ಲಾಕ್‍ಡೌನ್ ಆದೇಶ ಪಾಲಿಸದ ಯುವಕರಿಗೆ – ಬಸ್ಕಿ ಹೊಡೆಸಿದ ಪೊಲೀಸರು !
ಈ ಪೋಟೊ ನೋಡಿದ ತಕ್ಷಣ ಮನೆಯಲ್ಲೇ ಇರೊದು ವಾಸಿ ಅಂತಿರಾ… ಹೌದು ಸಂಕೇಶ್ವರ ನಗರದಲ್ಲಿ ಅನವಶ್ಯಕವಾಗಿ ರಸ್ತೆಗಿಳಿದು ಓಡಾಡಿದ ಯುವಕರಿಗೆ ಇಂದು ಪೋಲಿಸರು ಬಸ್ಕಿ ಹೊಡೆಯುವ ಶಿಕ್ಷೆ ನೀಡುವ ಮೂಲಕ ಪಾಠ ಕಲಿಸಿದಾರೆ.
ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿದೆ ಆದರೂ ಸಂಕೇಶ್ವರ ನಗರದಲ್ಲಿ ಖಾಲಿಪಿಲಿ ರಸ್ತೆಗಿಳಿದು ಓಡಾಡಿದ ಯುವಕರಿಗೆ ಪೊಲೀಸರು ಬಸ್ಕಿ ಹೊಡಸಿದಾರೆ. ಕೊರೊನಾ ಸೋಂಕು ವ್ಯಾಪಕ ಭೀತಿ ಹುಟ್ಟಿಸಿರುವ ಹಿನ್ನೆಲೆಯಲ್ಲಿ ಅನವಶ್ಯಕವಾಗಿ ಮನೆ ಬಿಟ್ಟು ರಸ್ತೆಗೆ ಬರಬೇಡಿ. ಒಬ್ಬರಿಂದ ಇನ್ನೊಬ್ಬರು ದೂರ ಉಳಿದು ಸಾಮಾಜಿಕ ಅಂತರ ಕಾಯ್ದುಕೊಂಡು ಸೋಂಕಿನಿಂದ ಬಚಾವ್ ಆಗಿ ಎಂದು ಪ್ರತಿದಿನ ಪೊಲೀಸರು ಜಾಗೃತಿ ಮೂಡಿಸುತ್ತಲೇ ಇದ್ದಾರೆ.
ಆದರೂ, ಕೇಲ ಯುವಕರು ಬೇಕಾಬಿಟ್ಟಿ ಇಂದು ನಗರದ ಬಸ್ ನಿಲ್ದಾಣದ ಹತ್ತಿರ ಬೈಕ್ ಓಡಿಸುತ್ತ ತೀರಗುತ್ತಿದ್ದವರನ್ನು ಹಿಡಿದು ನಡು ರಸ್ತೆಯಲ್ಲಿ ಬಸ್ಕಿ ಹೊಡೆಯುವ ಶಿಕ್ಷೆ ಪೊಲೀಸರು ನೀಡಿದಾರೆ.
ವರದಿ : ಸಚೀನ ಕಾಂಬಳೆ
Ad9 News Latest News In Kannada


