
ರಾಮದುರ್ಗ: ಮೂಡಲಗಿ ತಾಲೂಕಿನ ನಾಗನೂರ ಪಟ್ಟಣದ ನಾಗನೂರ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ೧೫ನೇ ಶಾಖೆಯ ಉದ್ಘಾಟನಾ ಸಮಾರಂಭ ತಾಲೂಕಿನ ಸಾಲಹಳ್ಳಿ ಗ್ರಾಮದ ಮಹಾಂತೇಶ ನಗರದ ಶ್ರೀರಾಮ್ ಕಟ್ಟಡದಲ್ಲಿ ಶುಕ್ರವಾರ ಜು.೨೫ ರಂದು ಮುಂ.೧೧ ಗಂಟೆಗೆ ಜರುಗಲಿದೆ.
ಸಮಾರಂಭದ ಸಾನ್ನಿಧ್ಯವನ್ನು ಸುಣಧೋಳಿಯ ಶ್ರೀ ಶಿವಾನಂದ ಮಹಾಸ್ವಾಮಿಗಳು, ಚಿಪ್ಪಲಕಟ್ಟಿಯ ಶ್ರೀ ಅಭಿನವ ಶಿದ್ಧಲಿಂಗ ಶಿವಾಚಾರ್ಯರು, ಕುಳ್ಳೂರದ ಶ್ರೀ ಬಸವಾನಂದ ಭಾರತಿ ಮಹಾಸ್ವಾಮಿಗಳು ವಹಿಸುವರು. ಶಾಸಕ ಅಶೋಕ ಪಟ್ಟಣ ಮತ್ತು ಧನಲಕ್ಷಿö್ಮÃ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಮಲ್ಲಣ್ಣ ಯಾದವಾಡ ಉದ್ಘಾಟಿಸುವರು. ಸಹಕಾರಿ ಅಧ್ಯಕ್ಷ ಬಸವರಾಜ ತಡಸನವರ ಅಧ್ಯಕ್ಷತೆ ವಹಿಸುವರು, ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಬೆಳಗಾವಿ ಪ್ರಾಂತೀಯ ವ್ಯವಸ್ಥಾಪಕ ಬಸವರಾಜ ಹೊಂಗಲ ರಾಮದುರ್ಗ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಶಿವನಗೌಡ ಧರಣಗೌಡರ, ಕಂದಪೂರ ಗ್ರಾ.ಪಂ ಅಧ್ಯಕ್ಷ ಹಣಮಂತ ಮಡ್ಡಿ, ಬಿಡಿಸಿಸಿ ಬ್ಯಾಂಕ್ ನಿವೃತ್ತ ಶಾಖಾ ವ್ಯವಸ್ಥಾಪಕ ಬಾಳಗೌಡ ಪಾಟೀಲ, ಲೆಕ್ಕ ಪರಿಶೋಧಕ ಸೈದಪ್ಪ ಗದಾಡಿ, ಸಹಕಾರಿಯ ಸಾಲಹಳ್ಳಿ ಶಾಖಾ ಅಧ್ಯಕ್ಷ ಪ್ರವೀಣ ಕೊಪ್ಪದ ಮತ್ತಿತರರು ಭಾಗವಹಿಸುವರು ಎಂದು ಸಹಕಾರಿ ಪ್ರಧಾನ ವ್ಯವಸ್ಥಾಪಕ ಪ್ರಕಾಶ ಅಂಗಡಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ
 Ad9 News Latest News In Kannada
Ad9 News Latest News In Kannada
				 
		 
						
					 
						
					 
						
					