ವಿಶ್ವದೆಲ್ಲಡೆ ಮರಣ ಮೃದಂಗ ಭಾರಿಸುತ್ತಿರುವ ಕೊರೊನಾ ವೈರಸ್ ಸೋಂಕನ್ನು ಹಿಮ್ಮೆಟ್ಟಿಸಲು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ದಿಟ್ಟ ಕ್ರಮಗಳನ್ನು ಕೈಗೊಂಡಿದೆ, ಇಡಿ ದೇಶವೇ ಲಾಕಡೌನ್ ಮಾಡುವ ಮೂಲಕ ಜನರ ಸಂಚಾರವನ್ನು ನಿರ್ಬಂದಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಚಿಸಿದೆ.
ಆದರೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಮೂಡಲಗಿ ನಗರ ಹಾಗೂ ಕೆಲ ಪ್ರದೇಶದಲ್ಲಿ ಎಂದಿನಂತೆ ವ್ಯಾಪಾರ ಮಾಡಲು ಮುಂದಾದ ವ್ಯಾಪರಸ್ಥರನ್ನು ಪೋಲಿಸರು ತರಾಟೆಗೆ ತೆಗೆದುಕೊಂಡು ರಸ್ತೆ ಮೇಲೆ ಗಾಡಿ ರೈಡ ಮಾಡುತ್ತಿರುವ ಯುವಕರನ್ನು ತಡೆದು ಬುದ್ದಿವಾದ ಹೇಳಿ ಸ್ವಲ್ಪ ಮಟ್ಟಿಗೆ ಲಾಠಿ ರುಚಿ ತೋರಿದ್ದಾರೆ.
ಮಂಗಳವಾರ ಮೂಡಲಗಿ ನಗರ ಸ್ತಬ್ಧ ವಾಗಿರಲು ಮೂಡಲಗಿ ಪೊಲೀಸ್ ಠಾಣೆಯ ಪಿಎಸ್ಐ ಮಲಿಕರ್ಜುನ್ ಸಿಂಧೂರ ಅವರ ನೇತೃತ್ವದ ತಂಡ ಕರೋನಾ ವೈರೆಸ್ ಹಿನ್ನಲೆಯಲ್ಕಿ ಸರ್ಕಾರದ ಆದೇಶದ ಮೇರೆಗೆ ಮೂಡಲಗಿ ನಗರದಲ್ಲಿ ಅನವಶ್ಯವಾಗಿ ತಿರುಗುತ್ತಿರುವ ವ್ಯಕ್ತಿಗಳಿಗೆ ಲಾಠಿ ರುಚಿ ತೋರಿಸಿ ಮನೆ ಬಿಟ್ಟು ಹೊರಗೆ ಬಾರದಂತೆ ನೋಡಿಕೊಂಡಿದ್ದಾರೆ.
ಮೂಡಲಗಿ ನಗರದಲ್ಲಿ ಪಿಎಸ್ಐ ಕಲ್ಮೇಶ್ವರ್ ಸರ್ಕಲ್ ದಲ್ಲಿ ನಿಂತು ಸ್ಪೀಕರ ಮೂಲಕ ಸಾರ್ವಜನಿಕರು ರಸ್ತೆ ಮೇಲೆ ಬರದಂತೆ ಮನವಿ ಮಾಡಿದರು.
ಲಾಠಿ ರುಚಿ ತಿಂದರೂ ಕೂಡ ನಮ್ಮ ಜನರಿಗೆ ಅರಿವು ಮೂಡಿಲ್ಲ. ಪೊಲೀಸ್ ಅಧಿಕಾರಿಗಳು ಜೀವದ ಹಂಗನ್ನು ತೊರೆದು ಜನರಿಗೋಸ್ಕರ ಬಿಸಿಲು ಎನ್ನದೆ ಜನರು ಓಡಾಡದಂತೆ ನೋಡಿಕೊಳ್ಳುತ್ತಾ ಹಾಗೆ ವೈರಸ್ ಬಗ್ಗೆ ಎಚ್ಚರವಿರಲ್ಲಿ ಮನೆ ಬಿಟ್ಟು ಹೊರಗಡೆ ಬರಬೇಡಿ ಎಂದು ಹೇಳಿದರೂ ಕೂಡ ನಾಗರಿಕರು ಪೊಲೀಸ್ ಅಧಿಕಾರಿಗಳ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಕೂಡ ನೀಡುತ್ತಿಲ್ಲ.
ಅಲ್ಲ ಪೊಲೀಸ್ ಅಧಿಕಾರಿಗಳು ಯಾಕೆ ಇಷ್ಟು ಕಷ್ಟಪಡುತ್ತಿದ್ದಾರೆ ಎಂಬುದನ್ನು ನಾಗರಿಕರು ಮೊದಲು ಅರ್ಥ ಮಾಡಿಕೊಳ್ಳಬೇಕು, ವೈರಸ್ ಹರಡದಂತೆ ನೋಡಿಕೊಳ್ಳುವ ಕರ್ತವ್ಯ ಸಾರ್ವಜನಿಕರದ್ದು. ಆದರೆ ಅಧಿಕಾರಿಗಳು ಹೇಳುವ ಮಾತು ಕೇಳುವ ಸ್ಥಿತಿಯಲ್ಲಿ ನಮ್ಮ ಜನರಿಗಿಲ್ಲ, ಹೀಗಾದರೆ ತಡೆಗಟ್ಟಲು ಹೇಗೆ ಸಾಧ್ಯ. ಅಧಿಕಾರಿಗಳ ಜೊತೆ ನಾಗರಿಕರು ಕೈಜೋಡಿಸಿದರೆ ಮಾತ್ರ ಕೊರೊನಾ ವೈರಸ್ ಹರಡದಂತೆ ಕಡಿವಾಣ ಹಾಕಲು ಸಾಧ್ಯ.
ಮೂಡಲಗಿ ನಗರದಲ್ಲಿ ಪಿಎಸ್ಐ ಮಲ್ಲಿಕಾರ್ಜುನ ಸಿಂಧೂರ್ ನೇತೃತ್ವದಲ್ಲಿ ಮಂಗಳವಾರ ಮೂಡಲಗಿ ಪಟ್ಟಣ ಸಂಪೂರ್ಣ ಸ್ಥಬ್ದ ವಾಗಿತ್ತು.
ಸರ್ಕಾರ ಭಯಾನಕ ಕರೋನಾ ವೈರಸ್ ತಡೆಗೆ ಹಲವಾರು ಕ್ರಮಗಳನ್ನು ತಗೆದುಕೊಳ್ಳುತ್ತಿದೆ ಅದೇ ರೀತಿಯಾಗಿ ಅಧಿಕಾರಿಗಳು ಕೂಡ ಕಾರ್ಯನಿರ್ವಹಿಸಬೇಕಾಗುತ್ತದೆ ಆದರೆ ಸಾರ್ವಜನಿಕರ ಸಹಕಾರ ಅವಶ್ಯವಾಗಿದೆ.
ವರದಿ : ಮಲ್ಲು ಬೋಳನವರ