Breaking News
Home / ರಾಜ್ಯ>ಬೆಳಗಾವಿ / ಲಸಿಕಾ ಕೇಂದ್ರಗಳೇ ಕೊರೋನಾ ಹಾಟ್‌ಸ್ಪಾಟ್‌ಗಳಾಗುತ್ತಿವೆಯೇ?

ಲಸಿಕಾ ಕೇಂದ್ರಗಳೇ ಕೊರೋನಾ ಹಾಟ್‌ಸ್ಪಾಟ್‌ಗಳಾಗುತ್ತಿವೆಯೇ?

Spread the love

 

ಮೂಡಲಗಿ : ಕೊರೋನಾ ನಿಯಂತ್ರಣಕ್ಕಾಗಿ ಜನರಿಗೆ ಹಾಕಲಾಗುತ್ತಿರುವ ಲಸಿಕಾ ಕೇಂದ್ರಗಳೇ ಕೋವಿಡ್‌ ಹಾಟ್‌ಸ್ಪಾಟ್‌ಗಳಾಗುತ್ತಿವೆಯಾ?

ಲಸಿಕಾ ಕೇಂದ್ರಗಳನ್ನು ನೋಡಿದರೆ ಈ ಪ್ರಶ್ನೆ ಕೇಳಿ ಬರುತ್ತಿದೆ. ಕೊರೋನಾ ಹತೋಟಿಗೆ ತರುವ ಉದ್ದೇಶದಿಂದ ಕೋವಿಶೀಲ್ಡ್‌, ಕೋವ್ಯಾಕ್ಸಿನ್‌ ಕೊಡಲಾಗುತ್ತಿದೆ. ಇಷ್ಟು ದಿನ ಲಸಿಕೆಯ ಸಮಸ್ಯೆ ಉಂಟಾಗಿತ್ತು. ಆದರೆ ಕಳೆದ ಒಂದು ದಿನದಿಂದ 18ರಿಂದ 44 ವರ್ಷದವರಿಗೆ ಕೊಡಲು ಶುರು ಮಾಡಲಾಗಿದೆ.

ಆದರೆ ಚಿತ್ರಮಂದಿರದ ಬಳಿ ಹೊಸ ಚಿತ್ರ ಬಂದಾಗ ಟಿಕೆಟ್‌ಗಾಗಿ ಸೇರುವ ಜನರಂತೆ ಪಟ್ಟಣದ ಸಮುದಾಯದ ಆರೋಗ್ಯ ಕೇಂದ್ರದ ಲಸಿಕೆ ಕೇಂದ್ರದಲ್ಲಿ ಕಂಡು ಬರುತ್ತಿದೆ. ಕೊರೋನಾ ಬಾರದಿರಲಿ ಅಥವಾ ನಿಯಂತ್ರಣವಾಗಲಿ ಎಂಬ ಉದ್ದೇಶದಿಂದ ಲಸಿಕೆ ಹಾಕಲಾಗುತ್ತಿದೆ. ಲಸಿಕೆ ಹಾಕಿಸಿಕೊಳ್ಳಲು ತೆರಳುವ ಜನತೆ ಕೂಡ ಲಸಿಕೆ ಹಾಕಿಸಿಕೊಳ್ಳುವಾಗ ಮಾತ್ರ ಮಾಸ್ಕ್‌ ಧರಿಸಿಕೊಳ್ಳುತ್ತಾರೆಯೇ ಹೊರತು ಲಸಿಕೆಗಾಗಿ ಸರತಿ ಸಾಲಿನಲ್ಲಿ ನಿಂತಾಗ ಮಾಸ್ಕ್‌ ಹಾಕಿಕೊಳ್ಳುವುದಿಲ್ಲ. ಈ ಸನ್ನಿವೇಶಗಳನ್ನೆಲ್ಲ ನೋಡಿದರೆ ಲಸಿಕಾ ಕೇಂದ್ರಗಳೇ ಕೊರೋನಾ ಹಾಟ್‌ಸ್ಪಾಟ್‌ಗಳಾಗುತ್ತಿವೆಯೇ? ಎಂಬ ಸಂಶಯ ಬರಲಾರಂಭಿಸಿದೆ

