Breaking News
Home / ಗೋಕಾಕ / ಹೊಸ ವರುಷವು ಎಲ್ಲರಿಗೂ ಸಂಭ್ರಮೊಲ್ಲಾಸ ತರಲಿ- ಶಾಸಕ ಬಾಲಚಂದ್ರ ಜಾರಕಿಹೊಳಿ ಶುಭಾಶಯ

ಹೊಸ ವರುಷವು ಎಲ್ಲರಿಗೂ ಸಂಭ್ರಮೊಲ್ಲಾಸ ತರಲಿ- ಶಾಸಕ ಬಾಲಚಂದ್ರ ಜಾರಕಿಹೊಳಿ ಶುಭಾಶಯ

Spread the love

ನಮ್ಮ ಕನಸುಗಳನ್ನು ಸಾಕಾರಗೊಳಿಸೋಣ

*ಗೋಕಾಕ-* ಅರಭಾವಿ ಶಾಸಕ ಹಾಗೂ ಕೆಎಂಎಫ್ ನಿರ್ದೇಶಕ ಬಾಲಚಂದ್ರ ಜಾರಕಿಹೊಳಿ ಅವರು ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಶುಭಾಶಯಗಳನ್ನು ಕೋರಿದ್ದಾರೆ.
ಹೊಸ ಚೈತನ್ಯದೊಂದಿಗೆ 2024 ರ ಹೊಸ ವರ್ಷವನ್ನು ಸಡಗರದಿಂದ ಬರಮಾಡಿಕೊಳ್ಳೋಣ. ಕಳೆದಿರುವ ಕೆಲವು ಕಹಿ ಘಟನೆಗಳನ್ನು ಮರೆತು ಪರಸ್ಪರ ಪ್ರೀತಿ, ವಿಶ್ವಾಸದೊಂದಿಗೆ ಪ್ರತಿಯೊಂದರಲ್ಲಿಯೂ ಸಾಮರಸ್ಯವನ್ನು ಮೂಡಿಸುವ ಕೆಲಸ ಮಾಡೋಣ. ಬರಗಾಲಕ್ಕೆ ತತ್ತರಿಸಿರುವ ನೇಗಿಲಯೋಗಿಯ ಬಾಳು ಈ ಬಾರಿಯಾದರೂ ಬಂಗಾರವಾಗಲಿ. ಹೊಸ ವರುಷ ಎಲ್ಲರಿಗೂ ಹರುಷ ತರಲಿ ಎಂದು ಅವರು ಆಶಿಸಿದ್ದಾರೆ.
ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ಹೇಳಿದಂತೆ, ನಿದ್ರೆ ಮಾಡುತ್ತ ಕಾಣುವುದು ಕನಸಲ್ಲ. ಕನಸು ಕಂಡ ಮೇಲೆ ನಿದ್ರೆ ಮಾಡಿದಂತಾಗುವುದು ನಿಜವಾದ ಕನಸು. ನಮಗೂ ಸಹ ಅಂತಹ ಕನಸುಗಳಿದ್ದರೆ ಅವುಗಳನ್ನು ನನಸು ಮಾಡಿಕೊಳ್ಳವುದರ ಬಗ್ಗೆ ನಾವುಗಳು ಚಿತ್ತ ಹರಿಸಿ ನವ ವರುಷವನ್ನು ನವೋಲ್ಲಾಸದಿಂದ ಸಂಭ್ರಮಿಸೋಣ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.


Spread the love

About Ad9 Haberleri

Check Also

ನದಿ ತೀರದ ಗ್ರಾಮಗಳಿಗೆ ಭೇಟಿ ನೀಡಿದ ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ

Spread the love ಗೋಕಾಕ- ಪ್ರವಾಹ ಪೀಡಿತ ಪ್ರದೇಶಗಳಿಗೆ ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ ಅವರು ಭೇಟಿ ಮಾಡಿ ಸಂತ್ರಸ್ತರಿಗೆ …

Leave a Reply

Your email address will not be published. Required fields are marked *