ತೊಂಡಿಕಟ್ಟಿ: ರಾಮದುರ್ಗ ತಾಲೂಕಿನ ಸುಕ್ಷೇತ್ರ ತೊಂಡಿಕಟ್ಟಿ ಗ್ರಾಮದಲ್ಲಿ ಶ್ರೀ ಅವಧೂತ ಗಾಳೇಶ್ವರ ಮಹಾಸ್ವಾಮಿಗಳ 79ನೇ ಪುಣ್ಯಾರಾಧನೆ ಹಾಗೂ ಬ್ರಹ್ಮೈಕ್ಯ ಶ್ರೀ ಪುಂಡಲೀಕ ಮಹಾರಾಜರ 84 ನೇ ಹುಟ್ಟು ಹಬ್ಬದ ಮತ್ತು ಕಿರೀಟ ಪೂಜಾ ಕಾರ್ಯಕ್ರಮ ಜ.೧೧ ರಿಂದ ೧೫ ರವರಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶ್ರೀ ಅವಧೂತ ಗಾಳೇಶ್ವರ ಮಠದ ಪೀಠಾಧಿಪತಿ ಶ್ರೀ ಅಭಿನವ ವೇಂಕಟೇಶ್ವರ ಮಹಾರಾಜರ ಸಾನ್ನಿಧ್ಯದಲ್ಲಿ ಸಡಗರ ಸಂಭ್ರಮದಿಂದ ಜರುಗಲಿದೆ.
ಜ.11 ರಂದು ಬೆಳಿಗ್ಗೆ ಕರ್ತೃ ಗದ್ದುಗೆಗಳಿಗೆ ಅಭಿಷೇಕ, ಗೀತಾ ಪಾರಾಯಣ, ಕಳಸಾರೋಹಣ, ಸಾಯಂಕಾಲ ವಿವಿಧ ಮಹಾತ್ಮರಿಂದ ಪ್ರವಚನ, ಕೀರ್ತನೆ ನಂತರ ಮಕ್ಕಳಿಂದ ಸಂಸ್ಕೃತಿಕ ಕಾರ್ಯಕ್ರಮ ಹಾಗೂ ವಿವಿಧ ಭಜನಾ ತಂಡಗಳಿಂದ ಜಾಗರಣೆ ಜರುಗುವುದು.
ಜ.12ರಂದು ಮುಂಜಾನೆ 11 ಗಂಟೆಗೆ ಕ್ಕೆ ಗ್ರಾಮದ ಪ್ರಮುಖದ ರಸ್ತೆಗಳಲ್ಲಿ ಶ್ರೀಗಳ ಅಶ್ವಾರೋಹಣ ಮೆರವಣಿಗೆ, ಮಹಾಪ್ರಸಾದ ಹಾಗೂ ಸಂಜೆ5 ಗಂಟೆಗೆ ಮಹಾರಥೋತ್ಸವ, ರಾತ್ರಿ7=30 ರಿಂದ 10=30ರವರಿಗೆ ಪ್ರವಚನ, ಕೀರ್ತನೆ, ಶ್ರೀಗಳ ತುಲಾಭಾರ, ತೊಟ್ಟಿಲೋತ್ಸವ ಹಾಗೂ ಮನರಂಜನಾ ಕಾರ್ಯಕ್ರಮ ಜರುಗಲಿವೆ.
ಜ.11ರಂದು ಮುಂಜಾನೆ 11 ರಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ, ಸಂಜೆ 7 ರಿಂದ ವೆಂಕಟೇಶ್ವರ ವಿದ್ಯಾನಿಕೇತನ ಶಾಲಾ ವಾರ್ಷಿಕೋತ್ಸವ ಮತ್ತು ಶಾಲಾ ಮಕ್ಕಳಿಂದ ಭಕ್ತಿ ಸಂಗೀತ ಮನರಂಜಾನ ಕಾರ್ಯಕ್ರಮ ಜರುಗಲಿವೆ. ಜ.14 ರಂದು ಪುಣ್ಯಾರಾಧನೆ ನಿಮಿತ್ಯ ವಿವಿಧ ಶರ್ತು, ಬಯಲಾಟಗಳು ಜರುಗಲಿವೆ. ಜ.15ರಂದು ಸಂಜೆ 6ಕ್ಕೆ ಸಹಸ್ರ ದೀಪೋತ್ಸವ ಕಳಸರೋಹಣ ಕಾರ್ಯಕ್ರಮ ಜರುಗಲಿದೆ.
ಪ್ರವಚನ ಮತ್ತು ಕೀರ್ತನೆ ಕಾರ್ಯಕ್ರಮದಲ್ಲಿ ಬೆಳಗಾವಿಯ ಸ್ವಾಮಿ ಚಿತ್‌ಪ್ರಕಾಶಾನಂದ ಸರಸ್ವತಿ ಶ್ರೀಗಳು, ಕುಳ್ಳೂರದ ಶ್ರೀ ಬಸವಾನಂದಭಾರತಿ ಸ್ವಾಮಿಜಿ, ನೇಸರಗಿ-ಮಲ್ಲಪೂರದ ಶ್ರೀ ಚಿದಾನಂದ ಸ್ವಾಮಿಜಿ ಹುಣಶ್ಯಾಳ ಪಿಜಿಯ ಶ್ರೀ ನಿಜಗುಣ ದೇವರು, ಗು-ಹೊಸಕೋಟಿಯ ಶ್ರೀ ಅಭಿನವ ರೆವಯ್ಯ ಸ್ವಾಮಿಜಿ,ಕೋಟಬಾಗಿಯ ಪ್ರಭುದೇವ ಶ್ರೀಗಳು, ಬಿಜಗುಪ್ಪಿಯ ಶ್ರೀ ಸುವೃತಾನಂದ ಸ್ವಾಮಿಜಿ, ತಿಮ್ಮಾಪೂರದ ಶ್ರೀ ಬಸವರಾಜ ಸ್ವಾಮಿಜಿ, ದಾದನಟ್ಟಿಯ ಶ್ರೀ ನಿಜಾನಂದ ಸ್ವಾಮಿಜಿ,
ಮಲ್ಲಾಪೂರ ಪಿಜಿಯ ಶ್ರೀ ಸದಾನಂದ ಸ್ವಾಮಿಜಿ, ಹಡಗಿನಾಳದ ಶಿವಶರಣ ಮಲ್ಲನಗೌಡರು,ಯರಗಟ್ಟಿಯ ಶ್ರೀ ಗಣಪತಿ ಮಹಾರಾಜರು, ಅಮ್ಮಲಝರಿಯ ಶರೀಫ ಶಾಸ್ತಿçಗಳು, ಕರಿಕಟ್ಟಿಯ ಶ್ರೀ ಕೀರ್ತನಕೇಸರಿ ಗುರುನಾಥ ಶಾಸ್ತ್ರೀಗಳು ಭಾಗವಹಿಸುವರು ಎಂದು ಶ್ರೀ ಅವಧೂತ ಗಣೇಶ್ವರ ಮಠದ ಪೀಠಾಧಿಪತಿಗಳಾದ ಶ್ರೀ ವೆಂಕಟೇಶ್ವರ ಮಹಾರಾಜರು ತಿಳಿಸಿದ್ದಾರೆ