ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ತಿಗಡಿ ಗ್ರಾಮದಲ್ಲಿ
ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿ ಸ್ವ ಗ್ರಾಮಕ್ಕೆ ಆಗಮಿಸಿದ ವೀರ ಯೋಧ ಶ್ರೀ ಶಿವಬಸಪ್ಪಾ ರು ಪಾಟೀಲ .
ತಿಗಡಿ ಗ್ರಾಮದಲ್ಲಿ ದಿನಾಂಕ 18/07/1984 ರಲ್ಲಿ ಜನಸಿ. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು 1990ರಲ್ಲಿ ಪ್ರಾರಂಭಮಾಡಿ 1 ರಿಂದ 4ನೇ ತರಗತಿಯ ವರೆಗೆ GHS ತಿಗಡಿ ಶಾಲೆನಲ್ಲಿ ಮುಗಸಿ,
5 ರಿಂದ 7ನೇ ತರಗತಿ ಯನ್ನು ಸರಕಾರಿ ಗಂಡು ಮಕ್ಕಳ ಶಾಲೆ ಮೂಡಲಗಿ ನಲ್ಲಿ ಮುಗಸಿ,
8 ಮತ್ತು 10 ತರಗತಿಯನ್ನು ಸರಕಾರಿ ಹೈಸ್ಕೂಲ್ ಮೂಡಲಗಿನಲ್ಲಿ ಮುಗಿಸಿ,
11ಮತ್ತು 12 PUC ಯನ್ನು ಎಸ್ ಎಸ್ ಆರ್ ಕಾಲೇಜ ಮೂಡಲಗಿ ನಲ್ಲಿ ಮುಗಿಸಿದರು. ಪದವಿಯನ್ನು ಕುವೆಂಪು ವಿಶ್ವವಿದ್ಯಾಲಯ ದಲ್ಲಿ ಮುಗಸಿ.
03/10/2003 ರಲ್ಲಿ ಭಾರತೀಯ ಸೇನೆಗೆ ಸೇರ್ಪಡೆ ಯಾಗಿ. ನಾಸಿಕ ನಲ್ಲಿ 2 ವರ್ಷ ಟ್ರೈನಿಂಗ್ ಮುಗಿಸಿಕೊಂಡು 2005 ರಲ್ಲಿ ಮೊದಲನೆಯ ಪೋಸ್ಟಿಂಗ್ ಪಂಜಾಬ್ ನಲ್ಲಿ 4 ವರ್ಷ ಸೇವೆಸಲ್ಲಿಸಿ.
2009 ರಲ್ಲಿ ರಾಷ್ಟ್ರೀಯ ರೆಪೆಲ್ಸ ಶ್ರೀ ನಗರದಲ್ಲಿ 2 ವರ್ಷ ಗಳ ಕಾಲ ಸೇವೆಸಲಿಸಿ, ಮತ್ತೆ ತಿರುಗಿ 2012ರಲ್ಲಿ ಪಂಜಾಬ್, ಮತ್ತೆ 2013ರಲ್ಲಿ ಚೀನಾ ಬೋಡರ್ ನಲ್ಲಿ 3 ವರ್ಷಗಳ ಕಾಲ ಸೇವೆ ಸಲ್ಲಿಸಿ , 2016 ರಲ್ಲಿ ಆಸಾಮ್ ಗೆ ವರ್ಗಾವಣೆ ಯಾಗಿ 3 ವರ್ಷಗಳ ಕಾಲ ಸೇವೆ ಸಲ್ಲಿಸಿ. 2018 ರಲ್ಲಿ ಹೈದರಾಬಾದ್ ಗೆ ವರ್ಗಾವಣೆ ಯಾಗಿ ಪೂರ್ಣ ರೂಪದ ಸರ್ವಿಸ್ ಮುಗಿಸಿಕೊಂಡರು. ಇವರು ಒಟ್ಟು 16 ವರ್ಷ 5 ತಿಂಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಸೇನೆಯ ವೃತಿಯಿಂದ ನಿವೃತ್ತಿ ಹೊಂದಿ ಇವತ್ತನ ಸ್ವಂತ ಗ್ರಾಮಕ್ಕೆ ಆಗಮಿಸಿದ್ದಾರು
ಗೋಕಾಕ ಸಮೀಪದ ತಿಗಡಿ ಗ್ರಾಮದಲ್ಲಿ ನಿವೃತ್ತ ಯೋಧನಿಗೆ ಸ್ವಗ್ರಾಮಕ್ಕೆ ಬರಮಾಡಿಕೊಳ್ಳುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ನಿವೃತ್ತ ಯೋಧರ ಶಿವಬಸಪ್ಪ ಪಾಟೀಲ್ ಹದಿನಾಲ್ಕು ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆಯನ್ನು ಸಲ್ಲಿಸಿ ನಿವೃತ್ತಿ ಹೊಂದಿ ಸೋಮವಾರ ಸ್ವಗ್ರಾಮಕ್ಕೆ ಆಗಮಿಸಿದರು.
