Breaking News
Home / ಮೂಡಲಗಿ / ಯಾದವಾಡ ಗ್ರಾಮದ ನಿರ್ಗತಿಕರಿಗೆ ಶ್ರೀಕ್ಷೇತ್ರ ಧರ್ಮಸ್ಥಳ ವಯಿಂದ ಆಹಾರ ಕಿಟ ವಿತರಣೆ

ಯಾದವಾಡ ಗ್ರಾಮದ ನಿರ್ಗತಿಕರಿಗೆ ಶ್ರೀಕ್ಷೇತ್ರ ಧರ್ಮಸ್ಥಳ ವಯಿಂದ ಆಹಾರ ಕಿಟ ವಿತರಣೆ

Spread the love


ಮೂಡಲಗಿ : ಲಾಕ್‍ಡೌನ್ ಪರಿಣಾಮ ಕೆಲ ವ್ಯಾಪಾರಗಳಿಗೆ ಹಾಗೂ ಬಡಕುಟುಂಬಗಳಿಗೆ ತೊಂದರೆ ಉಂಟಾಗಿದೆ. ಅಂತಹವರಿಗೆ ಅನುಕೂಲವಾಗಲೆಂದು ಶ್ರೀಕ್ಷೇತ್ರ ಧರ್ಮಸ್ಥಳ ಯೋಜನೆಯಿಂದ ಆಹಾರ ಕಿಟ್ ನೀಡಿ, ಬಡಕುಟಂಬುಗಳಿಗೆ ಸಹಾಯಹತ್ತ ಮಾಡುವಂತ ಯೋಜನೆಯ ಕಾರ್ಯ ಶ್ಲಾಘನೀಯವಾಗಿದೆ ಎಂದು ಯೂನಿಯನ್ ಬ್ಯಾಂಕ ಆಫ್ ಇಂಡಿಯಾ ಮ್ಯಾನೇಜರ್ ಮಂಜುನಾಥ ಟಿ ಹೇಳಿದರು.
ತಾಲೂಕಿನ ಯಾದವಾಡ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಯೊಜನೆಯಿಂದ ಹಮ್ಮಿಕೊಳ್ಳಾದ ನಿರ್ಗತಿಕರಿಗೆ ಆಹಾರ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈ ಮಹಾಮಾರಿ ಕೊರೋನಾ ನಮ್ಮ ದೇಶಕ್ಕೆ ಒಕ್ಕರಿಸಿ ಸಾಕಷ್ಟು ಸಾವು ನೋವುಗಳನ್ನು ತಂದೊಡ್ಡಿದೆ, ಲಾಕ್‍ಡೌನ್‍ದಿಂದಾಗಿ ಬಡ ಕುಟುಂಬಗಳಿಗೆ ಒಪ್ಪಿತ್ತಿನ ಊಡಕ್ಕೂ ಕಂಗಾಲಾಗಿದ್ದಾರೆ ಎಂದು ಹೇಳಿದರು.
ಮೂಡಲಗಿ ತಾಲೂಕಾ ಯೋಜನಾಧಿಕಾರಿ ದೇವರಾಜ ಮಾತನಾಡಿ, ಕೊರೋನಾ ನಿಯಂತ್ರಣಕ್ಕೆ ಇಡೀ ರಾಜ್ಯಾದ್ಯಂತ ಲಾಕ್‍ಡೌನ್‍ದಿಂದ ಎಲ್ಲಡೆ ಜನ ಸ್ತಬ್ಧವಾಗಿದೆ, ಇದರಿಂದ ನಿತ್ಯ ತಮ್ಮ ಕಾಯಕದಿಂದಲೇ ಹೊಟ್ಟೆ ತುಂಬಿಸಿಕೊಳ್ಳಲು ಅತ್ತ ಕೆಲಸವೂ ಇಲ್ಲ, ಇತ್ತ ಒಪ್ಪತ್ತಿನ ಊಟಕ್ಕೂ ಗತಿಯಿಲ್ಲದೆ ಪರದಾಡುವಂತ ಪರಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಬಡ ಜನರ ನೆರವಿಗೆ ಧಾವಿಸಿದ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು ಸಾಕಷ್ಟು ಸಹಾಯಹಸ್ತ ನೀಡುತ್ತಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮೂಡಲಗಿ ವಲಯದ ಮೇಲ್ವಿಚಾರಕ  ರಾಘವೇಂದ್ರ ಪಟಗಾರ, ಯೂನಿಯನ್ ಬ್ಯಾಂಕ್ ಪ್ರಬಂಧಕ ಪರಶುರಾಮ ಗೆನನ್ನವರ, ಗ್ರಾಪಂ ಸದಸ್ಯೆ ಮೀನಾಕ್ಷಿ ತೊಟಗಿ ಹಾಗೂ ಅನೇಕರು ಉಪಸ್ಥಿತರಿದ್ದರು.


Spread the love

About Ad9 Haberleri

Check Also

ಕಲ್ಲೋಳಿ ಪಟ್ಟಣದಲ್ಲಿ ೭೮ ನೇ ಧ್ವಜಾರೋಹಣ ನೆರವೇರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love *ಮೂಡಲಗಿ*- ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಹೋರಾಡಿದ ಮಹಾನ್ ಪುರುಷರ ತತ್ವಾದರ್ಶಗಳು ಇಂದಿಗೂ ಪ್ರಸ್ತುತವಾಗಿದ್ದು, ಅಂತಹ ಆದರ್ಶ …