ಮೂಡಲಗಿ: ಕೊರೋನಾ ವೈರಸ್ ಸೋಂಕು ನಿಯಂತ್ರಣದ ಲಾಕ್‌ಡೌನ್ ಸಮಯದಲ್ಲಿ ಬಿಸಿಲು, ಗಾಳಿ ಲೆಕ್ಕಿಸದೆ ಕರ್ತವ್ಯ ನಿರ್ವಹಿಸುತ್ತಿರುವ ಪೋಲಿಸ ಸಿಬ್ಬಂದಿಗೆ. ಮತ್ತು ನಿರ್ಗತಿಕ ಕುಟುಂಬಗಳಿಗೆ ಹಾಗೂ ಪತ್ರಕರ್ತರಿಗೆ ಇಲ್ಲಿಯ ಚಿನ್ಮಯ ಕೃಷಿ ಕೇಂದ್ರದ ಮಾಲಿಕ ರಾಘು ಕೊಕಟನೂರ ಪೊಲೀಸ್ ಠಾಣೆಯ ಆವರಣದಲ್ಲಿ ಊಟದ ವ್ಯವಸ್ಥೆ ಮಾಡಿದರು.
ಊಟ ವಿತರಿಸಿ ಮಾತನಾಡಿದ ಅವರು, ಈ ಲಾಕ್‌ಡೌನ ಸಮಯದಲ್ಲಿ ಕೊರೋನಾ ಯೋಧರಾಗಿ ಸಾರ್ವಜನಿಕರ ರಕ್ಷಣೆಗಾಗಿ ಕಾರ್ಯ ನಿರ್ವಹಿಸುತ್ತಿರುವ ಪೋಲಿಸ ಸಿಬ್ಬಂದಿಗಳ ಕಾರ್ಯ, ಪತ್ರಕರ್ತರ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯತ ಸದಸ್ಯ ನಿಂಗಪ್ಪ ಚಿನ್ನಾಕಟ್ಟಿ, ರಾಮಚಂದ್ರ ಪಾಟೀಲ, ನಾಗಪ್ಪ ಎಡವನ್ನವರ,ಹನೀಫ್ ಡಾಂಗೆ,ಪ್ರದೀಪ ದರೂರ, ಚಂದ್ರು ತೇಲಿ ಉಪಸ್ಥಿತರಿದ್ದರು.