ಪುನೀತ್ ರಾಜಕುಮಾರ್ ನಟನೆಯ ಜೇಮ್ಸ್ ಸಿನಿಮಾ ಗೆ ಸೆನ್ಸಾರ್ ಬೋರ್ಡ್ ಯು/ಎ ಪ್ರಮಾಣಪತ್ರ ದೊರಕಿದ್ದು ಮಾರ್ಚ್ 17 ರಂದು ಬಿಡುಗಡೆಯಾಗಲಿದೆ.
ಚೇತನ್ ಕುಮಾರ್ ನಿರ್ದೇಶನದ ಜೇಮ್ಸ್ ಸಿನಿಮಾ ವಿಶ್ವಾದ್ಯಂತ ಸುಮಾರು 4 ಸಾವಿರ ಥಿಯೇಟರ್ ಗಳಲ್ಲಿ ಪ್ರದರ್ಶನಗೊಳ್ಳಲಿದೆ.
ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿರುವ ಜೇಮ್ಸ್ ರಾಜ್ಯದ 400 ಥಿಯೇಟರ್ ಗಳಲ್ಲಿ ಪ್ರದರ್ಶನಗೊಳ್ಳಲಿದೆ,
ಪುನೀತ್ ರಾಜಕುಮಾರ್ ನಟನೆಯ ಕೊನೆಯ ಸಿನಿಮಾ ಇದಾಗಿರುವುದರಿಂದ ಅಭಿಮಾನಿಗಳು ತೀವ್ರ ಕಾತುರದಿಂದ ಕಾಯುತ್ತಿದ್ದಾರೆ.
ಕರ್ನಾಟಕದಾದ್ಯಂತ ಥಿಯೇಟರ್‌ಗಳು ಒಂದು ವಾರದವರೆಗೆ ಜೇಮ್ಸ್ ಸಿನಿಮಾ ಮಾತ್ರ ಪ್ರದರ್ಶಿಸುವ ಮೂಲಕ ಪುನೀತ್ ರಾಜ್‌ಕುಮಾರ್‌ಗೆ ಗೌರವ ಸಲ್ಲಿಸಲು ಯೋಜಿಸುತ್ತಿವೆ.
ಜೇಮ್ಸ್ ಬಿಡುಗಡೆಗಾಗಿ ಮೆಜೆಸ್ಟಿಕ್ ಥಿಯೇಟರ್‌ನಲ್ಲಿ 81 ಅಡಿ ಎತ್ತರದ ದೊಡ್ಡ ಕಟೌಟ್ ಹಾಕಲಾಗುತ್ತದೆ. ರಾಜ್ಯಾದ್ಯಂತ ಅಭಿಮಾನಿಗಳ ಸಂಘಗಳು ಹಾಲು ಅಭಿಷೇಕ, ಕರ್ಪೂರ ಹಚ್ಚುವುದು, ತೆಂಗಿನಕಾಯಿ ಒಡೆಯುವುದು, ಮೆರವಣಿಗೆ ಮಾಡುವ ಮೂಲಕ ಪೂರ್ಣಪ್ರಮಾಣದಲ್ಲಿ
ಸಾಗಲು ಮುಂದಾಗಿವೆ.
ಸೆಲೆಬ್ರಿಟಿಗಳಿಗೆ ಮಾತ್ರ ಮುಂಜಾನೆ ಶೋ ಏರ್ಪಡಿಸಲಾಗಿದ್ದ ವೀರಭದ್ರೇಶ್ವರ ಥಿಯೇಟರ್‌ನಲ್ಲಿ ಪುನೀತ್ ರಾಜ್‌ಕುಮಾರ್ ಅವರ ದೊಡ್ಡ ಕಟೌಟ್‌ಗಳ ಜೊತೆಗೆ ಅವರ ತಂದೆ-ತಾಯಿ ಡಾ. ರಾಜ್‌ಕುಮಾರ್ ಮತ್ತು ಡಾ. ಪಾರ್ವತಮ್ಮ ರಾಜ್‌ಕುಮಾರ್ ಅವರ ಕಟೌಟ್‌ಗಳನ್ನು
ಹಾಕಲು ಅಭಿಮಾನಿಗಳು ಯೋಜಿಸಿದ್ದಾರೆ.
ಎ ಸಾಲಿನ ಸೀಟ್ ನಂ.17 ಖಾಲಿ ಇರುತ್ತದೆ ಏಕೆಂದರೆ ಆ ಸೀಟು ಅಪ್ಪು ಸರ್‌ಗೆ ಮೀಸಲಾಗಿರುತ್ತದೆ” ಎಂದು ಅಭಿಮಾನಿಗಳ ಸಂಘದ ಸದಸ್ಯರೊಬ್ಬರು ಹೇಳಿದ್ದಾರೆ. ವೀರೇಶ್ ಥಿಯೇಟರ್‌ನಲ್ಲಿ 30 ಅಡಿಯ 31 ಕಟೌಟ್ ಹಾಕಲಾಗಿದೆ.
ಕರ್ನಾಟಕದಾದ್ಯಂತ ವಿಶೇಷವಾಗಿ ವೀರಭದ್ರೇಶ್ವರ, ವೀರೇಶ್, ಪ್ರಸನ್ನ, ನವರಂಗ, ಸಂತೋಷ, ನರ್ತಕಿ, ತ್ರಿವೇಣಿ ಥಿಯೇಟರ್‌ಗಳು ಮತ್ತು ಶಿವಮೊಗ್ಗ, ಹೊಸಪೇಟೆ ಮತ್ತು ದಾವಣಗೆರೆಯ ವಿವಿಧ ಚಿತ್ರಮಂದಿರಗಳಲ್ಲಿ ಪುನೀತ್ ರಾಜ್‌ಕುಮಾರ್ ಅವರ ಪ್ರತಿ ಕಟ್ ಔಟ್ ಮೇಲೆ ಹೂವಿನ
ಮಳೆ ಅಭಿಮಾನಿಗಳು ಸುರಿಸಿದ್ದಾರೆ.
ಜೇಮ್ಸ್ ವೀಕ್ಷಿಸಲು ಥಿಯೇಟರ್‌ಗಳಿಗೆ ಬರುತ್ತಿರುವ ಸಿನಿ ಪ್ರೇಕ್ಷಕರಿಗೆ ತಿಂಡಿ, ಊಟ ಬಡಿಸಲು ಅಭಿಮಾನಿಗಳು ಮುಂದಾಗಿದ್ದಾರೆ. ಲಕ್ಷಗಟ್ಟಲೆ ಆಗುವ ಸಂಪೂರ್ಣ ವೆಚ್ಚವನ್ನು ಕರ್ನಾಟಕದ ವಿವಿಧ ಅಭಿಮಾನಿ ಸಂಘಗಳು ಭರಿಸುತ್ತವೆ. ಹಾಗೂ ನಿರ್ಮಾಪಕರಿಂದ 1 ರೂಪಾಯಿ ಕೂಡ ತೆಗೆದುಕೊಳ್ಳುವುದಿಲ್ಲ ಎಂದು ಅಭಿಮಾನಿ ಸಂಘದ ಸದಸ್ಯರು ಹೇಳಿದ್ದಾರೆ.