ಮೂಡಲಗಿ : ಇತ್ತೀಚೆಗೆ ಹರಡುತ್ತಿರುವ ಮಹಾಮಾರಿ ಕೊರೋನಾ ರೋಗದ ಮುನ್ನೆಚ್ಚರಿಕೆ ಕ್ರಮವಾಗಿ ಸರಕಾರವು ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ತ್ತಿದೆ. ಜನ ಕೂಡ ಎಚ್ಚರಿಕೆ ವಹಿಸುತ್ತಿದ್ದಾರೆ. ಸ್ಪಂದಿಸುತ್ತಿದ್ದಾರೆ ಕೂಡ.
ಇಂತಹ ಒಂದು ಕಠಿಣ ಪರಿಸ್ಥಿತಿಯ ನಡುವೆ ಯಾರೋ ಕಿಡಿಗೇಡಿಗಳು, ವಾಟ್ಸ್ ಆಪ್ ಮೂಲಕ ಮೂಡಲಗಿಯಲ್ಲಿ ಶಂಕಿತ ಕೊರೋನಾ ಸೋಂಕಿತ ವ್ಯಕ್ತಿ ಯನ್ನು ಪತ್ತೆ ಹಚ್ಚಿದ್ದಾರೆ ಎಂಬ ಸುಳ್ಳು ವದಂತಿ ಹಬ್ಬಿಸಿರುವ ಹಿನ್ನೆಲೆ ಯಲ್ಲಿ ಯಾರೂ ಭಯಪಡಬಾರದು, ಈ ಕುರಿತು ವದಂತಿ ಹರಡುತ್ತಿರುವ ಇಂಥ ವ್ಯಕ್ತಿಗಳನ್ನು ಬಂಧಿಸಿ ಕೂಡಲೇ ಇಂಥವರ ವಿರುದ್ಧ ಕ್ರಮ ಕೈಗೊಳ್ಳಲು ಪತ್ರಕತ೯ರೊಬ್ಬರು ಸ್ಥಳೀಯ ಆರಕ್ಷಕ ಅಧಿಕಾರಿ ಗಮನಕ್ಕೆ ತಂದಿದ್ದಾರೆ. ಹಾಗೂ
ವೈದ್ಯಾಧಿಕಾರಿಗಳನ್ನೂ ಭೆಟ್ಟಿ ಮಾಡಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಯಾವುದೇ ಕಾರಣಕ್ಕೂ ಸಾರ್ವಜನಿಕರು ಸುಳ್ಳು ವದಂತಿ ಗೆ ಹೆದರದೆ, ತಮ್ಮ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಹೇಳಿದರು.
