Breaking News
Home / ಬಾಗಲಕೋಟ / ಭೂಲೋಕದಲ್ಲಿ ಕೈಲಾಸವೆನಿಸಿರುವ ಶ್ರೀಶೈಲವು ಧಾರ್ಮಿಕ ಪುಣ್ಯ ಕ್ಷೇತ್ರವಾಗಿದೆ

ಭೂಲೋಕದಲ್ಲಿ ಕೈಲಾಸವೆನಿಸಿರುವ ಶ್ರೀಶೈಲವು ಧಾರ್ಮಿಕ ಪುಣ್ಯ ಕ್ಷೇತ್ರವಾಗಿದೆ

Spread the love

ಬಂಡಿಗಣ 23:ಭೂಲೋಕದಲ್ಲಿ ಕೈಲಾಸವೆನಿಸಿರುವ ಶ್ರೀಶೈಲವು ಧಾರ್ಮಿಕ ಪುಣ್ಯ ಕ್ಷೇತ್ರವಾಗಿದೆ. ಮಲ್ಲಿಕಾರ್ಜುನ, ಭ್ರಮರಾಂಬಾ ದೇವಿಯ ದರ್ಶನಕ್ಕೆ ಭಕ್ತಿ ಬಾವದಿಂದ ಬಂದರೆ ಸಕಲ ಸೌಬಾಗ್ಯಗಳು ದೊರೆತು ಮನಸ್ಸಿಗೆ ಶಾಂತಿ ನೆಮ್ಮದಿ ಸಿಗುವದು ಎಂದು ಬಂಡಿಗಣ ಯ ಚಕ್ರವರ್ತಿ ದಾನೇಶ್ವರ ಶ್ರೀಗಳು ಹೇಳಿದರು.

