ಕೇಂದ್ರದ ವಿರುದ್ಧ ಕಾರ್ಮಿಕ ಸಂಘಟನೆಯ ಮುಷ್ಕ
ಕೇಂದ್ರ ಸರ್ಕಾರ ಆರ್ಥಿಕ, ಕಾರ್ಮಿಕ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಲೇಟೇಕ್ಸ ಎಂಪ್ಲಯಿಜ್ ಯೂನಿಯನ್ ಫೇಡರೇಶನ್ ಸಂಘಟನೆಯು ಹುಕ್ಕೇರಿ ತಾಲೂಕಿನ ಕಣಗಲಾದಲ್ಲಿ ಪ್ರತಿಭಟನೆ ನಡೆಯಿತು.
ಕಣಗಲಾ ಗ್ರಾಮದಲ್ಲಿನ ಹಿಂದೂಸ್ತಾನ್ ಲೇಟೇಕ್ಸ ಲಿಮಿಟೆಡ್ ಮುಂಭಾಗದಿಂದ ಪ್ರತಿಭಟನೆ ಆರಂಭಿಸಿ ನಂತರ ಬೆಳಗಾವಿಯಲ್ಲಿ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದರು.
ಎಚ್. ಗೀರಿರಾಜ ಮಾತನಾಡಿ ರಾಷ್ಟ್ರೀಯ ಸಮಾನ ಕನಿಷ್ಠ ವೇತನ 21 ಸಾವಿರ ರೂ. ನಿಗದಿ ಆಗಬೇಕು. ಕಾರ್ಪೊರೇಟ್ ಬಂಡವಾಳದ ಪರವಾದ ಮತ್ತು ಕಾರ್ಮಿಕ ವಿರೋಧಿಯಾದ ಕಾರ್ಮಿಕ ಕಾನೂನುಗಳ ಸಂಹಿತೀಕರಣ ವಿರೋಧಿಸಿ ಎಲ್ಲಾ ಜಿಲ್ಲೆಗಳಲ್ಲಿ ಕಾರ್ಮಿಕ ಕೋರ್ಟ್ ಗಳನ್ನು ಸ್ಥಾಪಿಸಬೇಕು. ಎಲ್ಲರಿಗೂ ಸರ್ಕಾರದಿಂದಲೇ 10 ಸಾವಿರ ಕನಿಷ್ಠ ಖಾತ್ರಿ ಪಿಂಚಣಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಆರ್ಥಿಕ ಹಿಂಜರಿತಕ್ಕೆ ಕಾರಣವಾದ ನೀತಿಗಳ ವಿರುದ್ಧ, ಈ ನೀತಿಗಳಿಂದಾಗಿ ಉದ್ಯೋಗ ಕಳೆದುಕೊಳ್ಳುತ್ತಿರುವ ಕಾರ್ಮಿಕರ ಉದ್ಯೋಗ ಮತ್ತು ಆದಾಯಗಳ ರಕ್ಷಣೆ ಮಾಡಬೇಕು ಹಾಗೂ ಉದ್ಯೋಗ ಸೃಷ್ಠಿ ಮಾಡಬೇಕು. ಗ್ರಾಮೀಣ ಸಂಕಷ್ಟವನ್ನು ಕಡಿಮೆ ಮಾಡಲು ಹೆಚ್ಚಿನ ಸಾರ್ವಜನಿಕ ಹೂಡಿಕೆಗಾಗಿ ಬೆಲೆ ಏರಿಕೆ ನಿಯಂತ್ರಣ ಮಾಡುವಂತೆ ಒತ್ತಾಯಿಸಿದರು. ಎಲ್ಲಾ ನೌಕರರಿಗೆ ಎಲ್‍ಐಸಿ, ಆಧಾರಿತ ಪಿಂಚಣಿ ಜಾರಿ ಮಾಡಬೇಕು. ಎಲ್ಲಾ ನೌಕರರನ್ನು ಖಾಯಂ ಮಾಡಬೇಕು. ಬೆಲೆ ಏರಿಕೆ ನಿಯಂತ್ರಿ ಸಬೇಕು. ಜೀವನಾವಶ್ಯಕ ವಸ್ತುಗಳನ್ನು ಸಾರ್ವ ಜನಿಕ ಪಡಿತರ ಮೂಲಕ ವಿತರಿಸುವ ವ್ಯವಸ್ಥೆ ಜಾರಿ ಮಾಡಬೇಕು. ಖಾಯಂ ಸ್ವರೂಪದ ಉದ್ಯೋಗಗಳನ್ನು ಸೃಷ್ಠಿಸುವಂತೆ ಪ್ರತಿ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಎ.ಎಮ್.ಮುಲ್ಲಾ ಬಿ.ಆರ್.ಕುಟಗೋಳಿ, ಎಸ್.ಎಸ್.ಪಾಟೀಲ, ಆರ್.ಕೆ.ಕಾಂಬಳೆ ಹಾಗೂ ಅನೇಕರು ಭಾಗವಹಿಸಿದ್ದರು.