Breaking News
Home / ಮೂಡಲಗಿ / ಜನರ ಪ್ರೀತಿ- ವಿಶ್ವಾಸಗಳಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು. ಮತಕ್ಷೇತ್ರದ ಸಮಸ್ತ ಮತದಾರ ಬಂಧುಗಳಿಗೆ ಸದಾ ಋಣಿಯಾಗಿರುವೆ: ಬಾಲಚಂದ್ರ ಜಾರಕಿಹೊಳಿ

ಜನರ ಪ್ರೀತಿ- ವಿಶ್ವಾಸಗಳಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು. ಮತಕ್ಷೇತ್ರದ ಸಮಸ್ತ ಮತದಾರ ಬಂಧುಗಳಿಗೆ ಸದಾ ಋಣಿಯಾಗಿರುವೆ: ಬಾಲಚಂದ್ರ ಜಾರಕಿಹೊಳಿ

Spread the love

 

ಮೂಡಲಗಿ- ಈ ಭಾಗದ ರೈತ ಸಮುದಾಯದ ಕೃಷಿ ಚಟುವಟಿಕೆಗಳನ್ನು ಪೂರಕವಾಗಲು ಘಟಪ್ರಭಾ ಬಲದಂಡೆ ಕಾಲುವೆ ಮೂಲಕ ನೀರು ಹರಿಸಿ ಅನುಕೂಲ ಮಾಡಿ ಕೊಡಲಾಗುತ್ತಿದೆ ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಬಿಜೆಪಿ ಅಭ್ಯರ್ಥಿ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ತಾಲ್ಲೂಕಿನ ದಂಡಾಪೂರ ಗ್ರಾಮದಲ್ಲಿ ತೆರಳಿ ಮತ ಯಾಚಿಸುತ್ತಿದ್ದ ಅವರು, ರೈತ ಸಮುದಾಯದ ಬೇಡಿಕೆಗಳಿಗೆ ಸ್ಪಂದಿಸುತ್ತಿರುವುದು ನನಗೆ ಖುಷಿಯಾಗುತ್ತಿದೆ ಎಂದು ಹೇಳಿದರು.
ನಾನು ಶಾಸಕನಾಗಿ ಆಯ್ಕೆಯಾದಾಗಿನಿಂದ ಘಟಪ್ರಭಾ ಎಡದಂಡೆ ಮತ್ತು ಘಟಪ್ರಭಾ ಬಲದಂಡೆಯ ಕಾಲುವೆಯ ಟೆಲ್ ಎಂಡ್ ರೈತರಿಗೆ ಕೃಷಿ ಚಟುವಟಿಕೆಗಳನ್ನು ಮತ್ತು ಕುಡಿಯುವ ನೀರಿನ ಸಲುವಾಗಿ ಹಿಡಕಲ್ ಜಲಾಶಯ ದಿಂದ ನೀರನ್ನು ಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಾ ಬರುತ್ತಿದ್ದೇನೆ. ಕುಡಿಯುವ ನೀರಿನ ಆಹಾಕಾರ ತಪ್ಪಿಸಲು ಜನತೆಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಸಮರ್ಪಕವಾಗಿ ಮಾಡುತ್ತಿದ್ದೇನೆ. ರೈತರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುವ ಗುರಿ ನನ್ನದು ಎಂದು ಹೇಳಿದರು.
ಅರಭಾವಿ ಕ್ಷೇತ್ರದ ಪ್ರತಿ ಸಮುದಾಯಗಳ ಸಹೋದರ- ಸಹೋದರಿಯರು ನನ್ನ ತಮ್ಮ ಕುಟುಂಬದ ಸದಸ್ಯನಂತೆ ಚುನಾವಣೆಯಲ್ಲಿ ಬೆಂಬಲಿಸಿ ಆಶೀರ್ವದಿಸುತ್ತಿದ್ದಾರೆ. ಜನರ ಪ್ರೀತಿ- ವಿಶ್ವಾಸಗಳಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು. ಮತಕ್ಷೇತ್ರದ ಸಮಸ್ತ ಮತದಾರ ಬಂಧುಗಳಿಗೆ ಸದಾ ಋಣಿಯಾಗಿರುವೆ ಎಂದು ಹೇಳಿದರು.
