲಿ ಬೇಬಿ ಶೋ ಮತ್ತು 6 ತಿಂಗಳಿoದ 1 ವರ್ಷದ ಮಕ್ಕಳಿಗೆ ಹಮ್ಮಿಕೊಂಡ ಮೇಲು ಆಹಾರದ ಕಾರ್ಯಕ್ರಮದಲ್ಲಿ ಬಟ್ಟಲು ವಿತರಿಸಿ ಮಾತನಾಡಿದರು,
ಮಕ್ಕಳಿಗೆ ಅಕ್ಕಿ, ರಾಗಿ, ಗೋದಿಗಳಲ್ಲಿ ಸಾಕಷ್ಟು ಪೌಷ್ಠಿಕ ಅಂಶಗಳು ಇರುತ್ತವೆ ಅಂತಹ ಆಹಾರವನ್ನು ನೀಡಬೇಕು ಜಂಕ್ ಪುಡಗಳಾದ ಚಾಕಲೇಟ ಮತ್ತು ಕುರಕರೆಯಂತಹ ಆಹಾರದಿಂದ ದೂರ ಇಡಬೇಕು ಎಂದರು,
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಸಾಹಾಯಕ ಅಧಿಕಾರಿ ರೇಣುಕಾ ಹೊಸಮನಿ ಮಾತನಾಡಿ, ಮಕ್ಕಳನ್ನು ತಾಯಂದಿರು ಸ್ವಚ್ಚವಾಗಿ ಇಟ್ಟುಕೊಳ್ಳಬೇಕು ಪ್ರತಿದಿನ ಮಕ್ಕಳನ್ನು ಶಾಲೆಗೆ ಕಳಿಸಿ ಅವು ಉಲ್ಲಾಸದಿಂದ ಇರುವಂತೆ ನೋಡಿಕೊಳ್ಳಬೇಕು ಎಂದರು
ಪುರಸಭೆ ಸದಸ್ಯೆ ಖುರಷಾದ ಅನ್ವರ ನಧಾಪ ಅಂಗನವಾಡಿ ಕಾರ್ಯಕರ್ತೆರಾದ ಸಾವಿತ್ರಿ ಕಂಕನವಾಡಿ, ಸುಶೀಲಾ ಮದಗುಣಕಿ, ಶೋಭಾ ಗೋಕಾಕ, ಆಯಿಶಾ ಡಾಂಗೆ, ಲಕ್ಷ್ಮಿ ಬಿರಡಿ,ಜಯಶ್ರೀ ಮಠಪತಿ, ಕಲಾವತಿ ನಂದಗಾವಮಠ, ರೇಖಾ ಹೊಸಮನಿ ಮತ್ತು ವಿಜಯಲಕ್ಷ್ಮಿ ಶೇರೆಗಾರ, ಚಂದ್ರವ್ವಾ ಕಟ್ಟಿಮನಿ ಉಪಸ್ಥಿತರಿದ್ದರು,
ಮೂಡಲಗಿ ವಲಯದ ಅಂಗನವಾಡಿ ಮೇಲ್ವಿಚಾರಕಿ ಕೆ ಸಿ ಕನಶೇಟ್ಟಿ ಸ್ವಾಗತಿಸಿದರು, 411 ಅಂಗನವಾಡಿ ಕಾರ್ಯಕರ್ತೆ ಸ್ವೇತಾ ಶೇರೆಗಾರ ವಂದಿಸಿದರು


Spread the love

About Ad9 Haberleri

Check Also

ಶಾಸಕ ಬಾಲಚಂದ್ರ ಜಾರಕಿಹೊಳಿಯವರ ನೇತೃತ್ವದಲ್ಲಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಚುನಾವಣೆಯಲ್ಲಿ 13 ಸ್ಥಾನಗಳಿಗೆ ಅವಿರೋಧ ಆಯ್ಕೆ

Spread the loveಪಕ್ಷಾತೀತ, ಜಾತ್ಯತೀತವಾಗಿ ಅವಿರೋಧವಾಗಿ ಆಯ್ಕೆಯಾಗಲು ಬೆಂಬಲಿಸಿ ಸಹಕರಿಸಿದ ಎಲ್ಲ ಮುಖಂಡರಿಗೆ ಕೃತಜ್ಞತೆ ಅರ್ಪಿಸಿದ ಶಾಸಕ, ಅವಿರೋಧ ಆಯ್ಕೆಯ …