ಸಂಕೇಶ್ವರ ಕೋವಿಡ್ 19 ವೈರಸ್ ಎಲ್ಲ ಕಡೆ ಹರಡುತ್ತಿರುವುದರಿಂದ ಜಿಲ್ಲಾಡಳಿತದ ಆದೇಶದಂತೆ ಶುಕ್ರವಾರ ದಾಳಿ ನೆಡೆಸಿದ ಸಂಕೇಶ್ವರ ಪುರಸಭೆಯ ಕಿರಿಯ ಆರೋಗ್ಯ ನಿರೀಕ್ಷಕ ಪ್ರಕಾಶಗೌಡ ಪಾಟೀಲ ಹಾಗೂ ಪರಿಸರ ಅಭಿಯಂತರರು ನಾರಾಯಣ ವಿ. ನಾಯಿಕ ನಗರದ ಹೋಟೆಲ್ ಮತ್ತು ಬೇಕರಿಗಳ ಮೇಲೆ ದಾಳಿ ನೆಡೆಸಿ ಸ್ವಚ್ಛತೆ ಇಲ್ಲದಿದ್ದರೆ ಬೀಗ ಜಡಿಯಲಾಗುವುದು ಎಂದು ಅಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡಿದರು.
ಸಂಕೇಶ್ವರ ಪುರಸಭೆಯ ತಂಡ ನಗರದಲ್ಲಿರುವ ಬೇಕರಿ, ಹೋಟೆಲ್ ಹಾಗೂ ಚಿಕನ್ ಸೆಂಟರ್ ಗಳಿಗೆ ಭೇಟಿ ನೀಡಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಸೂಚನೆ ನೀಡಿದರು. ಹೊಟೇಲ್‌ನ ಗೋಡಾವನ್ ಸೇರಿದಂತೆ ಅಡುಗೆ ಮನೆ ಎಲ್ಲಾ ಕಡೆ ಪರಿಶೀಲನೆ ನೆಡೆಸಿ ಸ್ವಚ್ಚತೆ ಕಾಪಾಡಿಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.
ವರದಿ:ಸಚೀನ ಕಾಂಬಳೆ