Breaking News

ಅರಭಾವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅರವಿಂದ್ ದಳವಾಯಿ ಗೆಲುವು ನಿಶ್ಚಿತ_ವಿ.ಪಿ. ನಾಯ್ಕ್.

Spread the love

 


ಕೌಜಲಗಿ: ಬುಧವಾರ ನಡೆದ  ಕೌಜಲಗಿಯ ಕಾಂಗ್ರೆಸ್ ಕಚೇರಿಯಲ್ಲಿ ಅರಭಾವಿ ವಿಧಾನಸಭಾ ಮತಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಯಶಸ್ವಿ ಯಾಗಿ ಜರುಗಿತು. ಈ ಸಭೆಯಲ್ಲಿ 2023ರ ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಅರವಿಂದ್ ದಳವಾಯಿ ಅವರ ಗೆಲುವು ನಿಶ್ಚಿತ ಎಂದು ಹಿರಿಯ ಕಾಂಗ್ರೆಸ್ ಮುಖಂಡ ವಿ ಪಿ ನಾಯಕ್ ಹೇಳಿದರು. 2018ರವರೆಗೆ ಅರಭಾವಿಯಲ್ಲಿ ಕಾಂಗ್ರೆಸ್ ಪರಿಸ್ಥಿತಿ ಹೀನಾಯವಾಗಿತ್ತು. 2018 ರಲ್ಲಿ ಅರವಿಂದ ದಳವಾಯಿ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರಿ ಅಲ್ಲಿಂದ ಇಲ್ಲಿಯವರೆಗೆ ಕಾಂಗ್ರೆಸ್ ಕಟ್ಟಾಳಾಗಿ ನಿರಂತರ ಪಕ್ಷ ಸೂಚಿಸಿದ ಸಭೆ, ಸಮಾರಂಭ, ಪ್ರತಿಭಟನೆ ಪಾದಯಾತ್ರೆ ಮುಂತಾದ ಕಾರ್ಯಕ್ರಮಗಳ ಮೂಲಕ ಪಕ್ಷ ಸಂಘಟನೆ ಮಾಡಿದ್ದಾರೆ. ಅದರ ಪ್ರತಿಫಲ ಇಂದು ಪಕ್ಷದ ವರಿಷ್ಠರು ಕಾಂಗ್ರೆಸ್ ಟಿಕೆಟ್ ನೀಡಿದ್ದಾರೆಂದು ಅಭಿಪ್ರಾಯಪಟ್ಟರು.


ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ರೈತ ಮುಖಂಡ ಮಾರುತಿ ಕರಿಶೆಟ್ಟಿಯವರು ಒಬ್ಬ ಸರಳ ಸಜ್ಜನಿಕೆಯ ನಾಯಕ, ಬಡವರ-ದಿನದಲಿತರ ಕಾಳಜಿಯುಳ್ಳವರು, ನೆರೆ ಸಂದರ್ಭದಲ್ಲಿ, ಕೋವಿಡ್ ಸಂದರ್ಭದಲ್ಲಿ ಸಂತ್ರಸ್ತರಿಗೆ ಭೇಟಿಯಾಗಿ ಸಾಂತ್ವನ ಹೇಳಿ ಮನೆ-ಮನೆಗೆ ದಿನಸಿ, ಔಷಧ, ಹಾಸಿಗೆ ,ಹೊದಿಕೆ, ಮುಂತಾದ ವಸ್ತುಗಳ ಮೂಲಕ ನೆರವು ನೀಡಿ ಮನೆ ಮಾತಾಗಿದ್ದಾರೆ ಎಂದರು.
ಸದರಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅರವಿಂದ ದಳವಾಯಿಯವರು ಮಾತನಾಡಿ ಪಕ್ಷ ನನ್ನ ಪ್ರಾಮಾಣ ಕತೆ, ನಿμÉ್ಠ, ಹಾಗೂ ಕಾರ್ಯತತ್ಪರತೆಯನ್ನು ಗುರುತಿಸಿ ಪಕ್ಷದ ವರಿಷ್ಠರಾದ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸಿದ್ದರಾಮಯ್ಯನವರು, ಡಿ ಕೆ ಶಿವಕುಮಾರ್, ರಣದೀಪ್ ಸಿಂಗ್ ಸುರ್ಜೆವಾಲಾ, ಎಂ ಬಿ ಪಾಟೀಲ್, ಸತೀಶ್ ಜಾರಕಿಹೊಳಿ ಸೇರಿದಂತೆ ಎಲ್ಲ ರಾಜ್ಯ ನಾಯಕರು ನನ್ನ ಮೇಲೆ ಭರವಸೆಯಿಟ್ಟು ಪಕ್ಷದ ಟಿಕೆಟ್ ನೀಡಿದ್ದಾರೆ. ಇದು ಕೇವಲ ನನ್ನ ಪರಿಶ್ರಮಕ್ಕೆ ಸಿಕ್ಕ ಫಲವಲ್ಲ , ಇದು ಎಲ್ಲ ಅರಭಾವಿ ಕಾಂಗ್ರೆಸ್ ಕಾರ್ಯಕರ್ತರ ಶ್ರಮಕ್ಕೆ ಸಿಕ್ಕ ಫಲ ಎಂದರು. ಅರಭಾವಿ ಕಾಂಗ್ರೆಸ್‍ನಲ್ಲಿ ನನ್ನನ್ನು ಸೇರಿ 6 ಜನ ಟಿಕೆಟ್ ಆಕಾಂಕ್ಷಿಗಳಿದ್ದೆವು. ಅದರಲ್ಲಿ ಎಲ್ಲರೂ ಸಮಾನ ಮನಸ್ಸಿನಿಂದ ಕುಳಿತು ಚರ್ಚಿಸಿ ಪಕ್ಷ ನಮ್ಮಲ್ಲಿ ಯಾರಿಗೆ ಟಿಕೆಟ್ ನೀಡಿದರೂ ಕೂಡ ಉಳಿದವರು ಪಕ್ಷದ ಗೆಲುವಿಗಾಗಿ ಶ್ರಮಿಸುವುದಾಗಿ ಪ್ರಮಾಣ ಮಾಡಿದ್ದೆವು. ಈ ಕುರಿತಂತೆ ನಾನು ನನ್ನ ಸಮಾನ ಮನಸ್ಕ ಗೆಳೆಯರಲ್ಲಿ ಪಕ್ಷದ ಗೆಲುವಿಗಾಗಿ ಕೈಜೋಡಿಸಲು ವಿನಂತಿಸುತ್ತೇನೆ.
ಕಾಂಗ್ರೆಸ್ ಪಕ್ಷ ಒಂದು ರಾಷ್ಟ್ರೀಯ ಪಕ್ಷವಾಗಿದ್ದು ಅಳೆದು ತೂಗಿ, ಸಮೀಕ್ಷೆಗಳ ಆಧರಿಸಿ, ಪಕ್ಷದ ಪ್ರಮುಖ ಮುಖಂಡರುಗಳ ಸಲಹೆ ಸ್ವೀಕರಿಸಿ ನಮ್ಮ ಗೋಕಾಕ್ ತಾಲೂಕಿನ ಎರಡು ಮತಕ್ಷೇತ್ರಗಳಿಗೆ ಗೋಕಾಕ್‍ದಿಂದ ಪಂಚಮಸಾಲಿ ಸಮಾಜದ ಆಕಾಂಕ್ಷಿ ಶ್ರೀ ಮಹಾಂತೇಶÀ ಕಡಾಡಿಯವರಿಗೆ ಮತ್ತು ಅರಭಾವಿ ಮತಕ್ಷೇತ್ರದ ಕುರುಬ ಸಮಾಜದ ನನಗೆ ಪಕ್ಷದ ಟಿಕೆಟ್ ನೀಡಿರುತ್ತಾರೆ. ಆಕಾಂಕ್ಷಿಗಳಾದ ನಮಗೆ ಟಿಕೆಟ್ ಸಿಗದಿದ್ದಾಗ ಅಸಮಾಧಾನ ಆಗುವುದು ಸಹಜ. ಆದರೆ, ಪಕ್ಷ ಒಂದು ತಾಯಿ ಇದ್ದಂತೆ ಅದಕ್ಕೆ ದ್ರೋಹ ಮಾಡದೆ ತಾಯಿ ಹೇಳಿದ ಮಾತನ್ನು ಕೇಳಿ ಪಕ್ಷದ ಗೆಲುವಿಗಾಗಿ ಶ್ರಮಿಸೋಣ ಎಂದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಗುಂಡಪ್ಪ ಕಮತೆ, ಮೀರಾಸಾಬ ಅನಸಾರಿ, ಪ್ರಕಾಶ್ ಅರಳಿ, ಸಲೀಂ ಇನಾವiದಾರ, ಮದಾರ್ ಜಕಾತಿ. ಮಲಿPಸ್ಸಾಬ್ ಲಾಡಖಾನ, ಸದಾಶಿವ್ ಮಾಂಗ್, ದಳವಾಯಿಯವರ ಧರ್ಮಪತ್ನಿ ಸುರೇಖಾ ದಳವಾಯಿ ಮುಂತಾದವರು ಮಾತನಾಡಿದರು.
ದಿವ್ಯ ಸಾನಿಧ್ಯ ವಹಿಸಿದ ಮಖÀನಾಪೂರ್ ಗುರುಪೀಠದ ಪೂಜ್ಯರಾದ ಪರಮ ಪೂಜ್ಯ ಶ್ರೀ ಸೋಮೇಶ್ವರ ಮಹಾಸ್ವಾಮಿಗಳು ಮಾತನಾಡಿ ಈ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿದ ತಾವು ದಳವಾಯಿ ಅವರ ಗೆಲುವಿಗೆ ಧನಸಹಾಯ ಮಾಡುತ್ತಿರುವಿರಿ ಇದರ ಜೊತೆ ತಾವು ದಳವಾಯಿ ಅವರ ಹೆಗಲಿಗೆ ಹೆಗಲು ಕೊಟ್ಟು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕೆಂದರು. ಮುಂದುವರೆದು ಮಾತನಾಡುತ್ತಾ ಈ ಕ್ಷೇತ್ರದ ಅಭ್ಯರ್ಥಿಗಳಲ್ಲಿ ಅರವಿಂದ್ ದಳವಾಯಿ ಅವರು ವಿದ್ಯಾವಂತರು ಹಾಗೂ ಪ್ರಾಮಾಣ ಕರಾಗಿದ್ದು ಇಂತಹ ಅಭ್ಯರ್ಥಿಗಳಿಗೆ ಮತ ನೀಡಿದ್ದಲ್ಲಿ ಕ್ಷೇತ್ರ ಸಂಪೂರ್ಣ ಅಭಿವೃದ್ಧಿ ಕಾಣುವುದರಲ್ಲಿ ಎರಡು ಮಾತಿಲ್ಲ ಎಂದರು.
ಈ ಕಾರ್ಯಕ್ರಮದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡರುಗಳಾದ ಸುರೇಶ್ ಮಗದುಮ್ , ವಿರುಪಾಕ್ಷ ಮುಗಳಕೋಡ, ಸದಾಶಿವ್ ಹಂದಿಗುಂದ್, ಇμರ್Áದ ಪೈಲ್ವಾನ್, ಮಾಳಪ್ಪ ಬಿದರಿ, ಚಂದಕಾಂತ್ರ ನಾಯಿಂಗ್ಲಜ, ವೆಂಕನಗೌಡ ಪಾಟೀಲ, ಮಾದೇವ ಸಮಗಾರ, ಧರಪ್ಪಾ ಪಾಠಕರಿ, ರೇವಣ್ಣ ಮುನ್ಯಾಳ್, ಕಲ್ಲಪ್ಪ ಸೊಲ್ಲಾಪುರೆ, ಜಯಶ್ರೀ ಸಣ್ಣಮೇತ್ರಿ, ಕಾಂಚನಾ ಮೇತ್ರಿ, ಅನಿತಾ ನಾಯಿಂಗ್ಲಜ ಸೇರಿದಂತೆ ಮುಂತಾದವರು ಹಾಜರಿದ್ದರು.
,


Spread the love

About Ad9 News

Check Also

ಟಿಎಪಿಸಿಎಂಎಸ್ ಗೆ ಅಶೋಕ ನಾಯಿಕ ಅಧ್ಯಕ್ಷ! ವಿಠ್ಠಲ ಪಾಟೀಲ ಉಪಾಧ್ಯಕ್ಷ ರಾಗಿ ಪುನರಾಯ್ಕೆ

Spread the love ಗೋಕಾಕ ಮಾ 3 : ಗೋಕಾಕ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘಕ್ಕೆ ನೂತನ …

Leave a Reply

Your email address will not be published. Required fields are marked *