ಅಥಣಿ: ನಿಲಯಾರ್ಥಿಗಳಿಗೆ ಸಿಗುವ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಮುಟ್ಟಿಸುವ ಕಾರ್ಯ ನಮ್ಮದಾಗಿದೆ, ಅದರ ಸದುಪಯೋಗಮಾಡಿಕೊಂಡು ಉನ್ನತ ವ್ಯಾಸಂಗಹೊಂದಿ ಜೀವನ ಪಾವನ ಮಾಡಿಕೋಳ್ಳುವ ಕಾರ್ಯ ನಿಲಯಾರ್ಥಿಗಳ ಮೇಲಿದೆ ಎಂದು ಮೇಲ್ವಿಚಾರಕಿ ಪಿ ಎಸ್ ಮಲಗೌಡರ ಹೇಳಿದರು.
ಅವರು ನಗರದಲ್ಲಿ ಜರುಗಿದ ಪಾಲಕರ ಸಭೆಯಲ್ಲಿ ಮಾತನಾಡಿ, ಸಾಮಾಜಿಕ ನೆಲೆ ಗಟ್ಟಿನಲ್ಲಿ ಬದುಕ ಬೇಕಾಗಿದೆ, ಸ್ಪರ್ಧಾತ್ಮಕ ಯುಗದಲ್ಲಿ ತಮ್ಮ ಮಕ್ಕಳು ಯಶಸ್ಸು ಸಾಧಿಸಬೇಕಾದರೆ ನಿರಂತರ ಪ್ರಯತ್ನ ಹಾಗೂ ಮಾರ್ಗದರ್ಶನದ ಅವಶ್ಯಕತೆ ಇದೆ. ಸರಕಾರ ಕೊಟ್ಟಿರುವ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ನಮ್ಮಯ ಸಾಧನೆ ಸಾಧಿಸಬೇಕು ಎಂದು ಕಿವಿಮಾತು ಹೇಳಿದರು.
ಪಾಲಕರ ಸಭೆಯಲ್ಲಿ ಶಿವಾನಂದ ಭಾರತಿ ಕಾಲೇಜಿನ ಪ್ರಾಚಾರ್ಯ ಎಸ್ ಜೆ ಕಮತಗಿ, ಎಸ್.ಎಮ್.ಎಸ್. ಕಾಲೇಜನ ಜಂಬಗಿ, ಪಾಲಕರಾದ ಶಂಕರ ಮಾಳಿ, ದೀಲಿಪ ಗಣಾಚಾರ್ಯ, ಪದ್ಮನ್ನಾ ಪೂಜಾರ, ರಾಜು ಯಾದವ, ರಾವಸಾಬ ಶೆಜೋಳಿ, ಸುರೇಶ ಬೂತನಾಳ, ಕಲ್ಮೇಶ ಬಿರಾದಾರ, ಸುರೇಶ ಬಾನಿ, ಶರಣಯ್ಯ ಮಠಪತಿ, ಮಹದೇವ ಮಠಪತಿ, ಮಹದೇವ ಬನ್ನೂರ, ಮುರಗೆಪ್ಪನಿಲಜಗಿ, ರಾಜೇಶ ಕಾಂಬಳೆ ಮತ್ತಿತರು ಉಪಸ್ಥಿತರಿದ್ದರು.