ಇನ್ನೂ ಆಸ್ಪತ್ರೆಯ ಎರಡು ಬಾಗಿಲು ಹಾಕಿ ಒಳಗೆ ಕುರಿ ತುಂಬದ ಹಾಗೆ ತುಂಬಿ ಲಸಿಕೆ ನೀಡುತ್ತಿರುವುದು ಎಷ್ಟೊಂದು ಸರಿ. ಲಸಿಕೆ ಕೇಂದ್ರದ ಸಿಬ್ಬಂದಿಗಳು ಶ್ರೀಮಂತರಿಗೆ ಮೊದಲು ಆದ್ಯತೆ ನೀಡುತ್ತಿರುವುದರಿಂದ ಬಡಪಾಯಿಗಳು ನಿಂತು ನಿಂತು ಮರಳಿ ಮನೆಗೆ ಹೋಗುವಂತ ಪರಸ್ಥಿತಿ ನಿರ್ಮಾಣವಾಗಿದೆ.

*ಸ್ಥಳಾಂತರ ಮಾಡಿ:*

ಲಸಿಕಾ ಕೇಂದ್ರಗಳಲ್ಲಿನ ಜನಜಂಗುಳಿ ತಪ್ಪಿಸಬೇಕೆಂದರೆ ಸರ್ಕಾರಿ ಶಾಲೆ ಅಥವಾ ಸರ್ಕಾರಿ ಕಟ್ಟಡಗಳಲ್ಲಿ ಲಸಿಕಾ ಕೇಂದ್ರಗಳನ್ನು ತೆರೆಯಬೇಕು ಎಂಬ ಸಲಹೆ ಪ್ರಜ್ಞಾವಂತರದ್ದು. ಆದರೆ ಹೀಗೆ ತೆರೆಯಬೇಕೆಂದರೆ ಲಸಿಕೆ ಲಭ್ಯತೆ ಕೂಡ ನೋಡಿಕೊಳ್ಳಬೇಕಾಗುತ್ತದೆ.ಸರ್ಕಾರ ಲಸಿಕೆಗಳನ್ನು ಸಮರ್ಪಕವಾಗಿ ಪೂರೈಸಿದರೆ ಲಸಿಕಾ ಕೇಂದ್ರಗಳಲ್ಲಿ ಜನಜಂಗುಳಿ ತಾನಾಗಿಯೇ ಕಡಿಮೆಯಾಗುತ್ತದೆ ಎಂಬ ಅಭಿಪ್ರಾಯ ಅಧಿಕಾರಿ ವರ್ಗದ್ದು.

ಒಟ್ಟಿನಲ್ಲಿ ಲಸಿಕಾ ಕೇಂದ್ರ ಕೂಡ ಕೊರೋನಾ ಹಾಟ್‌ಸ್ಪಾಟ್‌ಗಳಂತೆ ಭಾಸವಾಗುತ್ತಿರುವುದಂತೂ ಸತ್ಯ. ಇನ್ನಾದರೂ ಲಸಿಕಾ ಕೇಂದ್ರದಲ್ಲಿ ರಶ್‌ ಆಗದಂತೆ ನೋಡಿಕೊಳ್ಳಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂಬುದು ನಾಗರಿಕರ ಆಗ್ರಹ.


Spread the love

About Ad9 Haberleri

Check Also

ಬೆಳಗಾವಿ ಜಿಲ್ಲಾ ಅಪರ ಜಿಲ್ಲಾಧಿಕಾರಿ ಮೂಡಲಗಿ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಬೇಟಿ

Spread the love ಕೋವಿಡ್ ನಿಯಂತ್ರಣದ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲಾ ಅಪರ ಜಿಲ್ಲಾಧಿಕಾರಿ ಮೂಡಲಗಿ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಮಂಗಳವಾರ …