ತೊಂಡಿಕಟ್ಟಿ: ರಾಮದುರ್ಗ ತಾಲೂಕಿನ ಸುಕ್ಷೇತ್ರ ತೊಂಡಿಕಟ್ಟಿ ಗ್ರಾಮದಲ್ಲಿ ಶ್ರೀ ಅವಧೂತ ಗಾಳೇಶ್ವರ ಮಹಾಸ್ವಾಮಿಗಳ 79ನೇ ಪುಣ್ಯಾರಾಧನೆ ನಿಮಿತ್ಯ ರಥೋತ್ಸವ ಅಪಾರ ಜನ ಸಾಗರದ ಜಯಘೋಷಣೆಯೊಂದಿಗೆ ಶ್ರೀ ಮಠದ ಪೀಠಾಧಿಪತಿ ಶ್ರೀ ಅಭಿನವ ವೆಂಕಟೇಶ ಮಹಾರಾಜರ ಸಾನ್ನಿಧ್ಯದಲ್ಲಿ ಸಡಗರ ಸಂಭ್ರಮದಿಂದ ಜರುಗಿತು.
ಪ್ರತಿ ವರ್ಷ ಏಳ್ಳ ಅಮವಾಸ್ಯೆ ದಿನದಿಂದ ಐದು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯು ಜಾತ್ರಾ ಮಹೋತ್ಸವ ಶುಕ್ರವಾರ ಎರಡನೇ ದಿನದಂದು ಸಂಜೆ ಗಾಳೇಶ್ವರ ರಥೋತ್ಸಕ್ಕೆ ಶ್ರೀ ವೆಂಕಟೇಶ ಮಹಾರಾಜರು ಪೂಜೆ ಸಲ್ಲಿಸಿ ರಥೋತ್ಸವದಲ್ಲಿ ಆಸಿನರಾಗಿ ಜಯಘೋಷನೆಯೊಂದಗೆ ಚಾಲನೆ ನೀಡಿದರು. ತಳಿಲು ತೋರಣ ಹಾಗೂ ಹೂ ಮಾಲೆಗಳಿಂದ ಶೃಂಗರಿಸಲಾಗಿದ ರಥೋತ್ಸವ ಗಾಳೇಶ್ವರ ದೇವಸ್ಥಾನದ ಮುಂಭಾಗದಿoದ ಪಾದಗಟ್ಟಿಯವರಿಗೆ ಸಾಗಿ ಪೂಜೆ ಸಲ್ಲಿಸಿ ಮರಳಿ ದೇವಸ್ಥಾನದ ಮುಂಭಾಗದವರಿಗೆ ರಥೋತ್ಸವ ಜರುಗಿತು. ರಥೋತ್ಸವ ಸಂಧರ್ಭದಲ್ಲಿ ಅಪಾರ ಭಕ್ತ ಸಮೂಹ ರಥೋತ್ಸವಕ್ಕೆ ಬಾಳೆ ಹಣ್ಣು, ಬೆಂಡು-ಬೆತ್ತಾಸು, ಕಾರಿಕು, ತೆಂಗಿನಕಾಯಿ ಭಕ್ತಿ ಭಾವದಿಂದ ಸಮರ್ಪಿಸಿ ತಮ್ಮ ಹರಕೆಯನ್ನು ತಿರಿಸಿ ಪುನಿತರಾದರು. ರಥೋತ್ಸವದಲ್ಲಿ ವಾಧ್ಯ ಮೇಳಗಳು ಮೇರಗು ನೀಡಿದವು.
ರಥೋತ್ಸವದಲ್ಲಿ ತೊಂಡಿಕಟ್ಟಿ, ಬುದ್ನಿಖುರ್ದ, ಗುತ್ತಿಗೋಳಿ-ಹೊಸಕೋಟಿ, ಕಮಕೇರಿ, ಚಿಪಲಕಟ್ಟಿ, ಬಿಜಗುಪ್ಪಿ, ಕೂಳ್ಳೂರು, ಕುನ್ನಾಳ, ಅಡಿಗಿನಾಳ ಸೇರಿಂದಂತೆ ವಿವಿಧ ತಾಲೂಕಿನ ಮತ್ತು ವಿವಿಧ ಜಿಲ್ಲೆಗಳ ಭಕ್ತರು ಪಾಲ್ಗೊಂಡಿದರು.