Breaking News

ಭೈರನಟ್ಟಿಯ ರಾಮಲಿಂಗೇಶ್ವರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ಮೂಡಲಗಿ

Spread the love


ಮೂಡಲಗಿ: ಭೈರನಟ್ಟಿಯ ರಾಮಲಿಂಗೇಶ್ವರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಪ್ರಥಮ ಶಾಖೆಯು ಮೂಡಲಗಿಯಲ್ಲಿ ಫೆ. ಶುಕ್ರವಾರ 7 ರಂದು ಮದ್ಯಾಹ್ನ 12-15 ಕ್ಕೆ ಲಕ್ಷ್ಮೀನಗರದ ಸರಕಾರಿ ಆಸ್ಪತ್ರೆ ಹತ್ತಿರ ಕುರಿಬಾಗಿ(ಸನದಿ) ಕಾಂಪ್ಲೆಕ್ಸ್‍ನಲ್ಲಿ ಪ್ರಾರಂಭೋತ್ಸವ ಜರುಗಲಿದೆ ಎಂದು ಪ್ರಕಟನೆಯಲ್ಲಿ ಪ್ರಧಾನ ಬ್ಯಾಂಕ ಅಧ್ಯಕ್ಷ ಗಿರೆಪ್ಪ ಈರಡ್ಡಿ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ಸ್ಥಳೀಯ ಸಿದ್ಧ ಸಂಸ್ಥಾನ ಮಠದ ಪೀಠಾಧಿಕಾರಿ ಶ್ರೀ ಶ್ರೀಪಾದಬೋಧ ಮಹಾಸ್ವಾಮೀಜಿ, ಸುಣಧೋಳಿ ಜಡಿಸಿದ್ದೇಶ್ವರ ಮಠದ ಅಭಿನವ ಶಿವಾನಂದ ಮಹಾಸ್ವಾಮಿಜಿ ವಹಿಸುವರು. ಅಧ್ಯಕ್ಷತೆಯನ್ನು ಗಿರೆಪ್ಪ ಈರಡ್ಡಿ, ಉದ್ಘಾಟಕರಾಗಿ ನಿವೃತ್ತ ವೈದ್ಯಾಧಿಕಾರಿ ಡಾ. ಆರ್ ಎಸ್ ಬೆಣಚಿನಮರಡಿ, ಜ್ಯೋತಿ ಬೆಳಗಿಸುವರು ನಿವೃತ್ತ ಪ್ರಾಚಾರ್ಯ ಪ್ರೊ ಎಸ್ ಎಮ್ ಕಮದಾಳ, ಮುಖ್ಯ ಅತಿಥಿಗಳಾಗಿ ರಾಜ್ಯ ಸಹಕಾರಿ ಮಹಾ ಮಂಡಳ ನಿರ್ದೇಶಕ ತಮ್ಮಣ್ಣ ಕೆಂಚರಡ್ಡಿ, ಪುರಸಭೆ ಸದಸ್ಯ ಗಫಾರ ಡಾಂಗೆ, ಅತಿಥಿ ಭಾಷಣಕಾರರಾಗಿ ಗಂಗಾಧರ ಬಿಜಗುಪ್ಪಿ ಉಪಸ್ಥಿತರಿರುವರು ಎಂದು ತಿಳಿಸಿದ್ದಾರೆ.


Spread the love

About Ad9 News

Check Also

ಬಿಡಿಸಿಸಿ ಬ್ಯಾಂಕ ನಿರ್ದೇಶಕ ಸ್ಥಾನದಿಂದ ಅನರ್ಹ : ಜಿ ಎಮ್ ಪಾಟೀಲ ಆದೇಶ

Spread the love   ಗೋಕಾಕ: ತಾಲೂಕಿನ ಅಂಕಲಗಿ ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಅಂಕಲಗಿ ಸೋಸೈಟಿಯ …