
ತೊಂಡಿಕಟ್ಟಿ: ರಾಮದುರ್ಗ ತಾಲೂಕಿನ ತೊಂಡಿಕಟ್ಟಿ ಗ್ರಾಮದಲ್ಲಿ ಶ್ರೀ ಅವಧೂತ ಗಾಳೇಶ್ವರ ಜಾತ್ರಾಮಹೋತ್ಸವ ಅಂಗವಾಗಿ ಗ್ರಾಮದ ಶ್ರೀ ಗಾಳೇಶ್ವರ ತರುಣ ನಾಟ್ಯ ಸಂಘ ಮತ್ತು ಜೈ ಹನುಮಾನ ಯುವಕ ಮಂಡಳ ಆಶ್ರಯದಲ್ಲಿ ಶುಕ್ರವಾರ ಜ.12 ರಂದು ರಾತ್ರಿ 10=30ಕ್ಕೆ ಹುಬ್ಬಳ್ಳಿ ಸಿಂಗಿAಗ್ ಸ್ಟಾರ್ ಮೆಲೋಡಿಸ್ ಆರ್ಕೆಸ್ಟಾçದಿಂದ ಸಂಗೀತ ಸಂಭ್ರಮ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲ್ಲಾಗಿದೆ ಎಂದು ಸಂಘಟಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಸಮಾರಂಭ ಸಾನ್ನಿಧ್ಯವನ್ನು ಅವಧೂತ ಗಾಲೇಶ್ವರ ಮಠದ ಶ್ರೀ ವೆಂಕಟೇಶ ಮಹಾರಾಜರು ವಹಿಸುವರು, ಅಧ್ಯಕ್ಷತೆಯನ್ನು ತೊಂಡಿಕಟ್ಟಿ ಗ್ರಾ.ಪಂ ಮಾಜಿ ಅಧ್ಯಕ್ಷ ಮತ್ತು ಹಾಲಿ ಸದಸ್ಯ ರಾಮಕೃಷ್ಣ ದೇಸಾಯಿ ವಹಿಸುವರು, ರಾಮದುರ್ಗ ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಉದ್ಘಾಟಿಸುವರು, ಅತಿಥಿಗಳಾಗಿ ಜನಪ್ರತಿನಿಧಿಗಳು, ಮುಖಂಡರು ಉದ್ಯಮಿಗಳು ಭಾಗವಹಿಸುವರು. ಇದೇ ಸಂಧರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಗೈದ ಸಾಧಕರಾದ ಕಮಕೇರಿಯ ಡಾ.ತಿಮ್ಮಣ್ಣ ಅರಳಿಕಟ್ಟಿ, ಮುಧೋಳದ ಮಲ್ಲಪ್ಪ ಪತ್ತೆನ್ನವರ, ಧರ್ಮಟ್ಟಿಯ ಕೆಂಚಪ್ಪ ಪಾಟೀಲ, ಹೊಸಕೋಟಿಯ ವಾಯ್.ಎಸ್.ರಾಮರಾವ ಮತ್ತು ಕುಳ್ಳೂರಿನ ಮಹೇಶ ದೇಶನೂರ ಅವರಿಗೆ ಸನ್ಮಾನ ಸಮಾರಂಭ ಜರುಗಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಜೀ ಕನ್ನಡ ಸರಿಗಮಪ ಖ್ಯಾತಿಯ ಹಣಮಂತ ಲಮಾಣಿ ಸೇರಿದಂತೆ ವಿವಿಧ ಕಲಾವಿದರಿಂದ ಸಂಗೀತ ಸಂಭ್ರಮ ಕಾರ್ಯಕ್ರಮ ಜರುಗುಲಿದೆ.
Ad9 News Latest News In Kannada