Breaking News

ಎನ್‍ಸಿಡಿಎಫ್‍ಆಯ್ ನಿರ್ದೇಶಕರಾಗಿ ಕಹಾಮ ನಿರ್ದೇಶಕ ಬಾಲಚಂದ್ರ ಜಾರಕಿಹೊಳಿ ಪುನರಾಯ್ಕೆ

Spread the love

 

*ಅಧ್ಯಕ್ಷರಾಗಿ ಮೀನೇಶ್ ಷಾ ಅಧಿಕಾರ ಸ್ವೀಕಾರ*

*ಗುಜರಾತ್ ರಾಜ್ಯದ ಆನಂದ್ ನಗರದಲ್ಲಿ ನಡೆದ ಆಡಳಿತ ಮಂಡಳಿಯ ಚುನಾವಣೆ*

ಬೆಂಗಳೂರು: ಕಹಾಮ ನಿರ್ದೇಶಕ, ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ, ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ರಾಷ್ಟ್ರೀಯ ಸಹಕಾರಿ ಡೈರಿ ಮಹಾ ಮಂಡಲ (ಎನ್‍ಸಿಡಿಎಫ್‍ಆಯ್)ದ ನಿರ್ದೇಶಕರಾಗಿ ಪುನ:ರಾಯ್ಕೆಯಾಗಿದ್ದಾರೆ.
ಗುಜರಾತ್ ರಾಜ್ಯದ ಆನಂದ್ ನಗರದಲ್ಲಿ ಏ-4 ರಂದು ನಡೆದ ಮಹಾ ಮಂಡಲದ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಬಾಲಚಂದ್ರ ಜಾರಕಿಹೊಳಿ ಅವರು ಮುಂದಿನ 5 ವರ್ಷಗಳ ಅವಧಿಗೆ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದಂತೆ ಡಾ||ಮೀನೇಶ್ ಶಾ (ಜಾರ್ಖಂಡ ಹಾಲು ಒಕ್ಕೂಟ), ಡಾ|| ಮಂಗಲ್‍ಜೀತ್ ರಾಯ್ (ಸಿಕ್ಕಿಂ ಹಾಲು ಒಕ್ಕೂಟ), ಶಾಮಲ್‍ಭಾಯ್ ಪಟೇಲ್ (ಗುಜರಾತ ಹಾಲು ಒಕ್ಕೂಟ), ರಣಧೀರ್ ಸಿಂಗ್ (ಹರಿಯಾಣ ಹಾಲು ಒಕ್ಕೂಟ), ಕೆ.ಎಸ್.ಮಣಿ (ಕೇರಳ ಹಾಲು ಒಕ್ಕೂಟ), ನರೀಂದರ್ ಸಿಂಗ್ ಶೇರ್ಗಿಲ್ (ಪಂಜಾಬ ಹಾಲು ಒಕ್ಕೂಟ), ಸಮೀರ್ ಕುಮಾರ್ ಪರೀದಾ (ಪಶ್ಚಿಮ್ ಆಸ್ಸಾಂ ಹಾಲು ಒಕ್ಕೂಟ) ಹಾಗೂ ಎನ್‍ಡಿಡಿಬಿ ನಿರ್ದೇಶಕ ಎಸ್.ರೇಗುಪತಿ ಅವರು ನಾಮನಿರ್ದೇಶಿತ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಶುಕ್ರವಾರ ಏ-5 ರಂದು ಜರುಗಿದ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಜಾರ್ಖಂಡ್ ಹಾಲು ಒಕ್ಕೂಟದ ಡಾ||ಮೀನೇಶ್ ಶಾ ಅವರು ಅವಿರೋಧವಾಗಿ ಆಯ್ಕೆಯಾದರೆಂದು ಚುನಾವಣಾಧಿಕಾರಿಯಾಗಿದ್ದ ಆನಂದ್ ಜಿಲ್ಲಾಧಿಕಾರಿ ಪ್ರವೀಣ ಚೌಧರಿ ಪ್ರಕಟಿಸಿದರು.


