ಮೂಡಲಗಿಯ ಪ್ರತಿಷ್ಠಿತ ಸಹಕಾರಿ ಸಂಘಗಳಲ್ಲಿ ಒಂದಾದ ಶ್ರೀ ಮಹಾಲಕ್ಷ್ಮೀ ಅರ್ಬನ್ ಕೋ ಆಪ್ ಕ್ರೆಡಿಟ್ ಸೊಸಾಯಿಟಿಗೆ 31-03-2022 ಕ್ಕೆ ರೂ 3.05 ಕೋಟಿ ನಿವ್ವಳ ಲಾಭವಾಗಿದೆ ಎಂದು ಸಂಘದ ಅಧ್ಯಕ್ಷರಾದ ಶ್ರೀ ಮಲ್ಲಪ್ಪ. ಗು. ಗಾಣಿಗೇರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸಂಘದ ಪ್ರಧಾನ ಕಛೇರಿಯಲ್ಲಿ ನಡೆದ ಆಡಳಿತಮಂಡಳಿಯ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸಂಘವು ಮಾರ್ಚ ಅಂತ್ಯಕ್ಕೆ 2.49 ಕೋಟಿ ಶೇರು ಬಂಡವಾಳ 81.42 ಕೋಟಿ ಠೇವುಗಳು 11.72 ಕೋಟಿ ನಿಧಿಗಳನ್ನು ಹೊಂದಿ ವಿವಿಧ ಬ್ಯಾಂಕುಗಳಲ್ಲಿ ಠೇವಣಿದಾರರ ಭದ್ರತೆಗಾಗಿ 24.97 ಕೋಟಿ ಗುಂತಾವಣಿ ಮಾಡಿ 64.40 ಕೋಟಿ ರೂ ಸಾಲವಿತರಿಸಿದ್ದು ದುಡಿಯುವ ಬಂಡವಾಳ 102.50 ಕೋಟಿ ರೂ ಹೊಂದಿದೆ ಎಂದು ಹೇಳಿದರು.
ಸಂಘವು ಪ್ರಧಾನ ಕಛೇರಿಯನ್ನೊಳಗೊಂಡು 10 ಶಾಖೆಗಳನ್ನು ಹೊಂದಿದ್ದು ಪ್ರಧಾನ ಕಛೇರಿ, ಖಾನಟ್ಟಿ ಮತ್ತು ಸುಣಧೋಳಿ ಶಾಖೆಗಳಲ್ಲಿ ಸಂಘದ ಸ್ವಂತ ಭವ್ಯವಾದ ಕಟ್ಟಡಗಳನ್ನು ಹೊಂದಿದ್ದು ಎಲ್ಲ ಶಾಖೆಗಳು ಗಣನಿಕೃತವಾಗಿದ್ದು, ಪ್ರಾರಂಭದಿಂದಲೂ ಶೇ 15% ಶೇರು ಲಾಭಂಶ ವಿತರಿಸುತ್ತಾ ಶೇರುದಾರರ ವಿಶ್ವಾಸವನ್ನು ಗಳಿಸಿರುತ್ತದೆ.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷರಾದ ಡಾ||ಪಿ.ಎಸ್.ನಿಡಗುಂದಿ, ನಿರ್ದೇಶಕರಾದ ಶ್ರೀ ಎಮ್.ಬಿ ಈರಪ್ಪನವರ, ಎಸ್.ಆರ್.ಖಾನಟ್ಟಿ ಎಸ್ ಟಿ ಪಾರ್ಶಿ, ಎಮ್ ಸಿ ಗೋಕಾಕ, ಎಸ್ ಪಿ ಮುನ್ಯಾಳ, ಪ್ರಧಾನ ವ್ಯವಸ್ಥಾಪಕರಾದ ಸಿ ಎಸ್ ಬಗನಾಳ, ಸಹಕಾರ್ಯದರ್ಶಿ ಎಚ್ ಬಿ ಮುತಾಲಿಕದೇಸಾಯಿ, ಮಾರಾಟಾಧಿಕಾರಿ ಎ ಎಸ್ ಗಾಣಿಗೇರ ಹಾಗೂ ಪ್ರಧಾನ ಕಛೇರಿಯ ಎಲ್ಲ ಸಿಬ್ಬಂದಿಯವರು ಉಪಸ್ಥಿತರಿದ್ದರು
Ad9 News Latest News In Kannada