ಅವರು ಶ್ರೀಶೈಲದ ಅಡಕೇಶ್ವರ ದಲ್ಲಿ ಬಂಡಿಗಣ ಮಠದಿಂದ 8 ದಿನಗಳ ಕಾಲ ನಿರಂತರ ಸರ್ವ ಭಕ್ತಾದಿಗಳಿಗೆ ಅನ್ನದಾಸೋಹ ಏರ್ಪಡಿಸಿ ಭಕ್ತರನ್ನು ಉದ್ದೇಶಿಸಿ ಮಾತನಾಡಿ ಕಾಕವಿದ್ಯೆಯವರ ಸಂಘ, ಸುಳ್ಳು ತುಡುಗ ಬಿಟ್ಟು ಧರ್ಮದ ದಾರಿಯಲ್ಲಿ ನಡೆದು ಭಕ್ತ ವತ್ಸಲನಾದ ಮಲ್ಲಿಕಾರ್ಜುನ ದೇವರನ್ನು ಪೂರ್ಣವಾಗಿ ನಂಬಿ ನಡೆದರೆ ಕರೋನ ದಂತ ಭಯಾನಕ ರೋಗ ಕಷ್ಟಗಳು ಒದಗುವದಿಲ್ಲ. ದೇವರು ಆಡಂಬರದ ಭಕ್ತಿಗೆ ಒಲಿಯದೆ ಪ್ರಹ್ಲಾದನಂತ ನಿಜವಾದ ಭಕ್ತಿಗೆ ಒಲಿಯುತ್ತಾನೆ. ದೇವರಿಗೆ ಬರುವಾಗ ಯಾವುದಕ್ಕೆ ಹೆದರದೆ ಭಕ್ತಿಯಿಂದ ನಾಮಸ್ಮರಣೆ ಮಾಡುತ್ತಾ ಹೆಗಲ ಮೇಲೆ ಕಂಬಿ ಮಲ್ಲಯ್ಯನನ್ನು ಹೊತ್ತುಕೊಂಡು ಬಂದರೆ ಯಾವ ತೊಂದರೆ ಆಗುವದಿಲ್ಲ. ಭಕ್ತಿ ಮಾಡಬೇಕಾದರೆ ಸಿರಿ ಸಂಪತ್ತು, ಶಿಕ್ಷಣದ ಅವಶ್ಯಕತೆ ಇಲ್ಲ ಭಕ್ತಿ ಮಾರ್ಗ ದಲ್ಲಿ ಸಾಗಿದರೆ ದೇವರು ಒಲಿಯುತ್ತಾನೆ, ನಮ್ಮ ಜೀವನದ ಕಷ್ಟ ಕಾಲದಲ್ಲಿ ಸಿರಿ ಸಂಪತ್ತು ಬಂದು ಬಳಗ ಕಾಯದೆ ಧರ್ಮ ನಮ್ಮಲ್ಲಿದ್ದರೆ ಶಿವಾ ನಮ್ಮನ್ನು ಸದಾವಕಾಲ ರಕ್ಷಣೆ ಮಾಡುತ್ತಾನೆ. ಶ್ರೀಶೈಲ ಕ್ಷೇತ್ರದಲ್ಲಿ ಅನೇಕ ಮಹಾನ ಋಷಿ ಮುನಿ ಸಾದು ಸಂತರು ಶಂಕರಾಚಾರ್ಯರು ತಪಸ್ಸು ಮಾಡಿದ ಜಾಗೃತ ಸ್ಥಳವಿದು ಹಾಗೂ ರಾಮ ಸೀತೆ ವನವಾಸವು ಕೂಡಾ ಮಾಡಿದ ಪುಣ್ಯ ಭೂಮಿಯಿದು. ಕುಂತಿದೇವಿ ಮಕ್ಕಳಿಗೆ ಒಳ್ಳೆಯ ನೀತಿ ಧರ್ಮದ ಮಾರ್ಗ ಕಲಿಸಿದಂತೆ ನೀವು ಮಕ್ಕಳಿಗೆ ಶಿಕ್ಷಣದ ಜೊತೆ ನೀತಿ ಧರ್ಮದ ದಾರಿ ಕಲಿಸಿರಿ.ಮಠಮಾನ್ಯ ಗಳಿಗೆ ಸದಾವಕಾಲ ಭಕ್ತಿಯಿಂದ ಹೋಗಿ ಸತ್ಸಂಗದಲ್ಲಿ ಕೂಡುವದರಿಂದ ಚಂಚಲವಾದ ಮನಸ್ಸು ಹೋಗಿ ಏಕಾಗ್ರತೆ ಹೊಂದಿ ಆತ್ಮಜ್ಞಾ ನವಾಗುವದು. ನ್ಯಾಯದಲ್ಲಿ ಹಿರಿತನ ಮಾಡುವರು ಯಾವದಕ್ಕೂ ಆಸೇ ಮಾಡದೆ ಸಂಬಂಧ ಹಿಡಿಯದೇ ಸತ್ಯಕ್ಕೆ ನ್ಯಾಯ ಒದಗಿಸಿದರೆ ಪುಣ್ಯ ಪ್ರಾಪ್ತಿಯಾಗುವದು. ಆಸ್ತಿ ಅಧಿಕಾರ ಇದೆ ಎಂದು ಬಡವ ದಿನ ದಲಿತರ ಮೇಲೆ ಅನ್ಯಾಯ ಮಾಡುವದು ಮಹಾಪಾಪ. ನಾವು ಪುಣ್ಯ ಕ್ಷೇತ್ರಗಳಲ್ಲಿ ದಾಸೋಹ ಮಾಡುವದರಿಂದ ಮನಸ್ಸಿಗೆ ಶಾಂತಿ ನೆಮ್ಮದಿ ಸಿಗುವದು. ನಾನು ಉಣ್ಣುವದಕಿಂಥ ಇನ್ನೊಬ್ಬರಿಗೆ ಉಣಬಡಿಸುವದೇ ಶ್ರೇಷ್ಠ.ಭೂಮಿಯ ಮೇಲೆ ಪಾಪ ಹೆಚ್ಚಾಗಿದೇ ದಾಸೋಹ ಸಪ್ತಾಹ ಧಾರ್ಮಿಕ ಕಾರ್ಯಗಳು ನಡೆಯುವದರಿಂದ ಪಾಪ ನಾಶವಾಗಿ ಪುಣ್ಯ ಲಭಿಸುವದು ಎಂದು ಹೇಳಿದರು. ರಾಚಯ್ಯ ಹಿರೇಮಠ ಮಾತನಾಡಿ ಈ ಬ್ರಹತ ಪ್ರಮಾಣದ ದಾಸೋಹ ಮತ್ತು ಭಕ್ತ ಸಮೂಹ ದಾನೇಶ್ವರ ಅಪ್ಪಾಜಿಯವರನ್ನು ನೋಡಿದಾಗ ಮನಸ್ಸಿಗೆ ಮಹಾದಾನಂದವಾಯಿತು.ದಾಸೋಹದ ಅಕ್ಷಯ ಪಾತ್ರೆಯನ್ನು ಹೊಂದಿ ಮಲ್ಲಿಕಾರ್ಜುನನ ಪ್ರತಿರೂಪವೇ ದಾನೇಶ್ವರ ಶ್ರೀಗಳು.ದೇಶಾದ್ಯಂತ ಕರೋನಾ ಭಯಾನಕ ರೋಗದ ಹಾವಳಿ ಇದ್ದರು ಕೂಡಾ ಪಾದಯಾತ್ರಿಕರಿಗೆ ಅನುಕೂಲ ವಾಗಲೆಂದು ದಾಸೋಹ ಏರ್ಪಡಿಸಿದ ಮಹಾನ ಸತ್ಪುರುಷರು.

