Breaking News
Home / ಬೆಳಗಾವಿ / ಅಥಣಿಯಲ್ಲಿ ಜನತಾ ಕರ್ಪ್ಯೂಗೆ ಭಾರಿ ಬೆಂಬಲ

ಅಥಣಿಯಲ್ಲಿ ಜನತಾ ಕರ್ಪ್ಯೂಗೆ ಭಾರಿ ಬೆಂಬಲ

Spread the love

ಅಥಣಿ: ಜಾಗತಿಕ ಮಹಾಮಾರಿ ಕೊರೊನಾ ವೈರಸ್ ತಡೆಯಲು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದ ಜನತಾ ಕರ್ಪ್ಯೂ ಅಥಣಿ ಪಟ್ಟಣದಲ್ಲಿ ಯಶಸ್ವಿ ಆಗಿದೆ.

ಬೆಳಗಿನ ಆರುಗಂಟೆ ಇಂದಲೇ ರಸ್ತೆಗಳಲ್ಲಿ ವಾಹನ ಸಂಚಾರ ಇಲ್ಲದೆ ರಸ್ತೆಗಳು ಖಾಲಿ ಖಾಲಿ ಆಗಿದ್ದರೆ ಅಥಣಿ ಪಟ್ಟಣದ ಶಿವಯೋಗಿ ನಗರ,ವಿದ್ಯಾನಗರ,ಶಾಂತಿನಗರ,ಶಂಕರ ನಗರ ಮತ್ತು ನಿಂಬಾಳ್ಕರ ಪ್ಲಾಟ್ ಸೇರಿದಂತೆ ಬಹುತೇಕ ಅಥಣಿ ಪಟ್ಟಣದ ಎಲ್ಲ ವಾರ್ಡಗಳು ಜನಸಂಚಾರವಿಲ್ಲದೆ ಬಣಗುಡುತ್ತಿದ್ದವು.ಸುತ್ತಲಿನ ಇಪ್ಪತ್ತಕ್ಕೂ ಹೆಚ್ಚು ಹಳ್ಳಿಗಳಿಗೆ ಕೇಂದ್ರ ಬಿಂದುವಾದ ಅಥಣಿ ಮಾರುಕಟ್ಟೆ ಇಂದು ಸಂಪೂರ್ಣ ಸ್ಥಬ್ದವಾಗಿತ್ತು.ಖಾಸಗಿ ವಾಹನಗಳು ಮತ್ತು ಕೆಎಸ್ ಆರಟಿಸಿ ಬಸ್ ಸಂಚಾರ ಇಲ್ಲದೆ ವಿವಿಧ ಗ್ರಾಮಗಳಿಂದ ಜನರು ಬರದೆ ನಿತ್ಯದ ವಹಿವಾಟು ನಿಂತು ಹೋಗಿದ್ದು ಮಾರುಕಟ್ಟೆಯಲ್ಲಿ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದ ದೃಶ್ಯ ಸರ್ವೆ ಸಾಮಾನ್ಯ ಆಗಿತ್ತು.

ಅಗತ್ಯ ವಸ್ತುಗಳಾದ ಹಾಲು,ತರಕಾರಿ, ದಿನಪತ್ರಿಕೆ ಹೊರತುಪಡಿಸಿದರೆ ಔಷಧ ಮಳಿಗೆಗಳು ಮತ್ತು ವೈದ್ಯಕೀಯ ಸೇವೆ ಲಭ್ಯ ಇದ್ದರೂ ಕೂಡ ಓಪಿಡಿಗಳನ್ನು ಬಂದ್ ಮಾಡಲಾಗಿದ್ದರಿಂದ ಅಲ್ಲಲ್ಲಿ ಕೆಲವು ಜನ ರಸ್ತೆಗೆ ಇಳಿದದ್ದು ಬಿಟ್ಟರೆ ಜನತಾ ಕರ್ಪ್ಯೂ ಗೆ ಭಾರಿ ಜನಬೆಂಬಲ ವ್ಯಕ್ತವಾಯಿತು.

ಸಂಜೆಯ ವೇಳೆಗೆ ಜನತಾ ಕರ್ಪ್ಯೂ ಯಶಸ್ವಿ ಆದ ಬೆನ್ನಲ್ಲೆ ದೇಶದ ಗಡಿಕಾಯುವ ಯೋಧರು,ಜೀವ ಉಳಿಸುವ ವೈದ್ಯಕೀಯ ಸಿಬ್ಬಂದಿ ಮತ್ತು ಸ್ವಚ್ಚತೆ ಕಾಪಾಡುವ ಪೌರ ಕಾರ್ಮಿಕರು ಹಾಗೂ ನೈಜ ವರದಿಗಳನ್ನು ಬಿತ್ತರಿಸಲು ಪ್ರಾಣವನ್ನೆ ಪಣಕ್ಕಿಟ್ಟು ಕೆಲಸ ಮಾಡುವ ಪತ್ರಕರ್ತರಿಗೆ ಕನಕ ನಗರದಲ್ಲಿ ಪುಟ್ಟ ಮಕ್ಕಳಿಂದ ಚಪ್ಪಾಳೆ ತಟ್ಟೆ ಗಂಟೆ ಜಾಗಟೆ ಬಾರಿಸಿ ಅಭಿನಂದನೆ ಅರ್ಪಿಸಿದ್ದು ಕಂಡುಬಂತು. ಈ ಸಂಧರ್ಭದಲ್ಲಿ ಸಂಗೀತಾ ಬಾದವಾಡಗಿ. ರಾಹುಲ ಹೆಗಡ್ಡೆ. ಪ್ರಿಯಾ ಬಾದವಾಡಗಿ. ರಾದಾ ಬಾದವಾಡಗಿ. ಅಭಿಶೇಕ್. ಅಮ್ರತಾ. ಅನುದೀಪ್ಪಾ.ಅರ್ಪಿತ. ಮತ್ತಿತರು ಉಪಸ್ಥಿತಿ ಇದ್ದರು


Spread the love

About Ad9 Haberleri

Check Also

ಶೈಕ್ಷಣಿಕ ಸುಧಾರಣೆಗೆ ಆದ್ಯತೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

Spread the love   ಬೆಳಗಾವಿ: ‘2024-2028ರ ಅವಧಿಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡುವುದು ನನ್ನ ಉದ್ದೇಶ. …