Breaking News

ಸಣ್ಣಪುಟ್ಟ ರೋಗ ಇದ್ದರೆ ನೋಡಲ್ಲ! ಸೀರಿಯಸ್ ಇದ್ದರೆ ಮಾತ್ರ ಚಿಕಿತ್ಸೆ

Spread the love

ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಅರಕೇರ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗಾಗಿ ಬರುವ ರೋಗಿಗಳಿಗೆ ಸಣ್ಣಪುಟ್ಟ ಇದ್ದರೆ ನೋಡುವುದಿಲ್ಲವಂತೆ ಸೀರಿಯಸ್ ರೋಗಿಗಳಿಗೆ ಬಹಳ ತೊಂದರೆ ಇದ್ದರೆ ಮಾತ್ರ ಚಿಕಿತ್ಸೆಯನ್ನು ನೀಡುತ್ತಾರೆಂದು ಅಲ್ಲಿನ ಸಿಬ್ಬಂದಿ ವರ್ಗದವರು ಹೇಳುತ್ತಾರೆ.

ಹಾಗಾದರೆ ಇವರಿಗೆ ಸಿರೀಯಸ ಪೇಷಂಟ್ ಯಾವ ರೀತಿಯಾಗಿ ಬರಬೇಕು.ಸಣ್ಣ ಪುಟ್ಟ ಇರುವ ಪೇಷಂಟ್ ಯಾವ ರೀತಿಯಾಗಿ ಬರಬೇಕು ಎಂದು ಆಲೋಚಿಸಿಬೇಕಾದ ವಿಷಯ, ಈಗಿನ ಒಂದು ಭಯದ ವಾತಾವರಣದಲ್ಲಿ ಸಣ್ಣ ಪುಟ್ಟ ರೋಗಗಳಿಂದ ಭಯಾಂಕರ ರೋಗಗಳು ಹರಡುತ್ತಿವೆ, ಆದರೆ ಅಲ್ಲಿ ಇರುವ ಸಿಬ್ಬಂದಿಗಳು ಸಣ್ಣ ಪುಟ್ಟ ರೋಗಿಗಳಿಗೆ ಚಿಕಿತ್ಸೆ ಕೂಡುವುದಿಲ್ಲ ಎಂದು ಹೇಳುತ್ತಾರೆ.

ಈಗಿನ ಬಂದ ವಾತಾವರಣದಲ್ಲಿ ಸಾಮಾನ್ಯ ಜನರು ಎಲ್ಲಿಗೆ ಹೋಗಬೇಕು ಹಾಗೂ ಸಣ್ಣ ಪುಟ್ಟ ರೋಗಿಗಳಿಗೆ ಚಿಕಿತ್ಸೆಯನ್ನು ಹೇಗೆ ಪಡೆದುಕೊಳ್ಳಬೇಕು ಎಂಬುದು ಅಂತಕ ಸೃಷ್ಟಿ ಮಾಡುತ್ತಿದೆ ಹಾಗೂ ಭಯಂಕರ ರೋಗದ ವಿರುದ್ಧ ಸಮಸ್ಯೆಗಳಿಗೆ ಪರಿಹಾರ ಯಾರು ಒದಗಿಸುತ್ತಾರೆ ಎಂದು ಆತಂಕ ಮನೆ ಮಾಡಿದೆ ನಮ್ಮ ಜನಗಳಲ್ಲಿ..

ಅದರೆ ಈ ಅಧಿಕಾರಿಗಳು ಅರೆ ಬೇರೆಯಾಗಿ ಉಡಾಫೆ ಉತ್ತರಗಳನ್ನು ನಮ್ಮ ಸಾಮಾನ್ಯ ಜನರಿಗೆ D.H.O ಹಾಗೂ T.H.O ಮಾಹಿತಿಯನ್ನು ಒದಗಿಸುತ್ತಿದ್ದಾರೆ, ಹಾಗಾದರೆ ಈ ಅಧಿಕಾರಿಗಳು ಜನರ ಹಿತ ಹಾಗೂ ಆರೋಗ್ಯದ ರಕ್ಷಣೆಯನ್ನು ಕಾಪಾಡಲು ವಿಫಲರಾಗಿದ್ದಾರೆ.ಈ ಅಧಿಕಾರಿಗಳು ಕೂಡುವ ಉತ್ತರ ಸಾಮಾನ್ಯ ಜನರಲ್ಲಿ ಆಕ್ರೋಶಕ್ಕೆ ಕಾರಣವಾಗುತ್ತಿದೆ ಹಾಗೂ ಹಳ್ಳಿ ಹಳ್ಳಿಗಳಲ್ಲಿ ಯಾವುದೇ ವ್ಯವಸ್ಥೆ ಇಲ್ಲದೆ ಸಾಮಾನ್ಯ ಜನರು ಚಿಕಿತ್ಸೆಗಾಗಿ ಎಲ್ಲಿಗೆ ಹೋಗಬೇಕು ಎಂದು ಗೊಂದಲಕ್ಕೀಡಾಗಿದ್ದಾರೆ.

ಇದೇ ರೀತಿಯಾಗಿ ವ್ಯವಸ್ಥೆ ಮುಂದುವರಿದರೆ ಈ ಇಲಾಖೆಗಳನ್ನು ನಂಬಿ ಬದುಕುತ್ತಿರುವ ಸಾಮಾನ್ಯ ಜನರಿಗೆ ಬಹಳ ತೊಂದರೆಯಾಗುತ್ತಿದೆ.ಇದಕ್ಕೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹೀಗೆ ಹೇಳಿದ್ದಾರೆ ಹೇಗೆ..? ಸಾಮಾನ್ಯ ಜನರನ್ನು ಕಾಪಾಡುವವರು ಹಾಗೂ ರಕ್ಷಣೆ ಮಾಡುವವರು ಯಾರು.? ಏನು..? ಎಂದು ನಮ್ಮ ಜನಗಳು ಮುಂದಿನ ದಿನಗಳಲ್ಲಿ ಆಲೋಚಿಸಿಬೇಕಾದ ವಿಷಯ…. ಅದಕ್ಕಾಗಿ ಈ ಭ್ರಷ್ಟ ವ್ಯವಸ್ಥೆಯನ್ನು ತೊಲಗಿಸಲು ಹಾಗೂ ನಮ್ಮ ಮುಂದಿನ ಮಕ್ಕಳ ಭವಿಷ್ಯಕ್ಕಾಗಿ ರಕ್ಷಿಸಲು ಈಗಿನಿಂದಲೇ ಹೋರಾಟ ಮಾಡಬೇಕಾದ ಅವಶ್ಯಕತೆಯಿದೆ.

ಆರೋಗ್ಯ ಸಚಿವರಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಒಂದು ಪ್ರತಿಯನ್ನು ಕಲ್ಪಿಸಲಾಗುವುದು.


Spread the love

About Ad9 News