ರಾಯಬಾಗ: ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಕೊಡಿಸುವುದರ ಮೂಲಕ ಆದರ್ಶ ವ್ಯಕ್ತಿಗಳನ್ನಾಗಿ ರೂಪಿಸಿ ಎಂದು ಬೆಳಗಾವಿ ಎಸ್ ಪಿ . ಭೀಮಾಶಂಕರ ಎಸ್ ಗುಳೇದ ಅವರು
ಅಭಿಪ್ರಾಯಪಟ್ಟರು.
ರಾಯಬಾಗ ತಾಲೂಕಿನ ಇಟ್ನಾಳ ಗ್ರಾಮದ ಶಾಂತಿ ಶಿಕ್ಷಣ ಸಂಸ್ಥೆಯ ವಿದ್ಯಾಚೇತನ ರೆಸಿಡೆನ್ಸಿಯಲ್ ಶಾಲೆಯ ನೂತನ ಕೊಠಡಿಯ ಉದ್ಘಾಟನೆ ಹಾಗೂ ರತ್ನವ್ವ ಅಪ್ಪಯ್ಯ ತೇರದಾಳ ದಂಪತಿಗಳ 50ನೇ ವಿವಾಹ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ.
ನಾನು ಕೂಡ ಗ್ರಾಮೀಣ ಭಾಗದಿಂದಲೇ ಬಂದವನು. ಇಂದು ನನ್ನ ತಂದೆ ತಾಯಿ ಉತ್ತಮವಾದ ಶಿಕ್ಷಣ ಕೊಡಿಸಿದ ಫಲವೇ ನಾನಿಂದು ನಿಮ್ಮ ಮುಂದೆ ಐ ಪಿ ಎಸ್ ಅಧಿಕಾರಿಯಾಗಿ ನಿಲ್ಲುವಂತಾಗಿದೆ, ಅಂಥಹ ಉತ್ತಮ ಶಿಕ್ಷಣದ ಗುರಿಯನ್ನು ಇಟ್ಟುಕೊಂಡು ತೇರದಾಳ ಬಂಧುಗಳು ಪ್ರಾರಂಭಿಸಿರುವ ಈ ಶಿಕ್ಷಣ ಸಂಸ್ಥೆ ಮುಂದೊಂದು ದಿನ ಹೆಮ್ಮರವಾಗಿ ಬೆಳೆಯಲಿ ಎಂದರು. ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ ಸಿದ್ಧಶಿವಯೋಗಿ ಅಮರೇಶ್ವರ ಮಹಾರಾಜರು ರತ್ನವ್ವ ಅಪ್ಪಯ್ಯ ತೇರದಾಳ ದಂಪತಿಗಳ ವಿವಾಹ ವಾರ್ಷಿಕೋತ್ಸವ ನಿಮಿತ್ತ ಜರುಗಿದ ಈ ಪುಸ್ತಕ ತುಲಾಭಾರ ಕಾರ್ಯಕ್ರಮ ಇದು ಜ್ಞಾನದ ತುಲಾಭಾರ. ಇಂದಿನ ಯುವ ಪೀಳಿಗೆ ಮೊಬೈಲ್ ಗಳನ್ನು ಹಿಡಿದುಕೊಂಡು ಕಾಲಹರಣ ಮಾಡದೇ ದಿನಕ್ಕೊಂದು ಪುಸ್ತಕ ಓದಿ ಜ್ಞಾನ ವೃದ್ಧಿಮಾಡಿಕೊಳ್ಳಿ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಗೋಪಾಲ ತೇರದಾಳ ವಹಿಸಿಕೊಂಡಿದ್ದರು.
ಈ ಸಂದರ್ಭದಲ್ಲಿ ಶ್ರೀ ಶಿವಾನಂದ ಮಹಾಸ್ವಾಮೀಜಿ ಜಡೇಸಿದ್ಧೇಶ್ವರ ಮಾಡಿ ಸುಣಧೋಳಿ, ಪರಮಾನಂದ ಮಹಾರಾಜರು, ಸಿದ್ದೇಶ್ವರ ಮಹಾಸ್ವಾಮೀಜಿ, ಸಿಂಧನೂರಿನ ಪ್ರಧಾನ ದಿವಾಣಿ ನ್ಯಾಯಾಧೀಶರಾದ ಬಿ ಕೆ ಮನಗುತ್ತಿ, ಇಂಡಿ ಸಿವಿಲ್ ನ್ಯಾಯಾಧೀಶರಾದ ಈಶ್ವರ ಎಸ್ ಎಮ್, ಬಾಗಲಕೋಟ ಅಬಕಾರಿ ಜಿಲ್ಲಾಧಿಕಾರಿ ಶಿವಲಿಂಗ ಬನಹಟ್ಟಿ, ಡಿ ವೈ ಎಸ್ ಪಿ (ಸಿಐಡಿ) ಮುತ್ತಣ್ಣ ಸರವ್ವಗೋಳ, ಡಿವೈಎಸ್ಪಿ ಶಾಂತವೀರ, ರಾಯಬಾಗ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜಪ್ಪ ಆರ್, ಶಾಂತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಗೋಪಾಲ ತೇರದಾಳ ಸೇರಿದಂತೆ ಎಲ್ಲ ಗಣ್ಯಮಾನ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕ ಬಿ ಎಲ್ ಘಂಟಿ ನೆರವೇರಿಸಿದರು.