ಅಥಣಿ :ಕೊರೋನಾ ಎರಡನೆ ಅಲೆ ಹೋಡೆತಕ್ಕೆ ಕರ್ನಾಟಕದೆಲ್ಲೆಡೆ ಸೊಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಹೊಸ ಮಾರ್ಗಸುಚಿ ಅನುಸರಿಸುವಂತೆ ಅಥಣಿ ಪಟ್ಟಣದ ತರಕಾರಿ ವ್ಯಾಪಾರಸ್ಥರಿಗೆ ಶಂಕರ ನಗರದ ಉದ್ಯಾನ ವನದಲ್ಲಿ ಪ್ರತ್ಯೆಕ ಸ್ಥಳ ನಿಗದಿಪಡಿಸಿದ ಅಥಣಿ ಪುರಸಭೆ,ಹಾಗೂ ತಾಲೂಕು ಆಡಳಿತದ ಕ್ರಮಕ್ಕೆ ತರಕಾರಿ ವ್ಯಾಪರಸ್ಥರು ಆಕ್ರೋಶ ವ್ಯಕ್ತಪಡಿಸಿದರು
ಹಳೆಯ ತರಕಾರಿ ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ನಾವು ವ್ಯಾಪಾರ ಮಾಡುತ್ತಿದ್ದು ಶಂಕರ ನಗರದಲ್ಲಿ ನಿಗದಿಪಡಿಸಿದ ಸ್ಥಳದಲ್ಲಿ ನೀರು ಮತ್ತು ನೇರಳಿನ ಯಾವ ವ್ಯವಸ್ಥಯೂ ಇಲ್ಲ ವ್ಯಾಪಾರಸ್ಥರು ಆಕ್ರೋಶ ವ್ಯಕ್ತಪಡಿಸಿದರು
ತರಕಾರಿ ವ್ಯಾಪಾರಸ್ಥರ ಪರವಾಗಿ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಮಾತನಾಡಿ ಹಳೆ ತರಕಾರಿ ಮಾರುಕಟ್ಟೆ, ಶಂಕರ ನಗರ, ಮತ್ತು ವಿಕ್ರಂಪೂರ, ಬಡಾವಣೆ, ಸೇರಿದಂತೆ ಮೂರು ಕಡೆಗಳಲ್ಲಿ ತರಕಾರಿ ವ್ಯಾಪಾರಕ್ಕೆ ಅನುವು ಮಾಡಿಕೊಡುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದರು
ಇನ್ನೂ ಪುರಸಭೆ ಮುಖ್ಯಾಧಿಕಾರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ವ್ಯಾಪಾರಸ್ಥರಿಗೆ ಅನೂಕೂಲು ಮಾಡಿಕೊಡುವುದಾಗಿ ಅಥಣಿ ಪಿಎಸ್ಐ ಕುಮಾರ್ ಹಾಡಕರ್ ಪರಿಸ್ಥಿತಿ ತಿಳಿಗೊಳಿಸಿದರು.