ದಂಡಾಪೂರ ಗ್ರಾಮವು ಈ ಮೊದಲಿನಿಂದಲೂ ನನಗೆ ಪ್ರತಿ ಚುನಾವಣೆಗಳಲ್ಲಿ ಮುನ್ನಡೆ ಮತಗಳನ್ನು ನೀಡುತ್ತ ಬರುತ್ತಿದ್ದಾರೆ. ನಮ್ಮ ಕ್ಷೇತ್ರದ ಮತಗಟ್ಟೆಯು ಈ ಗ್ರಾಮದಿಂದಲೇ ಆರಂಭವಾಗುತ್ತಿದೆ. ಇಲ್ಲಿಂದ ಆರಂಭವಾಗುವ ಮುನ್ನಡೆಯು ಪ್ರತಿ ಮತಗಟ್ಟೆಗಳಲ್ಲಿಯೂ ಲೀಡ್ ಕೊಡುವ ಮೂಲಕ ಎಲ್ಲ ಸಮಾಜದ ಬಾಂಧವರು ನನ್ನ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸುತ್ತಾರೆ ಎಂದು ತಿಳಿಸಿದರು.
ಮೇ 10 ರಂದು ನಡೆಯುವ ವಿಧಾನ ಸಭೆ ಚುನಾವಣೆಯಲ್ಲಿ ನನ್ನ ಶೇಜ್ 5 ಇದ್ದು, ಕಮಲ ಹೂವಿನ ಗುರುತಿಗೆ ಮತ ನೀಡುವಂತೆ ಕೋರಿಕೊಂಡ ಅವರು, ನನ್ನ ಗೆಲುವಿಗೆ ಕಾರ್ಯಕರ್ತ ಬಂಧುಗಳು ಪ್ರತಿಯೊಬ್ಬ ಮತದಾರರನ್ನು ಸಂಪರ್ಕ ಸಾಧಿಸಿ ಡಬಲ್ ಎಂಜಿನ್ ಸರಕಾರದ ಜನಪ್ರಿಯ ಸಾಧನೆಗಳನ್ನು ತಿಳಿಸುವಂತೆ ಮನವಿ ಮಾಡಿದರು.
ಘಟಪ್ರಭಾ ಸಹಕಾರಿ ಸಂಸ್ಥೆಯ ನಿರ್ದೇಶಕ ಲಕ್ಷ್ಮಣ ಗಣಪ್ಪಗೋಳ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಹಾದೇವ ತುಕ್ಕಾನಟ್ಟಿ, ಬೀರಪ್ಪ ಸೀಮಕ್ಕನ್ನವರ, ಸಿದ್ದಪ್ಪ ಢವಳೇಶ್ವರ ರಾಮಪ್ಪ ದೇವರಮನಿ, ರಾಮಪ್ಪ ಸತ್ತೆಪ್ಪಗೋಳ, ಲಕ್ಷ್ಮಣ ಸೀಮಕ್ಕನವರ, ರುದ್ರಪ್ಪ ಪೋಲಿಸಗೋಳ, ಸಿದ್ದಪ್ಪ ತುಕ್ಕಾನಟ್ಟಿ, ಪುಂಡಲೀಕ ಗಣಪ್ಪಗೋಳ, ಮಲಕಾರಿ ಗಣಪ್ಪಗೋಳ, ಸಿದ್ದಪ್ಪ ಖೋತ, ಸಿದ್ರಾಮ ಸನದಿ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.
ನಂತರ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮತ ಯಾಚಿಸಿದರು.

 


Spread the love

About Ad9 Haberleri

Check Also

ಮೂಡಲಗಿಯಲ್ಲಿ 6.92 ಕೋಟಿ ರೂಪಾಯಿ ವೆಚ್ಚದಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಾಣ- ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love *ಮೂಡಲಗಿ*- ಮೂಡಲಗಿ ಪಟ್ಟಣದಲ್ಲಿ ಪುರಸಭೆಯಿಂದ ಅತ್ಯಾಧುನಿಕವಾದ ವಾಣಿಜ್ಯ ಮಳಿಗೆಯನ್ನು ನಿರ್ಮಿಸಲಿದ್ದು, ಇದಕ್ಕಾಗಿ 6.92 ಕೋಟಿ ರೂ. …

Leave a Reply

Your email address will not be published. Required fields are marked *