ಶಿವಮೊಗ್ಗ: ಜಮೀನು ವಿಚಾರವಾಗಿ ನಡೆದ ಗಲಾಟೆಯಲ್ಲಿ ಕಿರುತೆರೆ ಹಾಗೂ ಚಲನಚಿತ್ರ ನಟಿ ಅನಿತಾ ಗೌಡ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು, ನಟಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶಿವಮೊಗ್ಗದ ಸಾಗರ ತಾಲೂಕಿನ ಕಾಸ್ಪಾಡಿ ಗ್ರಾಮದ ಬಳಿ ಘಟನೆ ನಡೆದಿದೆ.
ಸಾಗರ ತಾಲೂಕಿನ ಉಳ್ಳೂರು ಗ್ರಾ.ಪಂ ವ್ಯಾಪ್ತಿಯ ಕಾಸ್ಪಾಡಿ ಗ್ರಾಮದ ಜಮೀನು ವಿವಾದದ ಗಲಾಟೆಯಲ್ಲಿ ಅನಿತಾ ಮೇಲೆ ಹಲ್ಲೆ- ಆಸ್ಪತ್ರೆಗೆ ದಾಖಲಾಗಿದ್ದಾರೆ.
ಜಮೀನಿನ ವಿಚಾರದಲ್ಲಿ ಸ್ಥಳೀಯ ನೀವಾಸಿಗಳಾದ ನೀಲಮ್ಮ ಮತ್ತು ಮೋಹನ್ ಎನ್ನುವರು ಅನುಗೌಡ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಸಾಗರದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಟಿ ಅನಿತಾ ಗೌಡ ಕಾಸ್ಪಾಡಿ ಗ್ರಾಮದ ಸ.ನಂ 43 ರಲ್ಲಿ ಜಮೀನು ಹೊಂದಿದ್ದಾರೆ. ಜಮೀನು ನೋಡಿಕೊಂಡು, ಕಾಸ್ಪಾಡಿಯಲ್ಲೇ ವಾಸವಾಗಿದ್ದ ಅನುಗೌಡ ತಂದೆ ಶ್ರೀನಿವಾಸ ಗೌಡ. ಅನುಗೌಡ ಆಗಾಗ ಬೆಂಗಳೂರಿನಿಂದ ಬಂದು ಹೋಗುತ್ತಿದ್ದರು. ಆದರೆ, ಜಮೀನು ವಿವಾದ ವಿಚಾರಕ್ಕೆ ಅನುಗೌಡ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ನಟಿ ಅನಿತಾಗೌಡ ಕಳೆದ ಶುಕ್ರವಾರ ಸಹ ಕಾಸ್ಪಾಡಿಗೆ ಬಂದಿದ್ದರು. ಜಮೀನಿಗೆ ತೆರಳಿದ್ದ ವೇಳೆ ಮೋಹನ್, ನೀಲಮ್ಮ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿದ್ದಾರೆ. ಸಾಗರದ ಆನಂದಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.