Breaking News

ಶ್ರೀಶೈಲ ಮಲ್ಲಿಕಾರ್ಜುನನ ಪಾದಯಾತ್ರೆಗೆ ಹೋಗಿ ಬಂದವರಿಗೆ ಡಾ. ಬೇಟಿ

Spread the love


ಮೂಡಲಗಿ:ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ಭಾರತಿ ಕೊಣಿ ಹಾಗೂ ವೈದ್ಯರ ತಂಡ ನಗರದ ಸಮೀಪದ ಶಿವಾಪೂರ ಗ್ರಾಮಕ್ಕೆ ಭೇಟಿ ನೀಡಿದರು.

ಶ್ರೀಶೈಲ ಮಲ್ಲಿಕಾರ್ಜುನನ ಪಾದಯಾತ್ರೆಗೆ ಹೋಗಿ ಬಂದವರಿಗೆ ಕೊರೊನಾ ವೈರಸನ ಮುಂಜಾಗ್ರತಾ ಕ್ರಮವಾಗಿ ಮರಳಿ ಸ್ವ ಗ್ರಾಮಕ್ಕೆ ಆಗಮಿಸಿದ ಪಾದಯಾತ್ರಿಕರನ್ನು ಗ್ರಾಮದ ಹೊರವಲಯದಲ್ಲಿರುವ ಶ್ರೀ ಅಡವಿಸಿದ್ದೇಶ್ವರ ಮಠದಲ್ಲಿ ಎಲ್ಲರನ್ನೂ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದರು.

ನಿನ್ನೆ ಕೊರೊನಾ ವೈರಸನ ಬಗ್ಗೆ ವೈದ್ಯ ಸಿಬ್ಬಂದಿ ಶಿವಲಿಂಗ ಪಾಟೀಲ ಕೊರೊನಾ ವೈರಸ್ ಸೋಂಕು ತಡೆಗಟ್ಟುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದ್ದರು.
ಈ ಸಂದರ್ಭದಲ್ಲಿ ಸ್ಥಳೀಯ ಶಿವನಗೌಡ ಪಾಟೀಲ, ಕರುನಾಡು ಸೈನಿಕ ತರಬೇತಿ ಕೇಂದ್ರ ಸಂಚಾಲಕ ಶಂಕರ ತುಕ್ಕನ್ನವರ , ಪರಪ್ಪ ಪಾಟೀಲ ಹಾಗೂ ಗ್ರಾಮ ಪಂಚಾಯಿತಿಯ ಸದಸ್ಯರುಗಳು ಉಪಸ್ಥಿತರಿದ್ದರು.

ವರದಿ: ಕೆ.ವಾಯ್ ಮೀಶಿ


Spread the love

About Ad9 News

Check Also

ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಕೊಡಿಸಿ: ಡಾ. ಭೀಮಾಶಂಕರ ಎಸ್ ಗುಳೇದ

Spread the love  ರಾಯಬಾಗ: ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಕೊಡಿಸುವುದರ ಮೂಲಕ ಆದರ್ಶ ವ್ಯಕ್ತಿಗಳನ್ನಾಗಿ ರೂಪಿಸಿ ಎಂದು ಬೆಳಗಾವಿ ಎಸ್ …