Breaking News
Home / ಬೆಳಗಾವಿ / ಗ್ರಾಮೀಣ ಪ್ರದೇಶಗಳು ಅಭಿವೃದ್ಧಿಯಾಗಬೇಕು : ಶಾಸಕ ಮಹೇಶ್ ಕುಮಟಳ್ಳಿ

ಗ್ರಾಮೀಣ ಪ್ರದೇಶಗಳು ಅಭಿವೃದ್ಧಿಯಾಗಬೇಕು : ಶಾಸಕ ಮಹೇಶ್ ಕುಮಟಳ್ಳಿ

Spread the love

ಅರಟಾಳ ; ಗ್ರಾಮೀಣ ಪ್ರದೇಶಗಳು ಅಭಿವೃದ್ಧಿಯಾಗಬೇಕು ಎನ್ನುವ ಉದ್ದೇಶದಿಂದ ಸರ್ಕಾರ ಯೋಜನೆಗಳನ್ನು ಜಾರಿಗೆ ತಂತಿದೆ. ಸರ್ಕಾರದ ಯೋಜನೆಗಳು ಯಶಸ್ವಿಯಾಗಲು ಸಾರ್ವಜನಿಕರ ಸಹಕಾರ ಮುಖ್ಯವಾಗಿದೆ. ಜನರ ಮೂಲಭೂತ ಸಮಸ್ಯೆಗಳ ನಿವಾರಣೆಗೆ ಹೆಚ್ಚಿನ ಅದ್ಯತೆ ನೀಡುವ ಮೂಲಕ ಕ್ಷೇತ್ರದ ಅಭಿವೃದ್ಧಿಯತ್ತ ಗಮನ ಹರಿಸುವುದಾಗಿ ಅಥಣಿ ಶಾಸಕ ಮಹೇಶ ಕುಮಠಳ್ಳಿ ಹೇಳಿದರು.

ಅವರು ಶನಿವಾರ ಸಮೀಪದ ಬಾಡಗಿ ಗ್ರಾಮದ ಶ್ರೀ ದಾನ್ನಮ್ಮದೇವಿ ದೇವಸ್ಥಾನದ ಸಮುಧಾಯ ಭವನದ ಕಟ್ಟಡಕ್ಕೆ ಗುದ್ದಲಿ ಪೂಜೆ ಸಲ್ಲಿಸಿ ಮಾತನಾಡಿ, ತಾಲೂಕಿನ ಅಭಿವೃದ್ದಿಗಾಗಿ ಹಗಲಿರುಳು ಶ್ರಮೀಸುತ್ತೆನೆ. ಗ್ರಾಮದ ದಾನಮ್ಮದೇವಿ ಕಟ್ಟಡಕ್ಕೆ ೧೫ ಲಕ್ಷ ರೂ ಮಂಜೂರಾತಿಯಾಗಿದೆ. ಉತ್ತಮ ಗುಣಮಟ್ಟದ ಕೆಲಸವನ್ನು ಶಿಘ್ರವಾಗಿ ಪ್ರಾರಂಭಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಬೇಕು. ಹಳ್ಳಿಗಳ ಅಭಿವೃದ್ಧಿಯಲ್ಲಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ಬಂದಿವೆ. ಕೊರೊನ್ ವೈರಸ್ ಬಗ್ಗೆ ಸಾರ್ವಜನಿಕರಲಿ ಭಯಬೇಡಾ ಎಚ್ಚರವಿರಲಿ. ಜ್ವರ, ಕೆಮ್ಮು, ಎದೆನೂವು ಕಾಣಿಸಿಕೊಂಡರೆ ತಕ್ಷಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಿ ತಪಾಸನೇ ಮಾಡಿಸಿಕೊಳ್ಳಿ. ಮನೆಯಲ್ಲಿ ಎಲ್ಲರು ಕಾಯಿಸಿ ಆರಿಸಿದ ನೀರು ಕುಡಿಯಯುವುದರಿಂದ ವೈರಸ್‌ಗಳು ನಾಶವಾಗುತ್ತವೆ ಎಂದರು.

ತೆಲಸಂಗ ಜಿಪಂ ಸದಸ್ಯ ಗುರಪ್ಪ ದಾಶ್ಯಾಳ, ಕೊಕಟನೂರ ಜಿಪಂ ಸದಸ್ಯ ಸಿದ್ದಪ್ಪ ಮುದಕನ್ನವರ, ನಿಂಗಪ್ಪ ನಂದೇಶ್ವರ, ಅಮೂಲ ನಾಯಿಕ, ಪ್ರಕಾಶ ಮೋರೆ, ಚವ್ಹಾನ ವಕೀಲರು, ಸಂಗಯ್ಯ.


Spread the love

About Ad9 Haberleri

Check Also

ಶೈಕ್ಷಣಿಕ ಸುಧಾರಣೆಗೆ ಆದ್ಯತೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

Spread the love   ಬೆಳಗಾವಿ: ‘2024-2028ರ ಅವಧಿಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡುವುದು ನನ್ನ ಉದ್ದೇಶ. …