ಮೂಡಲಗಿ: ಪಟ್ಟಣದ ಕಲ್ಮೇಶ್ವರ ವೃತ್ತದಲ್ಲಿ ಜರುಗಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಆಪ್ತ ಸಹಾಯಕರಾದ ದಿ. ನಾಗಪ್ಪ ಶೇಖರಗೋಳ ಅವರ ಭಾವಚಿತ್ರಕ್ಕೆ ಪುಷ್ಪಸಮರ್ಪಣೆ ಹಾಗೂ ದೀಪ ಬೆಳಗಿಸುವ ಮೂಲಕ ಶೃದ್ಧಾಂಜಲಿಯನ್ನು ಬಾಲಚಂದ್ರ ಜಾರಕಿಹೊಳಿ ಅವರು ಅಭಿಮಾನಿ ಬಳಗದವನ್ನು ಸಲ್ಲಿಸಿದರು.
ಈ ವೇಳೆ ಮಾತನಾಡಿದ…ಎಡ್ವಿನ್ ಪರಸನ್ನವರ ನಾಗಪ್ಪ ಅವರು ಅರಭಾವಿ ಕ್ಷೇತ್ರದ ಸಂಪೂರ್ಣ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದರು. ಜನರ ಕಷ್ಟಗಳಿಗೆ ತಕ್ಷಣವೇ ಶಾಸಕರ ಗಮನಕ್ಕೆ ತಂದು ಸಾರ್ವಜನಿಕರ ಕಷ್ಟಗಳಿಗೆ ಸ್ಪಂದಿಸಿ ಧೈರ್ಯ ತುಂಬುತ್ತಿದ್ದರು. ಆದರೆ ವಿಧಿಯಾಟದಲ್ಲಿ ನಾಗಪ್ಪ ಅವರು ಹೃದಯಾಘಾತಕ್ಕೆ ನಿಧನರಾದರು. ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಮೃತರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಮರೆಪ್ಪ ಮರೆಪ್ಪಗೋಳ, ಡಾ ಎಸ್ ಎಸ್ ಪಾಟೀಲ, ಮನೋಹರ ಸಣ್ಣಕ್ಕಿ, ರಮೇಶ ಸಣ್ಣಕ್ಕಿ, ಶಿವಬಸು ಸುಣಧೋಳಿ, ಹಣಮಂತರ ಸತರಡ್ಡಿ, ಶಾಬು ಸಣ್ಣಕ್ಕಿ, ಚೇತನ ಹೊಸಕೋಟಿ, ವರ್ಧಮಾನ, ಅನೀಲ ಗಸ್ತಿ ಹಾಗೂ ಅನೇಕ ಅಭಿಮಾನಗಳು ಇದ್ದರು.