ಅಥಣಿ: ಸ್ವಾತಂತ್ರ್ಯ ನಮಗೆ ಸಿಕ್ಕ ಹಕ್ಕು ಅದನ್ನು ಯಶಸ್ವಿಯಾಗಿ ಪ್ರತಿಯೊಬ್ಬರು ಅನ್ವಿಸಿಕೊಳ್ಳಿ, ಸ್ವಾತಂತ್ರ್ಯದಲ್ಲಿ ಸಂವಿದಾನವಿದೆ ಅದನ್ನಗೌರವಿಸಬೇಕು ಎಂದು ನಿಲಯ ಮೇಲ್ವಿಚಾರಕಿ ಪಿ ಎಸ್ ಮಲಗೌಡರ ಹೇಳಿದರು.
ನಗರದಲ್ಲ್ಲಿ ಜರುಗಿದ ಗಣರಾಜ್ಯೋತ್ಸವ ನಿಮಿತ್ಯ ಮೇಟ್ರಿಕ್ ನಂತರ ಬಾಲಕಿಯರ ವಸತಿ ನಿಲಯದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಾತನಾಡಿ, ನಿಲಯಾರ್ಥಿಗಳ ಸಾಧನೆ ಸದಾ ಶ್ರೀ ರಕ್ಷೆ ನಮಗೆ. ಪ್ರತಿಯೊಬ್ಬ ವಿಧ್ಯಾರ್ಥಿನಿಯು ಸ್ಪರ್ಧಾತ್ಮಕತೆ ಕಡೆ ಗಮನ ಹರಿಸಿದರೆ ಸಾಕು ಸರಕಾರದ ಮಹತ್ವಾಕಾತ್ವಾಕ್ಷೆ ಯೋಜನೆ ಇಡೆರುವದು. ಸಂವಿದಾನದಲ್ಲಿ ನಮಗೆ ಸಿಗುವ ಸಹಾಯ ಸೌಲಭ್ಯಗಳ ಅರಿವು ನಮಗಾಗ ಬೇಕು ಎಂದರು.
ಕಾರ್ಯಕ್ರಮದಲ್ಲಿ ಜಯಶ್ರೀ ಬಂಡಗರ, ಕಸ್ತೋರಿ ಗಸ್ತಿ, ಬಾಗವ್ವ ಚಿನಗುಂಡಿ, ಕಸ್ತೋರಿ ಪಾಟೀಲ ಹಾಗೂ ನಿಲಯದ ನಿಲಯಾತ್ರಿಗಳು ಹಾಜರಿದ್ದರು.