ಗೋಕಾಕ ತಾಲೂಕಿನ ತಳಕಟನಾಳ ಗ್ರಾಮದಲ್ಲಿ ಶ್ರೀ ಮಡಿವಾಳ ಮಾಚಯ್ಯ ಜಯಂತಿ ಅತೀ ಅದ್ದೂರಿಯಿಂದ ಆಚರಣೆ.
ಹನ್ನೆರಡನೆಯ ಶತಮಾನದಶರಣ ಚಳುವಳಿ ಎಂದರೆ ಬಸವಣ್ಣನವರ ನೇತೃತ್ವದಲ್ಲಿ ಕೆಳವರ್ಗದವರ ಉದ್ಧಾರಕ್ಕಾಗಿ ಕೆಳವರ್ಗದವರೇ ಕೈಗೊಂಡ ಜಾಗೃತಿ ಹೋರಾಟ. ಡಾ.ಎಲ್. ಬಸವರಾಜು ಅವರು ನಿರ್ವಚಿಸಿರುವಂತೆ ಕ್ರಿ.ಶ. 1160 ರ ಸುಮಾರಿಗೆ ಕರ್ನಾಟಕದಲ್ಲಿ ಸಂಭವಿಸಿದ ಈ ವರ್ಗ ಹಾಗೂ ಜಾತಿ ವಿಮೋಚನಾ ಹೋರಾಟವೆಂದರೆ ಅದು ಫ್ರೆಂಚ್ ಕ್ರಾಂತಿ (1789)ಗೆ ಕಮ್ಯೂನಿಸ್ಟ್ ಕ್ರಾಂತಿ (1917) ಗೆ ಹಾಗೂ ಭಾರತದ ಸ್ವಾತಂತ್ರ್ಯ ಸಂಗ್ರಾಮ (1947) ಕ್ಕೆ ಸರಿ ಮಿಗಿಲಾದುದು. ಶರಣರ ಅರಿವಿನ ಹೋರಾಟದ ಕುರುಹುಗಳೆಂದರೆ ಅವರ ವಚನಗಳು. ‘ಬೇಡರೆಂದು, ಬೆಸ್ತರೆಂದು, ಅಂಬಿಗರೆಂದು, ಮಾದಿಗರೆಂದು, ಹೊಲೆಯರೆಂದು ಹಿಂದೂ ಧರ್ಮದಲ್ಲಿ ನಗಣ್ಯರಾಗಿದ್ದ ಕೋಟ್ಯಾಂತರ ಹತಭಾಗ್ಯರು ಕೊಲೆಗಡುಕರ ಕಾಲ್ತುಳಿತಕ್ಕೆ ಸಿಕ್ಕು ‘ಗುಲಾಮರಾಗಿರಿ, ಇಲ್ಲ ಸತ್ತು ಹೋಗಿ’ ಎಂಬಂಥ ನಿಷ್ಕರುಣ ರೌರವ ನರಕ ಸ್ಥಿತಿಯಲ್ಲಿದ್ದರು.
ಇಂಥ ದೀನಾನಾಥರಿಗೆಲ್ಲಾ ಬಸವಣ್ಣನವರು ವೃತ್ತಿ ಘನತೆಯನ್ನೂ ಆತ್ಮ ಗೌರವವನ್ನೂ ತಂದುಕೊಟ್ಟು ಮರ್ಯಾದೆಯಿಂದ ಬದುಕಲು ಅನುವು ಮಾಡಿದರು. ಇದು ಮನುಕುಲದ ಮೊಟ್ಟ ಮೊದಲ ವರ್ಗ ಸಮಾನತೆಯ ಹಾಗೂ ಜಾತಿ ವಿಮೋಚನಾ ಚಳುವಳಿಗೆ ನಾಂದಿ ಹಾಡಿತು. ಅಂಬಿಗರ ಚೌಡಯ್ಯ ಇಂಥ ಪರಿವರ್ತನ ಯುಗದಲ್ಲಿ ಮೂಡಿ ಬಂದ ಕೆಳವರ್ಗದ, ಕೆಳಜಾತಿಯ ವಚನಕಾರರಲ್ಲಿ ಪ್ರಮುಖನು4. ಇವನ ವೈಚಾರಿಕ ನಿಲುವು, ಅದನ್ನು ಹೇಳುವ ಗತ್ತುಗಾರಿಕೆ ನಮಗೆ ಬೆರಗು ಹುಟ್ಟಿಸುತ್ತದೆ. ‘ಅಂಬಿಗರ ಚೌಡಯ್ಯ ಆ ಕಾಲದ ಎಚ್ಚೆತ್ತ ಕೆಳವರ್ಗದ ಸಮಾಜದ ಪ್ರಜ್ಞೆಯ ಪ್ರತೀಕ’ವಾಗಿದ್ದಾನೆ. ನಮ್ಮ ಗ್ರಾಮದಲ್ಲಿ ಯಾವುದೇ ಜಾತಿ ಬೇಧ ಇಲ್ಲ ಎಂದು ಗ್ರಾಮದ ಮುಖಂಡರಾದ ವಿರೂಪಾಕ್ಷ ಮುಂಗರವಾಡಿ ಮಾತು ನೋಡಿದರು.
ನಿಂಗಪ ಲ ದೊಡಮನಿ. ಯಲ್ಲಪ ಕೌಜಲಗಿ. ಅಜ್ಜಪ್ಪ ಹುಲಕುಂದ. ತಮ್ಮಣ್ಣ ಕರೋಶಿ. ವಿರೂಪಾಕ್ಷ ಮುಂಗರವಾಡಿ. ನಾಗಪ್ಪ ಗೋಠೂರ. ಯಲ್ಲಪ ದೊಡಮನಿ. ಲಕ್ಷ್ಮಣ ಹುಲಾರ. ರೇವಣ ವಡೆಯ. ಕೆಂಪಣ್ಣ ಕೌಜಲಗಿ. ಲಕ್ಕಪ್ಪ ಹುಲಕುಂದ.
ನಾಗರಾಜ ಕುದರಿ. ಲಕ್ಷ್ಮಣ ನಂದಿ. ಗುರುಸಿದ್ದ ಕಲ್ಲವ್ವಗೋಳ. ಅಣ್ಣವ್ವ ಅಜ್ಜನ್ನವರ. ನಾಗಪ್ಪ ಮಾದರ ಸಂಜು ಬಾಗೇವಾಡಿ. ರಮೇಶ ಭಜಂತ್ರಿ. ರಮೇಶ ಗುದಿಗೋಪ. ಯಲ್ಲಪ ಕರೋಶಿ. ಶಂಕರ ಮಡಿವಾಳ. ವಿನೇಶ ಮಡಿವಾಳ. ಯಲ್ಲಪ್ಪ ನಂದಿ. ಪರಸಪ್ಪ ಗುದಗನ್ನವರ್. ಮಾರುತಿ ಸನದಿ.
ಗ್ರಾಮ ಪಂಚಾಯತ್ ಅಧ್ಯಕ್ಷರು ಸದಸ್ಯರು ಹಾಗೂ ಸರ್ವ ಸಿಬ್ಬಂದಿ ವರ್ಗದವರು ಗ್ರಾಮದ ಮುಖಂಡರು ಗ್ರಾಮಸ್ಥರು ಉಪಸ್ಥಿತರಿದರು.