ಮೂಡಲಗಿ: ರಾಜ್ಯದಲ್ಲಿನ ಸಕಾರವು ಬಡವರ ಪರ ಸ್ಪಂಧಿಸುವ ಹಾಗೂ ಸಾಮಾಜಿಕ ನ್ಯಾಯವನ್ನು ನೀಡುವ ದಿಟ್ಟವಾದ ಸರಕಾರವೆಂದು ಚುನಾವಣೆ ‘ದರ್ಭಗಳಲ್ಲಿ ಸಾರ್ವಜನಿಕವಾಗಿ ಪ್ರಚಾರವನ್ನು ಮಾಡಿಕೊಳ್ಳುತ್ತಿದ್ದರೂ ಸಹ ರಾಜ್ಯದಲ್ಲಿ ಸುಮಾರು 25 ಲಕ್ಷಗಳ ಜನಸಂಖ್ಯೆ ಹೊಂದಿದ ಪಿಂಜಾರ/ನದಾಫ್ ಸಮಾಜಕ್ಕೆ ಕಡೆಗಣನೆ ಹಾಗೂ ನಿರ್ಲಕ್ಷತನ ತೋರುವುದು ಸಮಾಜಕ್ಕೆ ಮಾಡುವ ಘೋರ ಅನ್ಯಾಯವಾಗಿದೆ ಎಂದು ಕರ್ನಾಟಕ ರಾಜ್ಯ ನದಾಫ /ಪಿಂಜಾರ ಸಂಘದ ಮೂಡಲಗಿ ತಾಲೂಕಾ ಘಟಕದ ಅಧ್ಯಕ್ಷ ಅನ್ವರ ನದಾಫ ಹೇಳಿದರು
ಅವರು ಕರ್ನಾಟಕ ರಾಜ್ಯ ನದಾಫ /ಪಿಂಜಾರ ಸಂಘದಿಂದ ಪಟ್ಟಣದಲ್ಲಿ ತಹಶೀಲ್ದಾರ ಡಾ.ಮಹಾದೇವ ಸನಮುರಿ ಅವರು ಮೂಲಕ ರಾಜ್ಯ ಸರಕಾರಕ್ಕೆ ನೂತನವಾಗಿ ಘೋಷಿಸಿರುವ ಪಿಂಜಾರ/ನದಾಫ್ ಹಾಗೂ ಇತರೆ 13 ಜಾತಿಗಳ ಅಭಿವೃದ್ಧಿ ನಿಗಮಕ್ಕೆ ಅನುದಾನ ನೀಡುಬೇಕೆಂದು ಆಗ್ರಹಿಸಿ ಮನವಿಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ಕರ್ನಾಟಕ ರಾಜ್ಯಾದ್ಯಂತ ಸುಮಾರು 22 ರಿಂದ 25 ಲಕ್ಷಗಳ ಜನಸಂಖ್ಯೆ ಹೊಂದಿರುವ ನದಾಫ್/ಪಿಂಜಾರ ಜನಾಂಗವು ಸಾಮಾಜಿಕ, ಶೈಕ್ಷಣಿಕ, ಸಾಂಸ್ಕøತಿಕ, ಔದ್ಯೋಗಿಕ, ರಾಜಕೀಯ ಹಾಗೂ ಹಲವಾರು ರಂಗಗಳಲ್ಲಿ ಅತ್ಯಂತ ಹಿಂದುಳಿದ ಮತ್ತು ಕಡುಬಡತನದ ನೆರಳಲ್ಲಿ ಕಷ್ಟಕರ ಜೀವನವನ್ನು ನಡೆಸುತ್ತಿರುವ ಶೋಷಿತ ಸಮಾಜವಾಗಿದೆ. ಈ ಜನಾಂಗ ಇಸ್ಲಾಂ ಧರ್ಮದ ಮುಸ್ಲಿಂ (ಅಲ್ಪಸಂಖ್ಯಾತರ) ಪಂಗಡದಲ್ಲಿದ್ದರೂ ಸಹ ಸರಕಾರದ ವೃತ್ತಿಪರ ಜಾತಿಗಳ ವಿಂಗಡನೆ ಅನ್ವಯ ನದಾಫ್/ಪಿಂಜಾರ ಉಪ ಪಂಗಡಕ್ಕೆ ಸೇರಿದ್ದು, ಹಿಂದುಳಿದ ವರ್ಗಗಳ ಇಲಾಖೆಗೆ ಸಂಬಂಧಿಸಿದ ಪ್ರವರ್ಗ-1 ರ ಮೀಸಲಾತಿಯನ್ನು ಹೊಂದಿದೆ. ಸರಕಾರದ ನಿರ್ದೇಶನದಂತೆ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಮತ್ತು ಇತರ ಯೋಜನೆಗಳಿಂದ ಸೌಲಭ್ಯಗಳನ್ನು ಪಡೆದುಕೊಳ್ಳುವಲ್ಲಿ ಸತತವಾಗಿ ತಾಂತ್ರಿಕ ದೋಷಗಳಿಂದ ಹಾಗೂ ಅಧಿಕಾರಿಗಳ ನಿರ್ಲಕ್ಷತೆಯಿಂದ ಯಾವದೇ ಯೋಜನೆಗಳು ಸರಿಯಾಗಿ ತಲುಪದೇ ವಂಚಿತರಾಗುತ್ತಿದ್ದು, ಇದರ ನಿವಾರಣೆಗಾಗಿ ಹಲವಾರು ವರುಷಗಳಿಂದ ಹೋರಾಟ ಮಾಡಿ ಸಮಾಜದ ಅಭಿವೃದ್ಧಿಗೆ ನೇರವಾಗಿ ಅನುಕೂಲವಾಗಲೆಂದು ಪ್ರತ್ಯೇಕ ನಿಗಮ ಮಂಡಳಿಗೆ ಬೇಡಿಕೆಯನ್ನು ಸಲ್ಲಿಸದ ಪರಿಣಾಮ ಹಿಂದಿನ ಸರಕಾರ ಈ ಸಮಾಜದ ತೊಂದರೆಗಳನ್ನು ಗಮನಿಸಿ ಸಾಮಾಜಿಕ ಕಳಕಳಿಯಿಂದ ಜನಾಂಗಕ್ಕೆ ನೇರವಾಗಿ ಸೌಲಭ್ಯಗಳನ್ನು ಪಡೆದುಕೊಳ್ಳಲು “ಪಿಂಜಾರ/ನದಾಫ್ ಹಾಗೂ ಇತರ 13 ಜಾತಿಗಳ ಅಭಿವೃದ್ಧಿ ನಿಗಮ”ದ ಆದೇಶದೊಂದಿಗೆ ಘೋಷಣೆ ಮಾಡಿದ ನಂತರ ಈ ಹೊಸ
ಸರಕಾರ ಬಂದನಂತರ ಸಮಾಜದ ಹಿತದೃಷ್ಟಿಯಿಂದ ಹಾಗೂ ಜನಸಂಖ್ಯೆ ಆಧಾರದ ಮೇಲೆ ಯೋಜನೆಗಳನ್ನು ರೂಪಿಸಲು ಬಜೆಟ್ ನಲ್ಲಿ ಅಥವಾ ವಿಶೇಷ ಪ್ಯಾಕೇಜ ಮೂಲಕ ಅವಶ್ಯ ಇರುವ ಅನುದಾನ ನೀಡಬೇಕೆಂದು ಸತತವಾಗಿ ಸನ್ಮಾನ್ಯ ಮುಖ್ಯಮಂತ್ರಿಗಳವರಿಗೆ ಸಚಿವರುಗಳಿಗೆ ಮನವಿ ನೀಡುತ್ತಿದ್ದರೂ ಸಹ ಸರಕಾರ ಸ್ಪಂಧಿಸದೇ ಸಮಾಜವನ್ನು ಸೌಲಭ್ಯಗಳಿಂದ ವಂಚಿತರನ್ನಾಗಿ ಮಾಡುತ್ತಲಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಹಾಲಿ ಮುಖ್ಯ ಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಸಾಮಾಜಿಕ ಕಳಕಳಿವುಳ ನಾಯಕರಿದ್ದು ಅತ್ಯಂತ ಹಿಂದುಳಿದ ಹಾಗೂ ಶೋಷಿತರ ಸಮಾಜವನ್ನು ಕಡೆಗಣಿಸದೇ ಸಮಾಜದ ಹಿತಾಶಕ್ತಿಯಿಂದ ಕಷ್ಟಗಳನ್ನು ಗುರುತಿಸಿ, ಜನಸಂಖ್ಯೆ ಆಧಾರದ ಮೇಲೆ ಯೋಜನೆಗಳನ್ನು ರೂಪಿಸಲು ತಕ್ಷಣ ಸಿಂಜಾರ/ನದಾಫ್ ಪ್ರತ್ಯೇಕ ನಿಗಮಕ್ಕೆ ಅವಶ್ಯ ಇರುವ ಅನುದಾನವನ್ನು ನೀಡಬೇಕು. ನಮ್ಮ ಬೇಡಿಕೆಗೆ ಸ್ಪಂಧಿಸದೇ ಇದ್ದಲ್ಲಿ ಸರಕಾರವು ಹಿಂದುಳಿದ ಸಮಾಜಗಳಿಗೆ ಘೋರ ಅನ್ಯಾಯ ಎಸಗುತ್ತಿರುವ ಬಗ್ಗೆ ರಾಜ್ಯಾದ್ಯಂತ ಸಾರ್ವಜನಿಕರ ಗಮನಕ್ಕೆ ತರಲು ಬಹಿರಂಗವಾಗಿ ಪ್ರತಿಭಟನೆ, ಧರಣಿಗಳನ್ನು ಮಾಡಲಾಗುವುದು ಎಂದರು.
ಮನವಿ ಸ್ವೀಕರಿಸಿದ ಡಾ. ತಹಶೀಲ್ದಾರ ಡಾ.ಮಹಾದೇವ ಸನಮುರಿ ಅವರು ಮನವಿ ಜಿಲ್ಲಾಧೀಕಾರಿಗಳ ಮುಖಾಂತರ ಸರಕಾರಕ್ಕೆ ಕಳುಹಿಸುವುದಾಗಿ ಹೇಳಿದರು.
ಈ ಸಮಯದಲ್ಲಿ ಸಂಘಟನೆಯ ಉಪಾಧ್ಯಕ್ಷ ಮಲಿಕಜಾನ ನದಾಫ, ಕಾರ್ಯದರ್ಶಿ ಮೀರಾಸಾಬ ನದಾಫ, ಖಜಾಂಚಿ ಸೈಯದಸಾಬ ನದಾಫ, ಸಂಘಟಕ ಝಾಕೀರಹುಸೇನ ನದಾಫ, ಸದಸ್ಯರಾದ ಅಮೀನಸಾಬ ನದಾಫ, ಅಕ್ಬರ ನದಾಫ, ಆಶೀಫ ನದಾಫ, ಮಹ್ಮದ ನದಾಫ, ಅಪ್ಪಸಾಬ ನದಾಫ, ರಹಿಮಾನಸಾಬ ನದಾಫ, ರಾಜೇಸಾಬ ನದಾಫ, ಶಬ್ಬೀಅಹಮ್ಮದ ನದಾಫ, ಇಸಾಕಹ್ಮದ ನದಾಫ, ಬಶಿರಸಾಬ ನದಾಫ, ಅಮೀನಸಾಬ ನದಾಫ ಮತ್ತಿತರರು ಇದ್ದರು.
Check Also
ಕಲ್ಲೋಳಿ ಪಟ್ಟಣದಲ್ಲಿ ೭೮ ನೇ ಧ್ವಜಾರೋಹಣ ನೆರವೇರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ
Spread the love *ಮೂಡಲಗಿ*- ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಹೋರಾಡಿದ ಮಹಾನ್ ಪುರುಷರ ತತ್ವಾದರ್ಶಗಳು ಇಂದಿಗೂ ಪ್ರಸ್ತುತವಾಗಿದ್ದು, ಅಂತಹ ಆದರ್ಶ …