ನಿವೃತ್ತ ಯೋಧ ಸ್ವಗ್ರಾಮಕ್ಕೆ ಆಗಮಿಸುತ್ತಿರುವ ವೇಳೆಯಲ್ಲಿ ಗ್ರಾಮದ ಮಹಿಳೆಯರು ಆರತಿ ಮಾಡುವ ಮೂಲಕ ಬರಮಾಡಿಕೊಂಡ ನಂತರ ಯುವಕರು ಹಾಗೂ ಗ್ರಾಮದ ಮುಖಂಡರು ಯೋಧನ ಮೇಲೆ ಹೂಗಳನ್ನು ಹಾರಿಸುತ್ತಾ ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ಮೂಲಕ ರಂಗಮಂಟಪಕ್ಕೆ ಆಗಮಿಸಿ. ಗ್ರಾಮದ ಹಿರಿಯರು ಹಾಗೂ ಬಂಧುಬಳಗದವರು ಮತ್ತು ಗೆಳೆಯರು, ಶಿಕ್ಷಕರು, ವಿದ್ಯಾರ್ಥಿಗಳು, ನೌಕರ ಸಂಘದ ಪದಾಧಿಕಾರಿಗಳು ನಿವೃತ್ತ ಯೋಧನಿಗೆ ಸತ್ಕರಿಸಿ ಸನ್ಮಾನಿಸಲಾಯಿತು
ಅಧ್ಯಕ್ಷತೆಯನ್ನು ಶ್ರೀ ಶಂಕರಾನಂದ ಸ್ವಾಮೀಜಿಗಳು ಸಿದ್ದಾರೂಡ ಮಠ ತಿಗಡಿ,
ಮುಖ್ಯ ಅತಿಥಿಗಳು
ಶ್ರೀ ಅಜಿತ್ ಮನ್ನಿಕೇರಿ ಕ್ಷೇತ್ರಶಿಕ್ಷಣಾಧಿಕಾರಿಗಳು ಮೂಡಲಗಿ,
ಶ್ರೀಮತಿ ರೋಹಿಣಿ ದೀಕ್ಷಿತ್ ಮಾನವ ಹಕ್ಕುಗಳ ಸಂಸ್ಥೆಯ ಸದಸ್ಯರು ಬೆಳಗಾವಿ, ವಕೀಲರಾದ ಲಕ್ಷ್ಮಣ್ಣ ಅಡಿಹುಡಿ, ಮಾರುತಿ ಕುರೇರ,ಯಲ್ಲಪಾ ಪಾಟೀಲ, ರುದ್ರಗೌಡ ಪಾಟೀಲ, ನಾಗಪ್ಪ ಪಾಟೀಲ, ಬಸವರಾಜ ಬ್ಯಾಳಿ,ಗಣಪತಿ ಹೊನಕಿಪ್ಪಿ, ಈಶ್ಷರ ಕಂಕಣವಾಡಿ, ಅವಣ ಹೊನಕುಪ್ಪಿ, ವಿರುಪಾಕ್ಷಿ ಮರಣಸಿ, ಭಾಗಿಯಾಗಿದ್ದರು.