ಮೂಡಲಗಿ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕಂಪ್ಯೂಟರ ಜ್ಞಾನ ಅವಶ್ಯವಾಗಿದೆ. ರಾಜ್ಯ ಹಾಗು ಕೇಂದ್ರ ಸರ್ಕಾರದ ವಿವಿಧ ಇಲಾಖೆಯಲ್ಲಿ ಸೇವೆ ಸಲ್ಲಿಸಲು ಆನಲೈನ್ ಮುಖಾಂತರ ಅರ್ಜಿ ಕರೆಯುತ್ತಾರೆ ಮತ್ತು ಆನಲೈನ್ ಮುಖಾಂತರ ಪ್ರತಿಯೊಂದು ಉದ್ಯೋಗ ಮಾಹಿತಿಯನ್ನು ತಿಳಿಯಬಹುದು ಎಂದು ಸುರಕ್ಷಾ ಪ್ಯಾರಾ ಮೆಡಿಕಲ್ ಪ್ರಾಂಶುಪಾಲರಾದ ಸೋಮೇಶ ಹಿರೇಮಠ ಹೇಳಿದರು.
ಅವರು ಮೂಡಲಗಿ ಬಸ್ ನಿಲ್ದಾಣದ ಹತ್ತಿರ ನೂತನವಾಗಿ ಪ್ರಾರಂಭಿಸಿದ ಮಂಜುನಾಥ ಆನಲೈನ್ ಸೆಂಟರ ಉದ್ಘಾಟಿಸಿ ಮಾತನಾಡುತ್ತಾ, ನಿರುದ್ಯೋಗ ಯುವಕರಿಗೆ ಉದ್ಯೋಗ ಮಾಹಿತಿ ಸಿಗುವುದರಿಂದ ತಮ್ಮ ವಿದ್ಯಾರ್ಹತೆಗೆ ಅನುಗುಣವಾಗಿ ನೌಕರಿ ಹಿಡಿಯಲು ಅನುಕೂಲವಾಗುತ್ತದೆ ಎಂದರು.
ನ್ಯಾಯವಾದಿ ವಾಯ್. ಎಸ್.ಖಾನಟ್ಟಿ ಮಾತನಾಡುತ್ತಾ, ಮಂಜುನಾಥ ಸೈನಿಕ ತರಬೇತಿ ಕೇಂದ್ರದಲ್ಲಿ ಕರ್ನಾಟಕ ಅಷ್ಟೆ ಅಲ್ಲದೆ ಬೇರೆ ಬೇರೆ ರಾಜ್ಯಗಳಿಂದ ಆರ್ಮಿ ಮತ್ತು ಪೋಲಿಸ ಪೂರ್ವಭಾವಿ ತರಬೇತಿಗೆ ಬರುವುದು ನಮ್ಮ ಬೆಳಗಾವಿ ಜಿಲ್ಲೇಗೆ ಹೆಮ್ಮೇಯ ವಿಷಯ ಅಷ್ಟೇ ಅಲ್ಲದೆ ಕಂಪ್ಯೂಟರ ಕ್ಲಾಸ್, ಡ್ರೈವ್ಹೀಂಗ್ ತರಬೇತಿ ಹಾಗು ಶಿಕ್ಷಣ ಕ್ಷೇತ್ರದಲ್ಲಿ ಈ ಸಂಸ್ಥೆ ಒಳ್ಳೆಯ ಸಾಧನೆ ಮಾಡಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಕೊಡಲು ಈ ಸಂಸ್ಥೆ ವಿದ್ಯಾರ್ಥಿಗಳ ಪಾಲಿಗೆÀ ಆಶಾಕಿರಣವಾಗಿದೆ ಎಂದರು.
ಸಂಸ್ಥೇಯ ಸಂಸ್ಥಾಪಕ ಲಕ್ಷ್ಮಣ ವಾಯ್. ಅಡಿಹುಡಿ ಮಾತನಾಡಿ, ನಮ್ಮ ಶಿಕ್ಷಣ ಸಂಸ್ಥೆ ವಿವಿಧ ರಂಗದಲ್ಲಿ ಬೆಳೆಯಲು ಕಾರಣ ೀಬೂತರಾದ ಮೂಡಲಗಿ ಹಾಗೂ ಸುತ್ತಮುತ್ತಲಿನ ಜನರ ಸಹಕಾರವೆ ಕಾರಣ ಎಂದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಬಸವರಾಜ ಬಿ. ಶೆಕ್ಕಿ, ಮಲ್ಲಿಕಾರ್ಜುನ ನೇಸರಗಿ, ರಾಮಣ್ಣಾ ಮಂಟೂರ, ವಿಶಾಲ ಶೆಕ್ಕಿ, ಪರಶುರಾಮ ಕೋಡಗನೂರ, ಶಿವಬಸು ಶೆಕ್ಕಿ, ಕೆಂಪಣ್ಣ ಮಾವನೂರಿ, ಮಂಜುನಾಥ ಕುಂಬಾರ ಮತ್ತೀತರು ಉಪಸ್ಥಿತರಿದ್ದರು.