*ಏನಿದು*
*ಎನ್‍ಸಿಡಿಎಫ್‍ಆಯ್?*
ಎನ್ ಸಿಡಿಎಫ್ಐ
ಸಹಕಾರಿ ಡೈರಿಗಳ ರಾಷ್ಟ್ರೀಯ ಒಕ್ಕೂಟವಾಗಿದ್ದು, ಸಹಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಡೈರಿ ಸಹಕಾರಿ ಸಂಘಗಳ ಕಾರ್ಯಾಚರಣೆಯನ್ನು ಸುಗಮಗೊಳಿಸುವ ಉದ್ದೇಶದಿಂದ ರೂಪಗೊಂಡಿರುವ ಎನ್‍ಸಿಡಿಎಫ್‍ಆಯ್ ರಾಜ್ಯ ಸಹಕಾರ ಡೈರಿ ಫೇಡರೇಷನ್‍ಗಳು, ಅಪೇಕ್ಸ್ ಯೂನಿಯನ್‍ಗಳು, 240 ಜಿಲ್ಲೆಯ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟಗಳು, 2.30 ಲಕ್ಷ ಗ್ರಾಮ ಸಹಕಾರಿ ಹಾಲು ಉತ್ಪಾದಕರು, ತಳಮಟ್ಟದಲ್ಲಿರುವ ಸಮಾಜಗಳು ಒಟ್ಟಾರೆಯಾಗಿ ಈ ಸಹಕಾರಿ ಸಂಘಗಳು ಸದಸ್ಯತ್ವವನ್ನು ಪಡೆದಿದ್ದು, 180 ಲಕ್ಷಕ್ಕೂ ಅಧಿಕ ರೈತರು ಅದರಲ್ಲಿ 60 ಲಕ್ಷ ಮಹಿಳಾ ಸದಸ್ಯರು ಇದರಲ್ಲಿ ಸದಸ್ಯತ್ವವನ್ನು ಹೊಂದಿದ್ದಾರೆ. ಹಾಲು ಮತ್ತು ಹಾಲಿನ ಪೂರೈಕೆಯನ್ನು ಸುಗಮಗೊಳಿಸುವಲ್ಲಿ ಎನ್‍ಸಿಡಿಎಫ್‍ಆಯ್ ನಿರ್ಣಾಯಕವಾಗಿದ್ದು, 400 ವಿವಿಧ ರಕ್ಷಣಾ ಘಟಕಗಳಿಗೆ ಅದರ ಸಾಂಸ್ಥಿಕ ಮಾರಾಟ ವಿಭಾಗದ ಅಡಿಯಲ್ಲಿ ಉತ್ಪನ್ನಗಳು, ರಕ್ಷಣಾ ಸಚಿವಾಲಯದ ಅಢಿಯಲ್ಲಿ ಸೇನೆ, ವಾಯುಪಡೆ, ನೌಕಾ ಪಡೆ, ಮತ್ತು ಆಯ್‍ಟಿಬಿಪಿ ಹಲವಾರು ಘಟಕಗಳು ಗೃಹ ವ್ಯವಹಾರಗಳ ಸಚಿವಾಲಯದಲ್ಲಿ ಕಾರ್ಯನಿರ್ವಹಿಸುತ್ತಿದೆ. ವಾರ್ಷಿಕ ಸುಮಾರು 6 ಸಾವಿರ ಕೋಟಿ ರೂಗಳ ವ್ಯಾಪಾರ ವಹಿವಾಟು ನಡೆಸುವ ದೇಶದಲ್ಲಿಯೇ ಅತಿ ದೊಡ್ಡದಾದ ಹಿರಿಮೆಗೆ ಎನ್‍ಸಿಡಿಎಫ್‍ಆಯ್ ಪಾತ್ರವಾಗಿದೆ ಎಂದು ಮಹಾ ಮಂಡಲದ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ ಸಜ್ಜ ಅವರು ಸಂಸ್ಥೆಯ ಮಾಹಿತಿ ನೀಡಿದರು.
ಈ ಸಂಸ್ಥೆಗೆ ಕರ್ನಾಟಕ ಹಾಲು ಒಕ್ಕೂಟದಿಂದ ಅರಭಾವಿ ಶಾಸಕರೂ ಆಗಿರುವ ಕೆಎಮ್‍ಎಫ್ ನಿರ್ದೇಶಕ ಬಾಲಚಂದ್ರ ಜಾರಕಿಹೊಳಿ ಅವರು ಸತತ 2ನೇ ಅವಧಿಗೆ ಆಯ್ಕೆಯಾಗಿರುವುದು ಕರ್ನಾಟಕಕ್ಕೆ ಹೆಮ್ಮೆಯಾಗಿದೆ.

 


Spread the love

About Ad9 News

Check Also

ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ `ಮೇಜರ್ ಸರ್ಜರಿ’ : 23 ಡಿವೈಎಸ್ ಪಿ, 192 `PSI’ ಗಳ ವರ್ಗಾವಣೆ

Spread the loveರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ `ಮೇಜರ್ ಸರ್ಜರಿ’ : 23 ಡಿವೈಎಸ್ ಪಿ, 192 `PSI’ ಗಳ …

Leave a Reply

Your email address will not be published. Required fields are marked *