ದಾಸೋಹದಲ್ಲಿ ಊಟಕ್ಕೆ ಹುಗ್ಗಿ, ಜಿಲೇಬಿ, ಬುಂದೇ, ಹೋಳಿಗೆ, ತುಪ್ಪ, ರೊಟ್ಟಿ ಮೊಸರು ಸೇರಿದಂತೆ ಪಂಚಪಕ್ವಾನದ ಅಡುಗೆಯನ್ನು ಉಣಬಡಿಸಿದರು. ದಾಸೋಹಕ್ಕೆ ಬೇಕಾಗುವ ಎಲ್ಲ ಸಾಮಗ್ರಿಗಳನ್ನು ವಾಹನದಲ್ಲಿ ತಂದು ಭಕ್ತ ಸಮೂಹದೊಂದಿಗೆ ದಾಸೋಹ ನಡಿಸುತ್ತಿದ್ದಾರೆ, ದಾಸೋಹದಲ್ಲಿ 300 ಮಹಿಳೆಯರು 260 ಪುರುಷರು ಭಕ್ತಿ ಸೇವೆಯಲ್ಲಿ ಪಾಲ್ಗೊಂಡಿದ್ದರು. ದಿನಾಲು ಅಡಕೇಶ್ವರ ಸ್ಥಳದಲ್ಲಿ ಅನುಭವ ಹೇಳಿ ಅನುಭವ ಕೇಳಿ ಕಾರ್ಯಕ್ರಮ ನಡೆಯುತ್ತಿತ್ತು. ಪಾತಾಳಗಂಗೆ ದಡದಲ್ಲಿ ಗಂಗಾ ದೇವಿ ಸತ್ಯ ನಾರಾಯಣ, ವರದಶಂಕರ, ಪೂಜೆ ಯನ್ನು ಸುಮಂಗಲಾ ತಾಯಿ ಪಾಟೀಲ ಅವರು ನೇರವೆರಿಸಿದರು.


Spread the love

About Ad9 Haberleri